ಮನೆ ಅಪರಾಧ ಸುಪಾರಿ ಕೊಟ್ಟು ಗಂಡನನ್ನೆ ಕೊಲ್ಲಿಸಿದ ಪತ್ನಿ: ಮೂವರ ಬಂಧನ

ಸುಪಾರಿ ಕೊಟ್ಟು ಗಂಡನನ್ನೆ ಕೊಲ್ಲಿಸಿದ ಪತ್ನಿ: ಮೂವರ ಬಂಧನ

0

ಕುಣಿಗಲ್: ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ ಪತ್ನಿ ಸೇರಿ ಮೂವರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ಕೊಲೆಯಾದವ.

ಅತನ ಹೆಂಡತಿ ಹರ್ಷಿತಾ (20) ಹಾಗೂ ಆಕೆಯ ಚಿಕ್ಕಮ್ಮನ ಮಗ ರಘು, ರವಿಕಿರಣ್ ಬಂಧಿತ ಆರೋಪಿಗಳು.

ಘಟನೆ ವಿವರ:

ಫೆ.3 ರಂದು ಕುಣಿಗಲ್ ಪಟ್ಟಣದಲ್ಲಿ ಮಂಜುನಾಥ್ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿ ಸೀನಪ್ಪನಹಳ್ಳಿ ಗ್ರಾಮದ ತನ್ನ ಸ್ವಂತ ಮನೆಗೆ ಬಂದಿದ್ದಾನೆ. ನಂತರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಆತನಿಗೆ ಕರೆ ಬಂದಿದ್ದಕ್ಕಾಗಿ ಎದ್ದು ಹೊರ ಹೋಗಿದ್ದು, ಮತ್ತೇ ಆತ ಮನೆಗೆ ವಾಪಸ್ಸಾಗಿಲ್ಲ. ಊರಿನಿಂದ ಒಂದು ಕಿ.ಮೀ ದೂರದಲ್ಲಿ ಇರುವ ಕಿತ್ನಾಮಂಗಲ ಕೆರೆಯಲ್ಲಿ ಆತನ ಶವ ಪತ್ತೆಯಾಗಿದೆ.

ಈ ಸಂಬಂಧ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ತಂಡ ರಚಿಸಿ, ತನಿಖೆ ಆರಂಭಿಸಿ ಆರೋಪಿಗಳ ಪೈಕಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ನಡೆಸಿದಾಗ ಪತ್ನಿಯೇ ಸುಪಾರಿ ಕೊಟ್ಟಿರುವುದು ತಿಳಿದುಬಂದಿದೆ.

ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನನಾಟಕದಲ್ಲಿ ಅಂಬೇಡ್ಕರ್’ಗೆ ಅವಮಾನ: ಜೈನ್ ವಿವಿಯ 7 ವಿದ್ಯಾರ್ಥಿಗಳು ವಶಕ್ಕೆ
ಮುಂದಿನ ಲೇಖನಕಾರ್ಕಳದಲ್ಲಿ ನನ್ನ ಗೆಲುವು ಖಚಿತ: ಪ್ರಮೋದ್ ಮುತಾಲಿಕ್