ಮನೆ ಭಾವನಾತ್ಮಕ ಲೇಖನ ಎಚ್ಚರ ! ಮಾತುಕೊಡುವ ಮುನ್ನ

ಎಚ್ಚರ ! ಮಾತುಕೊಡುವ ಮುನ್ನ

0

ಅದು ತುಂಬಾನೇ ಚಳಿಯ ರಾತ್ರಿ. ಕೋಟ್ಯಾಧಿಪತಿಯೊಬ್ಬ ಹೀಗೆ ಹೊರಗಡೆ ಬಂದಿದ್ದ, ಬೀದಿ ಬದಿ ಕುಳಿತಿದ್ದ ಒಬ್ಬ ಮುದುಕನನ್ನು ಕಂಡು ಮಾತನಾಡಿಸಿದ, “ನೀನು ಯಾವುದೇ ಬೆಚ್ಚನೆಯ ಹೊದಿಕೆ ಇಲ್ಲದೆ ಕುಳಿತಿರುವೆ ನಿನಗೆ ಚಳಿಯಾಗುವುದಿಲ್ಲವೇ,?” ಆ ಮುಪ್ಪು ಮುದುಕ ಉತ್ತರಿಸಿದ “ನನ್ನ ಹತ್ತಿರ ಹೊದಿಕೆ ಏನೂ ಇಲ್ಲ ಇದನ್ನು ನಾನು ದಿನನಿತ್ಯ ಅನುಭವಿಸುತ್ತೇನೆ ನನಗೀಗ ಅಭ್ಯಾಸವಾಗಿದೆ”.

ಕೋಟ್ಯಾಧಿಪತಿ ಇರು ನಾನು ಈಗಲೇ ಬಂಗಲೆಗೆ ಹೋಗಿ ನಿನಗೊಂದು ಬೆಚ್ಚಗಿರುವ ಉಣ್ಣೆಯ ಶಾಲು ತಂದು ಕೊಡುತ್ತೇನೆ ಎಂದು ಮನೆಗೆ ಹೋದ ಆ ಶ್ರೀಮಂತ ವ್ಯಕ್ತಿ ತನ್ನ

ಕೆಲಸ ಕಾರ್ಯಗಳಲ್ಲಿ ಮಗ್ನನಾಗಿ ಆ ಬಡವನನ್ನ ಮರೆತಿದ್ದ.

ಬೆಳಗಾಯಿತು ಆ ಶ್ರೀಮಂತನಿಗೆ ಬಡವನ ನೆನಪಾಯ್ತು ತನ್ನ ಕೆಲಸಗಳನ್ನು ಬಿಟ್ಟು ತಕ್ಷಣ ಆ ಬಡವನನ್ನ ಹುಡುಕುತ್ತಾ ಹೊರಟ…

ಅತೀವ ಚಳಿಯ ಕಾರಣದಿಂದ ಆ ಮುಪ್ಪು ಮುದುಕ ಕುಳಿತ ಜಾಗದಲ್ಲೇ ಮೃತನಾಗಿದ್ದ.

ಆದರೆ “ಆ ಬಡವ ತನ್ನ ಕೈಯಲ್ಲಿ ಆತನಿಗಾಗಿ ಒಂದು ಪತ್ರವನ್ನೂ ಬರೆದಿಟ್ಟಿದ್ದು ಅದರಲ್ಲಿ ಹೀಗೆ ಬರೆದಿದ್ದ ನನ್ನ ಹತ್ತಿರ ಯಾವುದೇ ಬೆಚ್ಚನೆಯ ಹೊದಿಕೆ ಇಲ್ಲದಿದ್ದಾಗ ಚಳಿಯೊಂದಿಗೆ ಮುಖ ಮುಖಿಯಾಗಿ ಎದುರುಗೊಳ್ಳುವ ಮಾನಸಿಕ ಶಕ್ತಿ ಇತ್ತು ಆದರೆ ನೀವು ಯಾವಾಗ ನನಗೆ ಬೆಚ್ಚನೆಯ ಹೊದಿಕೆ ಕೊಟ್ಟು ಸಹಾಯ ಮಾಡುವ ಆಸೆ ಹುಟ್ಟಿಸಿದಿರೋ  ಆಗ ನನ್ನ ಮನಸ್ಸು ವಿಚಲಿತವಾಗಿ ಚಳಿಯ ಜೊತೆ ಹೋರಾಡುವ ಮನಃ ಶಕ್ತಿ ಕಳೆದು ಹೋಯಿತು ಹಾಗಾಗಿ ನಾನು  ನೀವು ಕೊಟ್ಟ ಮಾತು ಉಳಿಸಿಕೊಳ್ಳಲಾಗದಿದ್ದರೆ ಯಾರಿಗೂ ಮಾತು ಕೊಡಬೇಡಿ ಆ ಮಾತು ನಿಮಗೆ ಕೇವಲ ಮಾತು ಮಾತ್ರ ಅದೇ ಮಾತು ಕೆಲವರಿಗೆ ಪ್ರಾಣ ಎಂಬುದನ್ನು ಮರೆಯಬೇಡಿ”.

ಹೌದು ಸ್ನೇಹಿತರೆ ಯಾರಿಗಾದರೂ ನೀವು ಮಾತನ್ನ ಕೊಡುವ ಮುನ್ನ ಒಮ್ಮೆ ಎಚ್ಚರ ವಹಿಸಿ. ನಿಮ್ಮ ಮಾತು ಕೇವಲ ನಿಮಗೆ ಮಾತಾಗಿರಬಹುದು ಆದರೆ ಅದು ಮತ್ತೊಬ್ಬರಿಗೆ ಜೀವವಾಗಿರಬಹುದು. ನೀವು ಕೊಟ್ಟ ಮಾತನ್ನು ನೆರವೇರಿಸುವ ತನಕ ಜಾಗೃತರಾಗಿ ಇರಬೇಕಾದದ್ದು ನಮ್ಮ ಕರ್ತವ್ಯ  ಏಕೆಂದರೆ ನಮ್ಮ ಅಜಾಗರೂಕತೆಯಿಂದಾಗಿ ನಾವು ಕೊಟ್ಟ ಮಾತನ್ನು ನೆರವೇರಿಸದೆಯೇ ಇದ್ದಂತಹ ಸಂದರ್ಭದಲ್ಲಿ  ನಾವು ಕೊಟ್ಟ ಮಾತಿತು ನಮಗೆ ತಿಳಿಯದೆ ಬೇರೆಯವರ ಜೀವ ಅಥವಾ ಅವರ ಜೀವನಕ್ಕೆ ಸಂಬಂಧಪಟ್ಟಂತಹ ಭಾವನಾತ್ಮಕವಾದ ಎಷ್ಟೋ ವಿಚಾರಗಳು ಅದರಲ್ಲಿ ಅಡಕವಾಗಿರುತ್ತದೆ.

ನಾವು ಮಾತು ಮುರಿದರೆ  ಕೆಲವೊಮ್ಮೆ ಆ ಪವಿತ್ರ ಬಂಧ ಸ್ನೇಹ ಗಳನ್ನೇ ನಾವು ಕಳೆದುಕೊಳ್ಳಬೇಕಾಗುತ್ತದೆ ಅದಕ್ಕೆ ಏನು ಸ್ನೇಹಿತರೇ ಹಿರಿಯರು ಮಾತು ಬಂಗಾರ ಮೌನ ಬೆಳ್ಳಿ ಎಂದು ಹೇಳುತ್ತಿದ್ದದ್ದು. ಮಾತಾಡುವ ಮುನ್ನ ಆಲೋಚಿಸಬೇಕಾದದ್ದು ಆಲೋಚಿಸಿ ಆಡಿದ ಮಾತನ್ನು ನಡೆಸಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ.

ಮಾತು ಕೊಟ್ಟು ಅದನ್ನು ನೆರವೇರಿಸದೆ ಇದ್ದಾಗ ನಮಗೆ ಸ್ವತಃ ಮಾನಸಿಕವಾಗಿ 1ರೀತಿಯ ಸಂಕಟ ಕಾಡಲು ಶುರುವಾಗುತ್ತದೆ ಒಮ್ಮೊಮ್ಮೆ ಮಾತು ಕೊಟ್ಟವರಿಗೆ ಮುಖ ತೋರಿಸಲು ನಾವು ಹಿಂಜರಿಯುವಂತಹ ಪರಿಸ್ಥಿತಿ ಬಂದೊದಗುತ್ತದೆ. ಇದೇ ಮಾತನ್ನು ನಂಬಿಕೊಂಡು ಬಂದಿರುವಂತಹ ಜೀವ ಜೀವವನ್ನೇ ಬಿಡಬಹುದು ಜೀವನಕ್ಕಾಗಿ ಹಾತೊರೆಯಬಹುದು ನಿಮ್ಮ ಸಹಾಯ ಅವರ ಬಾಳಲ್ಲಿ ಅತ್ಯಮೂಲ್ಯವಾದದಾಗಿರ ಬಹುದು. ಹಾಗಾಗೀ ಮಾತನಾಡುವ ಮುನ್ನ ಹಾಗೂ ಮಾತು ಕೊಟ್ಟ ನಂತರ ಎಚ್ಚರ ಎಚ್ಚರ ಎಚ್ಚರ..

ಹಿಂದಿನ ಲೇಖನಇಬ್ಬರು ದ್ವಿಚಕ್ರವಾಹನ ಕಳ್ಳರ ಬಂಧನ: ರೂ.5 ಲಕ್ಷ ಮೌಲ್ಯದ 9 ದ್ವಿಚಕ್ರವಾಹನ ವಶ
ಮುಂದಿನ ಲೇಖನಹಿಂದೂಗಳನ್ನು ಅವಮಾನಿಸುವವರನ್ನು ಗುಂಡಿಕ್ಕಿ ಕೊಲ್ಲಿ: ಈಶ್ವರಪ್ಪ