ಮನೆ ಯೋಗಾಸನ ಉತ್ತಮ ಆರೋಗ್ಯಕ್ಕೆ ಯೋಗ ಬೆಸ್ಟ್:‌ ಯೋಗದ ಪ್ರಯೋಜನದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಉತ್ತಮ ಆರೋಗ್ಯಕ್ಕೆ ಯೋಗ ಬೆಸ್ಟ್:‌ ಯೋಗದ ಪ್ರಯೋಜನದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

0

ಯೋಗದಿಂದ ಸಕಲವೂ ಪ್ರಾಪ್ತಿಯಾಗುತ್ತದೆ. ಅದರಲ್ಲಿ ಮುಖ್ಯವಾಗಿ ಉತ್ತಮ ಆರೋಗ್ಯ. ಒತ್ತಡರಹಿತವಾಗಿ ಜೀವನ ಮಾಡಲು ಯೋಗ ಬಹಳ ಸಹಕಾರಿ.

ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮನುಷ್ಯನ ದೇಹ ಕಾಯಿಲೆಗಳಿಂದ ಮುಕ್ತವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಒತ್ತಡ ಕಡಿಮೆಯಾಗಿ ಹೆಚ್ಚು ಖುಷಿಯಿಂದ ಜೀವನ ಮಾಡಬಹುದು. ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಇರುವಂತಹ ಫಲವತ್ತತೆ ಸಮಸ್ಯೆ ದೂರವಾಗುತ್ತದೆ. ದೇಹದಲ್ಲಿ ರಕ್ತಸಂಚಾರ ಉತ್ತಮಗೊಂಡು, ಜೀರ್ಣಶಕ್ತಿ ಅಧಿಕಗೊಳ್ಳುತ್ತದೆ. ಆದರೆ ಯೋಗಾಭ್ಯಾಸದ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಕೆಲವೊಂದು ವಿಶೇಷ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಆಗಲೇ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ.

ಸೂರ್ಯ ನಮಸ್ಕಾರ:

ಇದು ದೇಹಕ್ಕೆ ಮತ್ತು ಮಾನಸಿಕವಾಗಿ ಸಾಮರ್ಥಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೂ ಮನಸ್ಸು ಪ್ರಶಾಂತವಾಗಿ ಇರುತ್ತದೆ.

ಪ್ರಾಣಯಾಮ:

ಇದು ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ವಿಷವನ್ನು ತೆಗೆದು ಹಾಕುವುದರ ಜೊತೆಗೆ ಉಸಿರಾಟದ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

ಕಪಾಲಭಾತಿ:

ಇದು ಮಾನಸಿಕ ಯೋಗಕ್ಷೇಮ, ಮಧುಮೇಹ ನಿಯಂತ್ರಣ, ಬೆನ್ನುನೋವು, ಅಜೀರ್ಣದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಅಗುವುದು ಮತ್ತು ವಿವಿಧ ಕಾಯಿಲೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

ತಾಡಾಸನ:

ಇದು ನಮ್ಮ ಪಾದಗಳು ಮತ್ತು ಕಾಲುಗಳಿಗೆ ಸಾಕಷ್ಟು ರಕ್ತ ಪರಿಚಲನೆ ನೀಡುವ ಮೂಲಕ ಹೆಚ್ಚು ಶಕ್ತಿ ಒದಗಿಸುತ್ತದೆ ಹಾಗೆಯೇ ಖಿನ್ನತೆಯನ್ನು ನಿವಾರಿಸುತ್ತದೆ.

ಶವಾಸನ:

ಇದು ನಮ್ಮ ಇಡೀ ದೇಹವನ್ನು ಸಡಿಲಗೊಳಿಸುತ್ತದೆ. ಮತ್ತು ಒತ್ತಡ, ಆಯಾಸ, ಖಿನ್ನತೆಯನ್ನು ನಿವಾರಿಸಿ, ನಿದ್ರಾಹೀನತೆಯನ್ನು ಗುಣಪಡಿಸುತ್ತದೆ.

ಒಟ್ಟಿನಲ್ಲಿ ಪುರಾತನ ಕಾಲದಿಂದಲೂ ಯೋಗಾಸನವು ಹೆಚ್ಚಿನ ಪ್ರಾಮುಖ್ಯತೆ ಮಹತ್ವವನ್ನು ಪಡೆದುಕೊಂಡಿದೆ. ಆರೋಗ್ಯಕರ ಜೀವನಕ್ಕಾಗಿ ನಿತ್ಯ ಯೋಗ ಮಾಡೋಣ.