ಚಾಮರಾಜನಗರ: ಆರ್ಎಸ್ಎಸ್ ಸಂಸ್ಥಾಪಕ ಡಾ.ಹೆಡ್ಗೆವಾರ್ ರೀತಿಯ ಸಂಸ್ಥೆಗಳ ಮುಖ್ಯಸ್ಥರು ಎಲ್ಲಾ ಧರ್ಮದಲ್ಲೂ ಇದ್ದಾರೆ. ಹೆಡ್ಗೆವಾರ್ ಅವರ ಭಾಷಣ ಪಠ್ಯದಲ್ಲಿ ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಭಗತ್ ಸಿಂಗ್, ನಾರಾಯಣ ಗುರು ಪಠ್ಯ ಕೈಬಿಟ್ಟು ಹೆಡ್ಗೆವಾರ್ ಭಾಷಣ ಸೇರಿಸಿರುವುದು ಸರಿಯಲ್ಲ. ಕೂಡಲೇ ಈ ಬಗ್ಗೆ ಶಿಕ್ಷಣ ಸಚಿವರು ಪುನರ್ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣನಾರಾಯಣ ಗುರು ಮತ್ತು ಭಗತ್ ಸಿಂಗ್ ಪಠ್ಯ ಕೈ ಬಿಟ್ಟಿಲ್ಲ ಎಂದು ಸರ್ಕಾರದ ಸ್ಪಷ್ಟನೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರದ್ದು ಡಬಲ್ ಸ್ಟ್ಯಾಂಡರ್ಡ್. ನಾವು ಆಕ್ರೋಶ ಹೊರಹಾಕಿದ ಬಳಿಕ ಉಲ್ಟಾ ಹೊಡೆದರು. ಅವರು ಪಠ್ಯವನ್ನು ತೆಗೆದಿದ್ದರು ಎಂದರು. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯಕ್ಕೆ 9 ನೇ ಸ್ಥಾನ ಬಂದಿದೆ. ಕಾಂಗ್ರೆಸ್ ಅವಧಿಯಲ್ಲಿ ಮಂಜೂರು ಮಾಡಲಾದ ಜಿಲ್ಲೆಯ 4 ಆದರ್ಶ ಶಾಲೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಹಾಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅಭಿನಂದಿಸುವುದಾಗಿ ಹೇಳಿದರು.
ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಪ್ರತಿಕ್ರಿಯಿಸಿದ ಧ್ರುವನಾರಾಯಣ, ರಾಜ್ಯ ರಾಜಕಾರಣಕ್ಕೆ ಹಿಂತಿರುಗುವ ಯಾವ ಆಲೋಚನೆ ಇಲ್ಲ. 9 ಜಿಲ್ಲೆಗಳ ಉಸ್ತುವಾರಿ ಇದ್ದು, ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ನಿಂದ ಕುಟುಂಬಕ್ಕೊಂದು ಟಿಕೆಟ್, ಯುವಕರಿಗೆ ಆದ್ಯತೆ ಜಾರಿಯಾಗಲಿದ್ದು, ವರಿಷ್ಠರ ನಿರ್ಣಯವನ್ನು ಸ್ವಾಗತಿಸುತ್ತೇನೆ ಎಂದರು.