ಮನೆ ಆರೋಗ್ಯ ಮಕ್ಕಳನ್ನು ಜಂತುಹುಳು ಮುಕ್ತರನ್ನಾಗಿ ಮಾಡಲು ಸಹಕರಿಸಿ: ಡಾ. ಕೆ.ಎಚ್.ಪ್ರಸಾದ್

ಮಕ್ಕಳನ್ನು ಜಂತುಹುಳು ಮುಕ್ತರನ್ನಾಗಿ ಮಾಡಲು ಸಹಕರಿಸಿ: ಡಾ. ಕೆ.ಎಚ್.ಪ್ರಸಾದ್

0

ಮೈಸೂರು: ಇಂದು ಕರ್ನಾಟಕ ಪಬ್ಲಿಕ್ ಸ್ಕೂಲ್, ಕುವೆಂಪು ನಗರ, ಮೈಸೂರು ಇಲ್ಲಿ ನಡೆದ 2022-23ನೇ ಸಾಲಿನ  2ನೇ ಸುತ್ತಿನ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್ ಕೆ.ಹೆಚ್ ಅವರು, ಗಿಡಕ್ಕೆ ನೀರು ಹಾಕುವ ಮೂಲಕ ಮತ್ತು ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆಯನ್ನು ನೀಡುವುದರೊಂದಿಗೆ ಕಾರ್ಯಕ್ರಮನ್ನು  ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಧಿಕಾರಿಗಳಾದ ಡಾ ಪ್ರಸಾದ್ ಅವರು ಮಕ್ಕಳನ್ನು ಜಂತು ಹುಳು ಮುಕ್ತರನ್ನಾಗಿ ಸಹಕರಿಸಬೇಕು. ಜಿಲ್ಲಾವ್ಯಾಪ್ತಿಯಲ್ಲಿ ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ 1 ರಿಂದ 19 ವರ್ಷದ ಮಕ್ಕಳಿಗೆ ಆಲ್‌ಬೆಂಡಜೋಲ್ ಮಾತ್ರೆಗಳನ್ನು ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಸರ್ಕಾರಿ/ಖಾಸಗಿ ಶಾಲಾ-ಕಾಲೇಜುಗಳಲ್ಲಿ ಉಚಿತವಾಗಿ ನೀಡಲಾಗುತ್ತಿದ್ದು. ಬಾಕಿ ಇರುವ ಮಕ್ಕಳಿಗೆ ಮಾರ್ಚ್ 14 ರಿಂದ 25 ರವರೆಗೆ ಮಾತ್ರೆಗಳನ್ನು ನೀಡಲಾಗುವುದು ಎಂದರು.

ಜಿಲ್ಲಾ ಆರ್ .ಸಿ.ಹೆಚ್ ಡಾ. ಜಯಂತ್ ಎಂ.ಎಸ್. ಮಾತನಾಡಿ, 1 ರಿಂದ 19 ವರ್ಷದ ಎಲ್ಲಾ ಮಕ್ಕಳು ಸದರಿ ಕಾರ್ಯಕ್ರಮದ ಫಲಾನುಭವಿಗಳಾಗಿದ್ದು ಎಲ್ಲಾ ಮಕ್ಕಳು ಅಲ್ಬೆಂಡಾಜೋಲ್ ಮಾತ್ರೆಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಶಾಲೆಯಿಂದ ಹೊರಗಿರುವ ಹಾಗೂ ಶಾಲೆಯಲ್ಲಿ ಗೈರುಹಾಜರದ ಮಕ್ಕಳು ಮಾ.14 ರಿಂದ 25 ರವರಗೆ ನಡೆಯುವ ಮಾಫ್ ಆಫ್ ಕಾರ್ಯಾಚರಣೆಯಲ್ಲಿ ಪಡೆದುಕೊಳ್ಳುವಂತೆ ತಿಳಿಸಿದರು. 

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕಮಲಮ್ಮ, ರವರು, ಸದರಿ ಕಾಲೇಜಿನ ಪ್ರಾಂಶುಪಾಲರು  ಹೈಸ್ಕೂಲ್.ನ ಪ್ರಾಂಶುಪಾಲರಾದ ಭಾಗ್ಯ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾದ  ಹೇಮಾವತಿ ಮತ್ತು ಶಾಲಾ ಮಕ್ಕಳು  ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.