ಮನೆ ಜ್ಯೋತಿಷ್ಯ ಹೃದಯ ವ್ಯಾಧಿ

ಹೃದಯ ವ್ಯಾಧಿ

0

 ಪ್ರಾಣಾಯಾಮ : ನಿತ್ಯ ಪ್ರಾಣಯಾಮನ ಜೊತೆಗೆ ಬ್ರಹ್ಮರೀ ಅನುಲೋಮ ವಿಲೋಮ ಕಪಾಲಿ ಬಾತಿ ಪ್ರಾಣಾಯಾಮ ಮಾಡುವುದು ಸೂಕ್ತ

ವ್ಯಾಯಾಮದಿಂದ:

    ಸೈಕ್ಲಿಂಗ್,ಜಾಕಿಂಗ್,ಸ್ವಿಮ್ಮಿಂಗ್ ಮುಂತಾದ ಕ್ರೀಡೆ ಚಟುವಟಿಕೆ ತೊಡಗಿಸಿಕೊಂಡಷ್ಟು ನಮ್ಮ ಜೀವನಗುಣಮಟ್ಟ ಸುಧಾರಿಸುತ್ತದೆ. ಯಾವುದಕ್ಕೂ ತಜ್ಞರ ಸಲಹೆಯನ್ನು ಪಡೆದು ಆರಂಭಿಸಬೇಕು.ಹೃದಯ ಬಲಹೀನವಾದವರಿಗೆ ಈ ಕ್ರೀಡೆ ಯೋಗ್ಯವಲ್ಲ.ಅವರಿಗೆ ನಡಿಗೆಯೇ ಹೆಚ್ಚು ಉಪಯುಕ್ತ. ಆನಂತರ ಸರಳ ವ್ಯಾಯಾಮ, ಜಾಗಿಂಗ್ ಅಥವಾ ನಡಿಗೆಯನ್ನು ಒಮ್ಮೆಲೇ ವೇಗವಾಗಿ ಆರಂಭಿಸಬಾರದು.ಮೊದಲು ನಿಧಾನವಾಗಿ ಆರಂಭಿಸಿ ಆನಂತರ ವೇಗ ಪಡೆಯಬೇಕು. ಕೈಕಾಲು, ಬೆನ್ನು ಉದರದ ನ್ನಾಯುಗಳು ಸಡಿಲಗೊಳ್ಳುತ್ತವೆ. ಪ್ರತಿದಿನ 40 ನಿಮಿಷಕಾಲ ಅಥವಾ 10,000 ಹೆಜ್ಜೆ ನಡಿಗೆ ಇರಬೇಕು. ನಡಿಗೆಯಲ್ಲಿ ಬೆವರು ಬಂದರೆ ಉತ್ತಮ.

      ವ್ಯಾಯಾಮ ವಾರಕ್ಕೆ 3-4ಬಾರಿ 10 ರಿಂದ 30 ನಿಮಿಷ ಕಾಲ ಮಾಡಿ

     ವ್ಯಾಯಾಮದ ಮೊದಲು ಆನಂತರ ಗಟ್ಟಿಯಾದ ಆಹಾರ 2:00 ಅವಧಿಯೊಳಗೆ ತೆಗೆದುಕೊಳ್ಳಬಾರದು.

    ವ್ಯಾಯಾಮ ಕಾಲದಲ್ಲಿ ಎದೆ ನೋವು,ಹೃದಯಬಡಿತ, ವ್ಯತ್ಯಾಸ, ಕತ್ತು ಬಿಗಿಯಾಗುವುದು ಉಸಿರಾಟ ತೊಂದರೆ, ನಿಶಕ್ತಿ, ಸುಸ್ತು, ವಾಂತಿಯಾದರೆ ತಕ್ಷಣ ತಜ್ಞರನ್ನು ಸಂಪರ್ಕಿಸಬೇಕು.

 ಆಹಾರ ಪತ್ಯಗಳು :

 ಕೆಟ್ಟ ಕೊಬ್ಬು ಪ್ರತಿ 100 ಗ್ರಾಂ ಗೆ  ಗ್ರಾಂಗಳಲ್ಲಿ

 ತೆಂಗಿನಕಾಯಿ -90 ಪ್ಲಾಮ್ ಎಣ್ಣೆ -45 ವನಸ್ಪತಿ -24 ಆಲೀವ್ -13 ಕಡಲೆಕಾಯಿ- 24 ಸಾಸಿವೆ -8 ಹತ್ತಿ ಬೀಜ – 22 ಸೂರ್ಯಕಾಂತಿ – 13 ಸೋಯ -15 ಮುಸುಕಿನ ಜೋಳ -12 ಎಳ್ಳು -15 ಬತ್ತದ ಹೊಟ್ಟು-  22

1. ಉಪ್ಪು ಪ್ರತಿದಿನ ಐದರಿಂದ ಆರು ಗ್ರಾಂ ಮಾತ್ರ ತೆಗೆದುಕೊಳ್ಳಿ.ಸೋಡಿಯಂ ಗಿಂತ ಪೊಟಾಕ್ಸಿಯಂ ಉಪ್ಪು ಉತ್ತಮ.

2. ಪ್ರತಿದಿನ ವ್ಯಾಯಾಮದಿಂದ ಐದು ಆರು ಎಂ ಎಂ ರಕ್ತದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಇದು ಉತ್ತಮ ಕೊಬ್ಬು ಹೆಚ್ಚು ಮಾಡಿ.ತೊಂದರೆ ಮಾಡುವ ಕೊಬ್ಬು ಎಲ್. ಡಿ.ಎಲ್ ಕಡಿಮೆಯಾಗುತ್ತದೆ.

3. ನಾರು ಪದಾರ್ಥಗಳು ವಿಟಮಿನ್ ಸಿ,ಇ,ಬಿ -3 ಹೆಚ್ಚು ಸೇವನೆಯು ಒತ್ತಡವನ್ನು ಕಡಿಮೆ ಮಾಡುತ್ತದೆ.

4. ವಿಶೇಷ ಆಹಾರ ನಿಂಬೆ ರಸ, ಬೆಳ್ಳುಳ್ಳಿ,,ಜೇನು,ಈರುಳ್ಳಿ,ಆಮ್ಲ,ಕ್ಯಾಲ್ಸಿಯಂ, ಪೊಟ್ಯಾಶಿಯಂ ಆಹಾರ ಸೇವಿಸಿ.5.  ಹೆಚ್ಚು ನೀರು ಧನಾಸ್ತಕವರಾಗಿ,ಮಾನಸಿಕ,ಯೋಗ ದೈಹಿಕವಾಗಿ ಹೆಚ್ಚು ವಿಶ್ರಮಿಸಿಕೊಳ್ಳಿ

 ಮುದ್ರೆ:

     ಗಣಪ ಮುದ್ರೆ, ಹೃದಯ ಮುದ್ರೆ, ಹೃದಯ ಬಡಿತ ಸರಿಪಡಿಸಲು ಆಕಾಶ.ವರುಣ ಸುರಭಿ ಮುದ್ರೆ.

 ಜ್ಯೋತಿಷ್ಯ ಶಾಸ್ತ್ರದ ರೀತಿ

 ರವಿ ದೂಷಿತವಿರದೆ ಯಾರಿಗೂ ಈ ಯೋಗ ಬಾರದು!

 ಸಿಂಹ ಮತ್ತು ಕುಂಭ ರಾಶಿ ದೂಷಿತವಿರದೆ ಯಾರಿಗೂ ಈ ರೋಗ ಬರದು!

 ಚತುರ್ಥಸ್ಥಾನ ದೂಷಿತವಿರಧೆ ಯಾರಿಗೂ ಈ ರೋಗ ಬರದು!

    ಅನಂತರ ವೃಷಭ, ಸಿಂಹ, ಕನ್ಯಾ, ಮೀನಾ, ಲಗ್ನದವರೇ ಹೆಚ್ಚಾಗಿ ರೋಗದಿಂದ ಬಳರುವರು ಹೃದಯದ ಕಿರೀಟ ಧಮನಿಗಳಿಗೆ ರಕ್ತದ ಪೂರೈಕೆಯ ಕಾರ್ಯ ಕುಂಭ ರಾಶಿಯ ಗುಣಧರ್ಮವಾಗಿರುತ್ತದೆ ಆದ್ದರಿಂದ ಜಾತಕದಲ್ಲಿ ಕುಂಭ ರಾಶಿ ದೂಷಿತವಾಗಿ ರಕ್ತ ಸಂಚಾರ ಏರುಪೇರು ಆಗಿ ಹೃದಯ ವ್ಯಾದಿಯಿಂದ ಆರಂಭವಾಗಿ ಹೃದಯ ರಕ್ತನಾಳ ಶಸ್ತ್ರಕ್ರಿಯೆ ಮಾಡಬೇಕಾಗಿ ಬರುವ ಸಂಭವವಿರುತ್ತದೆ ಭಾವಗಳಲ್ಲಿ ಇಲ್ಲದಿದ್ದರೆ  ಹೃದಯಾಘಾತವಾಗುತ್ತದೆ. ಭಾವಗಳಲ್ಲಿ ಚಿತುರ್ಥಭಾವವೇ ಹೃದಯ ಭಾವ, ಅನಂತರ ದಶಮ ಸ್ಥಾನ.

    ಅನಂತರ ತೀವ್ರ ಮೃತ್ಯುವಿಗೆ ಅಲ್ಪಾಯುವ ಸ್ಥಾನವಾದ ಅಷ್ಟಮ ಸ್ಥಾನ..ಇದರ ನಂತರ ಯಕೃತ್ ದೋಷದಿಂದ ಹೃದಯ ವಿಕಾರ ವುಂಟಾಗುವುದರಿಂದ ಪಂಚಮ ಸ್ಥಾನವನ್ನು ಪರಿಶೀಲಿಸಬೇಕು.

 ಶೋಕ ಭಯದಿಂದ, ಮಾನಸಿಕ ರೋಗಗಳಿಂದ ಹೃದಯಾ ವಿಕಾರ ಉಂಟಾಗುವುದನ್ನು ನೋಡಲು ಲಗ್ನ ಸ್ಥಾನವನ್ನು ಪರಿಶೀಲಿಸಬೇಕು.

 ಈ ರೀತಿಯಾಗಿ ಚತುರ್ಥ, ದಶಮ, ಅಷ್ಟಮ, ಪಂಚಮಿ, 5 ಸ್ಥಾನವನ್ನೂ ಪರಿಶೀಲಿಸಿ, ನಂತರ ಪಿತ್ತ ಪ್ರಕೃತಿಯ ರಾಶಿಗಳಾದ ಮೇಷ, ಸಿಂಹ,ಧನುಷು, ಮತ್ತು ಬುದ್ಧಿಜೀವಿ ರಾಶಿಗಳಾದ ಮಿಥುನ, ತುಲಾ,ಕುಂಭ ಇವರನ್ನು ಪರಿಚಯಿಸಬೇಕು.