ಬೆಂಗಳೂರು(Bengaluru): ಬಿ.ವೈ ವಿಜಯೇಂದ್ರಗೆ ವಿಧಾನಪರಿಷತ್ ಟಿಕೆಟ್ ಕೈ ತಪ್ಪಿದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ವಿಜಯೇಂದ್ರ ಅವರಿಗೆ ಬೇರೆ ಅವಕಾಶ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಈ ಕುರಿತು ಮಾತನಾಡಿರುವ ಅವರು, ಹೈಕಮಾಂಡ್ ವಿಜಯೇಂದ್ರಗೆ ಬೇರೆ ಅವಕಾಶ ನೀಡುತ್ತೆ. ಅವಕಾಶ ನೀಡುವುದು ಪ್ರಧಾನಿ ಮೋದಿ ಮತ್ತು ಜೆ.ಪಿ ನಡ್ಡಾಗೆ ಬಿಟ್ಟಿದ್ದು ಶೀಘ್ರದಲ್ಲೇ ಕೆಲವು ಮಾರ್ಪಾಡಾಗಬಹುದು ಎಂದಿದ್ದಾರೆ.
ವಿಜಯೇಂದ್ರ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ. ಚುನಾವಣೆ ಸ್ಪರ್ಧೆ ಬಗ್ಗೆ ಈಗಲೇ ಚರ್ಚೆ ಯಾಕೆ..? ಸಮಯ ಬಂದಾಗ ನೋಡೋಣ ಎಂದು ತಿಳಿಸಿದರು.
ವಿಜಯೇಂದ್ರಗೆ ಟಿಕೆಟ್ ಕೈತಪ್ಪುವುದಕ್ಕೂ ಬಿಎಲ್ ಸಂತೋಷ್ ಗೂ ಸಂಬಂಧವಿಲ್ಲ. ಬಿಎಲ್ ಸಂತೋಷ್ ಅವರು ಅಡ್ಡಿಪಡಿಸಿಲ್ಲ ಎಂದರು.