ಮನೆ ಸುದ್ದಿ ಜಾಲ ಕೇರಳ, ನಾಗರಹೊಳೆಯಲ್ಲಿ ಭಾರಿ ಮಳೆ: ಕಬಿನಿ ಜಲಾಶಯದ ಒಳ ಹರಿವು ಹೆಚ್ಚಳ

ಕೇರಳ, ನಾಗರಹೊಳೆಯಲ್ಲಿ ಭಾರಿ ಮಳೆ: ಕಬಿನಿ ಜಲಾಶಯದ ಒಳ ಹರಿವು ಹೆಚ್ಚಳ

0

ಮೈಸೂರು(Mysuru):  ಕೇರಳದ ವಯನಾಡು ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

ಸದ್ಯ ಒಳ ಹರಿವು 3,424 ಕ್ಯುಸೆಕ್ ಗೆ ತಲುಪಿದೆ. ಕಳೆದ ವರ್ಷ ಇದೆ ಸಮಯದಲ್ಲಿ 88 ಕ್ಯುಸೆಕ್ ಮಾತ್ರವೇ ಇತ್ತು. ಸಾಮಾನ್ಯವಾಗಿ ಇಷ್ಟೊಂದು ಪ್ರಮಾಣದಲ್ಲಿ ನೀರು ಮುಂಗಾರಿನ ಸಂದರ್ಭದಲ್ಲಿ ಜಲಾಶಯಕ್ಕೆ ಬರುತ್ತಿತ್ತು. ಈಗ ಮುಂಗಾರು ಪ್ರವೇಶಕ್ಕೂ ಮುನ್ನವೇ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ನಾಗರಹೊಳೆಯಿಂದ ಹೆಬ್ಬಳ್ಳ ಜಲಾಶಯಕ್ಕೆ 2 ಗಂಟೆ ಅವಧಿಯಲ್ಲಿ 8 ಅಡಿ ನೀರು ಹರಿದುಬಂದಿದೆ. ಈ ವೇಗದಲ್ಲಿ ಜಲಾಶಯ ಭರ್ತಿಯಾಗಿರುವುದು ಇದೇ ಮೊದಲು . ಇನ್ನೂ ಎಡೆ ಬಿಡದೆ ಸುರಿಯುತ್ತಿರುವ ಮಳೆಗೆ ತಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದ ಪುರಾತನ ದೇಶೇಶ್ವರ ದೇವಾಲಯದ ಕಾಂಪೌಂಡ್ ಕುಸಿದಿದೆ.

ಗದ್ದೆಗೆ ನುಗ್ಗಿದ ನೀರುಮಂಚೇಗೌಡ ನಾಲೆ ಏರಿ ಒಡೆದು ಸಾಲಿಗ್ರಾಮ ತಾಲ್ಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಗದ್ದೆಗಳಿಗೆ ನೀರು ನುಗ್ಗಿದೆ.

ಹಿಂದಿನ ಲೇಖನಸಾರ್ವಜನಿಕರ ರಕ್ಷಣೆ ಬಹಳ ದೊಡ್ಡ ಜವಾಬ್ದಾರಿ: ಎಡಿಜಿಪಿ ಅಲೋಕ್ ಕುಮಾರ್
ಮುಂದಿನ ಲೇಖನಬೀದರ್​ನಲ್ಲಿ ಯುವಕನ ಬರ್ಬರ ಕೊಲೆ