ಮನೆ ಆರೋಗ್ಯ ವರ್ಕ್‌ ಫ್ರಮ್‌ ಹೋಮ್ ನಲ್ಲಿರುವವರಿಗಾಗಿ ಇಲ್ಲಿವೆ ಫಿಟ್ನೆಸ್‌ ಸೂತ್ರ

ವರ್ಕ್‌ ಫ್ರಮ್‌ ಹೋಮ್ ನಲ್ಲಿರುವವರಿಗಾಗಿ ಇಲ್ಲಿವೆ ಫಿಟ್ನೆಸ್‌ ಸೂತ್ರ

0

ಸಾಂಕ್ರಾಮಿಕ ಕೊರೊನಾ (Corona) ಸೋಂಕು ಬಂದಾಗಿನಿಂದ ಅನೇಕ ಕಂಪನಿಗಳು ವರ್ಕ್‌ ಫ್ರಮ್‌ ಹೋಮ್ ನೀಡಿದೆ. ಮನೆಯಲ್ಲಿ ಕೆಲಸ ಮಾಡುತ್ತಾ ರುಚಿ ರುಚಿಯಾದ ಆಹಾರಗಳನ್ನು ಸೇವನೆ ಮಾಡುತ್ತಾ ನಿಮ್ಮ ತೂಕವನ್ನು ಮರೆತಿದ್ದರೆ ಅಂತಹವರಿಗೆ ಕೆಲವು ಫಿಟ್ನೆಸ್‌ ಸೂತ್ರಗಳನ್ನು ನೀಡಲಾಗಿದೆ.
ಇವುಗಳನ್ನು ಅನುಸರಿಸಿ ನಿಮ್ಮ ದೇಹದ ತೂಕವನ್ನು ಕಾಪಾಡಿಕೊಳ್ಳಬಹುದು.
ಈ ಗ್ಲುಟ್‌ ಬ್ರಿಡ್ಜ್ ಅನ್ನು ಸೇತುಬಂಧಾಸನವೆಂದು ಕರೆಯುತ್ತಾರೆ.
ದಿನವಿಡೀ ಕಂಪ್ಯೂಟರ್‌ ಮುಂದೆ ಕುಳಿತು ಬೆನ್ನು ನೋವು ಅನುಭವಿಸುತ್ತಿರುವವರಿಗೆ ಈ ದೇಹ ದಂಡನೆ ಸೂಕ್ತವಾದುದು.
ಇದರಿಂದ ಬೆನ್ನಿನ ಭಾಗ ರಿಲ್ಯಾಕ್ಸ್‌ ಆಗುತ್ತದೆ.


ನಿಮ್ಮ ಹೊಟ್ಟೆಯ ಸುತ್ತ ಹೆಚ್ಚಿರುವ ಬೊಜ್ಜನ್ನು ಇದು ಕಡಿಮೆ ಮಾಡುತ್ತದೆ. ಹಾಗೆಯೇ ಸ್ನಾಯುಗಳು ಬೆಚ್ಚಗಾಗಲು ಸಹಾಯ ಮಾಡುತ್ತದೆ.
ಸೈಡ್‌ ಲೈಯಿಂಗ್ ವ್ಯಾಯಾಮ ಮಾಡುವುದರಿಂದ ನಿಮ್ಮ ಸೊಂಟದ ಸ್ನಾಯುಗಳಿಗೆ ಬಲವನ್ನು ನೀಡುತ್ತದೆ.
ಅಲ್ಲದೆ, ಸೊಂಟದ ಸುತ್ತ ಬೆಳೆದಿರುವ ಹೆಚ್ಚುವರಿ ಕೊಬ್ಬನ್ನು ಈ ವ್ಯಾಯಾಮದಿಂದ ಕಡಿಮೆ ಮಾಡಿಕೊಳ್ಳಬಹುದು.
ಈ ದೇಹ ದಂಡನೆ ಕೂಡ ನಿಮ್ಮ ಬೆನ್ನಿಗೆ ಯಾವುದೇ ರೀತಿಯ ತೊಡಕನ್ನು ಉಂಟು ಮಾಡುವುದಿಲ್ಲ. ಹಾಗೆಯೇ ನಿಮ್ಮ ತೊಡೆಗಳು ಬಲಿಷ್ಠವಾಗುತ್ತದೆ.
ಬೈಸಿಕಲ್‌ ಕ್ರಂಚ್‌ ಮಾಡುವುದರಿಂದ ನೀವು ಹೊಟ್ಟೆಯ ಕೊಬ್ಬನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಿಕೊಳ್ಳಬಹುದು.
ಇದನ್ನು ನೀವು ನಿಮ್ಮ ಬೆಡ್‌ ಮೇಲೆ ಕೂಡ ಮಾಡಬಹುದು.
ಬೊಜ್ಜು ರಹಿತ ದೇಹ ಪಡೆಯಲು ಈ ಬೈಸಿಕಲ್ ಕ್ರಂಚ್ ತುಂಬಾ ಪ್ರಯೋಜನಕಾರಿಯಾಗಿದೆ.
ಈ ಮೇಲಿನ ದೇಹ ದಂಡನೆ ಮಾಡಲು ನಿಮಗೆ ಇಷ್ಟವಿಲ್ಲದೆ ಹೋದರೆ ವಾಕಿಂಗ್ ಮಾಡಿ. ಪ್ರತಿ ನಿತ್ಯ ೩೦ ನಿಮಿಷಗಳ ನಡಿಗೆ ಸಾಕಷ್ಟು ಆರೋಗ್ಯಕರವಾದ ಬೆಳವಣಿಗೆಯಾಗಿದೆ. ೯ ರಿಂದ ೭ ರ ಕೆಲಸದಿಂದ ದೇಹವು ದಣಿದಿರುತ್ತದೆ. ವಾಕಿಂಗ್ ಮಾಡುವುದರಿಂದ ಸ್ನಾಯುಗಳಲ್ಲಿ ಶಕ್ತಿ ಹೆಚ್ಚುವುದು ಮಾತ್ರವಲ್ಲ, ಹೊರಗಿನ ವಾತಾವರಣದ ಕಾರಣ ನಿಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ.
ವರ್ಕ್ ಫ್ರಮ್ ಹೋಮ್ ಕಾರಣ ರುಚಿ ರುಚಿಯಾದ ಸಿಹಿ ಭಕ್ಷ್ಯಗಳನ್ನು ನೀವು ಪ್ರತಿನಿತ್ಯವು ಸವಿಯುತ್ತಿರಬಹುದು. ವ್ಯಾಯಾಮದ ಕೊರತೆಯಿಂದಾಗಿ ದೇಹವು ಯದ್ವಾ ತದ್ವಾ ಬೆಳೆಯುತ್ತದೆ. ಸಮತೋಲಿತವಾದ ಆಹಾರ ಮತ್ತು ವ್ಯಾಯಾಮಗಳು ತಪ್ಪಿಸಲೇಬಾರದು. ತಾಜಾ ಹಣ್ಣುಗಳು, ತರಕಾರಿಗಳು, ಸೊಪ್ಪುಗಳನ್ನು ಹೆಚ್ಚಾಗಿ ನಿಮ್ಮ ಆಹಾರದಲ್ಲಿ ಸೇರಿಸಿ.