ಮನೆ ರಾಜ್ಯ ಭಾರಿ ಮಳೆ: ಪ್ರತಿಯೊಬ್ಬ ಅಧಿಕಾರಿಯೂ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವಂತೆ ಶಾಸಕ ಆರಗ ಜ್ಞಾನೇಂದ್ರ...

ಭಾರಿ ಮಳೆ: ಪ್ರತಿಯೊಬ್ಬ ಅಧಿಕಾರಿಯೂ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವಂತೆ ಶಾಸಕ ಆರಗ ಜ್ಞಾನೇಂದ್ರ ಸೂಚನೆ

0

ತೀರ್ಥಹಳ್ಳಿ: ಮಳೆಯ ಆರ್ಭಟ ಜೋರಾಗಿದ್ದು, ತುಂಗಾ ನದಿ ನೆರೆಯ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ಅಧಿಕಾರಿಗಳು 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದರು.

Join Our Whatsapp Group

ಪ್ರಕೃತಿ ವಿಕೋಪ ಕುರಿತಾಗಿ ಜು. 24ರ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ರೀತಿಯಲ್ಲಿ ಕ್ಷೇತ್ರದ ಜನರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು.

ಜನರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ, ಅವಶ್ಯಕತೆ ಇದ್ದರೆ ಆಂಬ್ಯುಲೆನ್ಸ್ ಸೇವೆ ಹೆಚ್ಚಳ ಮಾಡಿ ಎಂದು ಆರೋಗ್ಯಾಧಿಕಾರಿ ನಟರಾಜ್ ಗೆ ಹೇಳಿದರು.

ನೆರೆ ಹೆಚ್ಚಳವಾಗುತ್ತಿರುವುದರಿಂದ ನೆರೆ ಹಾವಳಿ ಪ್ರದೇಶಗಳಲ್ಲಿ ಪೊಲೀಸ್ ವ್ಯವಸ್ಥೆ ಕಲ್ಪಿಸಿ ಹಾಗೂ ಸೇತುವೆ ಬಳಿ 24 ಗಂಟೆಗಳ ಕಾಲ ಎಚ್ಚರ ವಹಿಸಬೇಕು. ಅವಶ್ಯಕತೆ ಇದ್ದರೆ ಕುರುವಳ್ಳಿಯ ಜೋಪಡಿ ಜನರನ್ನು ಬೇರೆ ಕಡೆ ಸ್ಥಳಾಂತರ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆಗಳಲ್ಲಿ ವ್ಯವಸ್ಥೆ ಹೇಗಿದೆ ಎಂದು ತಿಳಿದುಕೊಳ್ಳಿ, ಅಲ್ಲಿನ ಕಟ್ಟಡ, ಹೆಂಚುಗಳ ಬಗ್ಗೆ ಪರಿಶೀಲನೆ ನಡೆಸಿ, ಕುಸಿದು ಬೀಳುವ ಸ್ಥಿತಿಯಲ್ಲಿ ಇದೆಯಾ ಎಂದು ತಿಳಿದುಕೊಳ್ಳಿ. ಆದಷ್ಟು ಮಕ್ಕಳ ಬಗ್ಗೆ ಎಚ್ಚರ ವಹಿಸಿ ಎಂದು ಶಿಕ್ಷಣಾಧಿಕಾರಿ ಗಣೇಶ್ ಗೆ ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಮೃತ್ ಅತ್ರೇಶ್, ಡಿವೈಎಸ್ ಪಿ ಗಜಾನನ ವಾಮನ ಸುತಾರ, ಆರೋಗ್ಯ ಅಧಿಕಾರಿಗಳಾದ ನಟರಾಜ್, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಕುರಿಯಾಕೊಸ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.