ಮನೆ ರಾಜ್ಯ ಮಲಗಿದ್ದಾಗಲೇ ಹೃದಯಾಘಾತ: ಹಲಸೂರು ಗೇಟ್ ಠಾಣೆಯ ಎಎಸ್ಐ ಸಾವು

ಮಲಗಿದ್ದಾಗಲೇ ಹೃದಯಾಘಾತ: ಹಲಸೂರು ಗೇಟ್ ಠಾಣೆಯ ಎಎಸ್ಐ ಸಾವು

0

ಬೆಂಗಳೂರು: ಕೆಲಸ ಮುಗಿಸಿ ಮನೆಗೆ ಹೋಗಿ ಮಲಗಿದ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯ ಎಎಸ್’ಐ ಮಲಗಿದ್ದ ರೀತಿಯಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Join Our Whatsapp Group

ಆನಂದ್ ಕುಮಾರ್ ಮೃತ ಎಎಸ್ಐ. ರಾತ್ರಿ ಪಾಳಿ ಕೆಲಸ ಮಾಡಿ ನಾಗರಬಾವಿಯಲ್ಲಿರುವ ಮನೆಗೆ ತೆರಳಿ ಮಲಗಿದ್ದರು. ಅವರನ್ನು ಮನೆಯವರು ಏಳಿಸಲು ಮನೆಯವರು ಪ್ರಯತ್ನ ಮಾಡಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದಿದ್ದಾಗ ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮಲಗಿದ್ದಾಗಲೇ ಆನಂದ್ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.