ಮನೆ ರಾಜ್ಯ ಪಠ್ಯ ಪರಿಷ್ಕರಣೆ: ಹೊಸ ಸಮಿತಿ ರಚನೆ ಇಲ್ಲ- ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ

ಪಠ್ಯ ಪರಿಷ್ಕರಣೆ: ಹೊಸ ಸಮಿತಿ ರಚನೆ ಇಲ್ಲ- ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ

0

ಕೊಡಗು(Kodagu): ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಪಠ್ಯ ಪರಿಷ್ಕರಣೆಗೆ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ನೂತನ ಸಮಿತಿ ರಚನೆಗೆ ಆಗ್ರಹ ಕೇಳಿ ಬಂದಿದೆ.  ಆದರೆ ಹೊಸ ಸಮಿತಿ ರಚನೆ ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

ಕುಶಾಲನಗರದಲ್ಲಿ ಇಂದು ಮಾತನಾಡಿದ ಸಚಿವರು, ಪಠ್ಯ ಪರಿಷ್ಕರಣೆ ಸಂಬಂಧ ಹೊಸ ಸಮಿತಿ ರಚನೆ ಮಾಡುವುದಿಲ್ಲ.  ಬಸವಣ್ಣನವರ ಒಂದು ಪಾಠ ಮಾತ್ರ ತಿದ್ದುಪಡಿ ಆಗಲಿದೆ. ಇದನ್ನು ಇಲಾಖೆಯ ಅಧಿಕಾರಿಗಳು ಪರಿಶೀಲಿಸುತ್ತಾರೆ ಎಂದರು.

ಈಗಾಗಲೇ ಶೇ 80 ರಷ್ಟು ಪಠ್ಯಪುಸ್ತಕ ವಿತರಣೆಯಾಗಿದೆ.  ಅಧಿಕಾರಿಗಳ ಸಲಹೆ ಪಡೆದು ಪರಿಷ್ಕರಣೆ ಮಾಡುತ್ತೇವೆ ಎಂದು ತಿಳಿಸಿದರು.

ಹಿಂದಿನ ಲೇಖನ`ಬಾಂಬೆ ಫೈಲ್ಸ್’ ಈ ವರ್ಷವೇ ಬಿಡುಗಡೆ: ಹೆಚ್.ವಿಶ್ವನಾಥ್
ಮುಂದಿನ ಲೇಖನದಾಖಲಾತಿ ಪರಿಶೀಲನೆಗೆ ಎಲ್ಲೆಂದರಲ್ಲಿ ವಾಹನಗಳನ್ನು ತಡೆದು ನಿಲ್ಲಿಸುವ ಹಾಗಿಲ್ಲ: ಪ್ರವೀಣ್ ಸೂದ್