ಹೃದಯದ ಪಂಪ್ ಮಾಡುವ ಶಕ್ತಿ ಕಳೆದುಕೊಂಡಾಗ ಹಾರ್ಟ್ ಫೇಲ್ಯೂರ್ ಆಗುತ್ತದೆ. ಹೃದಯದ ಮಾಂಸಖಂಡಗಳು ದುರ್ಬಲವಾದಾಗ ಶರೀರದ ಅವಯನಗಳಿಗೆ ರಕ್ತವನ್ನು ಪೂರೈಸುವ ಪ್ರತಿಕ್ರಿಯೆ ಕುಂಠಿತವಾಗುತ್ತದೆ.ಅಥವಾ ಯಾವುದಾದರೂ ಅಡಚಣೆಯಿಂದ ಹೃದಯಕ್ಕೆ ಬರುವ ರಕ್ತ ಕಡಿಮೆಯಾಗಿ ಹೋಗುತ್ತದೆ. ಈ ಎರಡು ಕಾರಣಗಳಿಂದ ಹಾರ್ಟ್ ಫೇಲ್ಯೂರ್ ಆಗಬಹುದು.
ಹೃದಯದ ಕೆಲಸ ಮಾಡುದಿರುವುದನ್ನು ಎಡಭಾಗ ಮತ್ತು ಬಲಭಾಗ ಕೆಲಸ ಮಾಡದಿರುವುದು ಎಂದು, ಎರಡು ವಿಧವಾಗಿ ಗುರುತಿಸಲ್ಪಡುತ್ತದೆ.
ಹೃದಯದ ಎಡಭಾಗ ಕೆಲಸ ಮಾಡದಿರುವುದು
ಶ್ವಾಸಕೋಶದಿಂದ ಶುದಿಕರಿಸಲ್ಪಟ್ಟ,ಆಮ್ಲಜನಕಯುಕ್ತ ಶುದ್ಧರಕ್ತವು ಹೃದಯದ ಎಡಭಾಗಕ್ಕೆ ಬಂದು ಅಲ್ಲಿಂದ ಶರೀರಕ್ಕೆಲ್ಲ ಪಂಪ್ ಮಾಡಲ್ಪಡುತ್ತದೆ.
★ ಹೃದಯದ ಎಡಭಾಗ ಬಲಹೀನವಾದಾಗ ಆ ಭಾಗದಲ್ಲಿರುವ ಶುದ್ಧ ರಕ್ತವನ್ನು ಶರೀರಕ್ಕೆಲ್ಲಾ ಪಂಪ್ ಮಾಡಲು ಆಶಕ್ತವಾಗುತ್ತದೆ, ಆಗ ಶ್ವಾಸಕೋಶದೊಳಗೆ Back Pressure ಉಂಟಾಗಿ ದ್ರವ ಸೇರಿಕೊಳ್ಳುತ್ತದೆ.
★ಶ್ವಾಸಕೋಶದೊಳಗೆ ಸೇರಿಕೊಂಡ ಈ ದ್ರವ ಆಕ್ಸಿಜನ್ ಸ್ಪೀಕರಿಸುವ, ಇಂಗಾಲಾಮ್ಲವನ್ನು ಹೊರಹಾಕುವ ಕ್ರಿಯೆಗಳಿಗೆ ತೊಂದರೆ ಮಾಡುತ್ತದೆ ಆದ್ದರಿಂದ ರೋಗಿಯು ಆಮ್ಲಜನಕದ ಕೊರತೆಯಿಂದಾಗಿ ತೊಂದರೆ ಕೊಡುತ್ತಾನೆ.
★Left Sided Heart Failure ನ ಮುಖ್ಯ ಲಕ್ಷಣವೇನೆಂದರೆ, ಬೆನ್ನ ಮೇಲೆ ಮಲಗಿದಾಗ ರೋಗಿಗೆ ಉಸಿರಾಡಲು ತೊಂದರೆಯಾಗುತ್ತದೆ. ಎದ್ದು ಕೂತಾಗ ಉಸಿರಾಡಲು ಸಾಧ್ಯವಾಗುತ್ತದೆ. ಕೆಮ್ಮು ಕೂಡ ಕಡಿಮೆಯಾಗುತ್ತದೆ.
★ ಹೃದಯದ ಎಡ ಭಾಗ ಸಮರ್ಪಕವಾಗಿ ಕಾರ್ಯ ಮಾಡಲಾಗದ್ದಕ್ಕೆ ಕಾರಣಗಳು
1. ಹೈಪರ್ ಟೆನ್ಷ ನ್ ( ಹೈ.ಬೀ.ಪಿ )
2. ಥೈರಾಯಿಡ್ ಗ್ರಂಥಿ ಉದ್ರಿಕ್ತಗೊಳ್ಳುವುದು (Hyper Thyroidism)
3. ಹೃದಯದ ಕವಾಟಗಳ ಅಸಮರ್ಥತೆ (Aortic Stenosis, Aortic Incompetnce, Mitral Incompetnce )
★ ಹುಟ್ಟಿನಿಂದಲೇ ಆದ ಹೃದಯದ ತೊಂದರೆ (Coarctation of the Aorta)
ಮೇಲ್ಕಂಡ ತೊಂದರೆ ಇರುವವರಿಗೆ ಹೃದಯದ ರಕ್ತ ಪಂಪ್ ಮಾಡಲು ಬಹಳ ಶ್ರಮ ವಹಿಸುತ್ತದೆ.
ಹೀಗಾಗುವಾಗ ಒಮ್ಮೊಮ್ಮೆ ಹೃದಯದ ಎಡಭಾಗ ವಿಸ್ತರಿಸಿ, ಅದರ ಸ್ನಾಯುಗಳು ದಪ್ಪಗಾಗುತ್ತವೆ. ಅಥವಾ ಹೃದಯ ಬಡಿತದಲ್ಲಿ ಏರಿಳಿತವಾಗುತ್ತದೆ. ಈ ವ್ಯತ್ಯಾಸ ತಾತ್ಕಾಲಿಕವಾದರೂ ಹೃದಯದ ವೈಫಲ್ಯಕ್ಕೆ ಕಾರಣವಾಗುತ್ತದೆ.
ಹೃದಯದ ಎಡಭಾಗದ ವೈಫಲ್ಯಕ್ಕೆ (Heart Failure)ಇನ್ನೂ ಕೆಲವು ಕಾರಣಗಳಿವೆ.
ಹೃದಯ ಬಡಿತದಲ್ಲಿ ಏರುಪೇರಾಗುವುದು:-
★ಕರೋನರಿ ಧಮನಿಯ ಲೋಪ.
★ ಹೃದಯದ ಸ್ನಾಯುಗಳನ್ನು ಬಲಹೀನಗೊಳಿಸುವ Cardiomyopathy ಎನ್ನುವ ಲೋಪದೋಷ
★ಕೊನೆಯದಾಗಿ Cardiomyopathy ಯಲ್ಲಿ ಅಧಿಕ ಕಾರ್ಯಭಾರ (Work load)ಒತ್ತಡ ತಡೆಯಲಾಗದೆ ಪಂಪ್ ಮಾಡುವ ಶಕ್ತಿ ಕುಗ್ಗುವುದು.
★ಹೀಗೆ ಯಾವ ಕಾರಣಗಳಿಂದಾದರೂ, ಹೃದಯದ ಎಡಭಾಗದ ರಕ್ತವನ್ನು ಪೂರ್ತಿಯಾಗಿ ಹೊರಹಾಕಲಾಗದು ಮತ್ತು ಬರುವ ರಕ್ತವನ್ನು ಸ್ವೀಕರಿಸಲಾಗುವುದು.
★ಅಂತಹ ಸಮಯದಲ್ಲಿ ಎಡ ಭಾಗದಲ್ಲಿ ಉಳಿದುಹೋದ ರಕ್ತ ಶ್ವಾಸಕೋಶದ ಒಳಗೆ ಹರಿದು ಅಲ್ಲಿನ ರಕ್ತದಲ್ಲಿ ಮಿಶ್ರವಾಗುತ್ತದೆ.
★ ಶ್ವಾಸಕೋಶಕ್ಕೆ ರಕ್ತ ಬಂದು ಸೇರಿಕೊಳ್ಳುವುದರಿಂದ ನೀರು ಸೇರುತ್ತದೆ. (Pulmonary Oedema) ಇದರ ಮುಖ್ಯ ಲಕ್ಷಣ – ಉಸಿರಾಟದ ತೊಂದರೆ.