ಮನೆ ಕಾನೂನು ಸಂತ್ರಸ್ತೆಯೊಂದಿಗೆ ವಿವಾಹವಾಗುವ ಷರತ್ತಿನೊಂದಿಗೆ ಅತ್ಯಾಚಾರ ಪ್ರಕರಣ ರದ್ದು ಪಡಿಸಿದ ಹೈಕೋರ್ಟ್

ಸಂತ್ರಸ್ತೆಯೊಂದಿಗೆ ವಿವಾಹವಾಗುವ ಷರತ್ತಿನೊಂದಿಗೆ ಅತ್ಯಾಚಾರ ಪ್ರಕರಣ ರದ್ದು ಪಡಿಸಿದ ಹೈಕೋರ್ಟ್

0

ಬೆಂಗಳೂರು: ಸಂತ್ರಸ್ತೆಯೊಂದಿಗೆ ವಿವಾಹವಾಗುವ ಷರತ್ತಿನೊಂದಿಗೆ ಅತ್ಯಾಚಾರ ಪ್ರಕರಣವೊಂದನ್ನು ಹೈಕೋರ್ಟ್​ ರದ್ದುಪಡಿಸಿ ಆದೇಶಿಸಿದೆ.

ಇತ್ತೀಚೆಗೆ ಸಂತ್ರಸ್ತ ಯುವತಿ ಹೈಕೋರ್ಟ್’ಗೆ ಪ್ರಮಾಣಪತ್ರ ಸಲ್ಲಿಸಿದ್ದಳು. ‘ನಾನೀಗ ವಯಸ್ಕಳಾಗಿದ್ದಾನೆ. ಆರೋಪಿಯೊಂದಿಗೆ ವಿವಾಹವಾಗುವುದಾಗಿ ಹೇಳಿ, ಇದಕ್ಕೆ ಆರೋಪಿಯೂ ಸಹ ಒಪ್ಪಿರುವುದಾಗಿ ಸಂತ್ರಸ್ತ ಯುವತಿ ತಿಳಿಸಿದ್ದರು. ಹೀಗಾಗಿ ಪ್ರಕರಣ ರದ್ದುಪಡಿಸಲು ಅತ್ಯಾಚಾರ ಸಂತ್ರಸ್ತೆ ಮನವಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಸಂತ್ರಸ್ತ ಯುವತಿ ಮನವಿ ಪತ್ರವನ್ನು ಗಮನಿಸಿದ ಹೈಕೋರ್ಟ್​, ಆರೋಪಿಯನ್ನು ವಿಚಾರಣೆ ಮಾಡಿದ್ದು,  ಜೈಲಿನಿಂದ ಹಾಜರುಪಡಿಸಿದ್ದ ಆರೋಪಿಯಿಂದಲೂ ಮದುವೆಗೆ ಸಮ್ಮತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರ, ಪೋಕ್ಸೋ ಕೇಸ್ ರದ್ದುಪಡಿಸಿ, ಒಂದು ತಿಂಗಳೊಳಗೆ ವಿವಾಹವಾಗಬೇಕೆಂಬ ಷರತ್ತಿನೊಂದಿಗೆ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ​ರಿದ್ದ ಹೈಕೋರ್ಟ್ ಪೀಠ, ಕೇಸ್ ರದ್ದುಪಡಿಸಿ ಆದೇಶಿಸಿದೆ. ಇನ್ನು ಈ ಪಕ್ರರಣ ಚಿಂತಾಮಣಿ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಹಿಂದಿನ ಲೇಖನಸೂರ್ಯ ಮುಂದಿನ ಸಿನಿಮಾ‘ಕಂಗುವ’ 38 ಭಾಷೆಗಳಲ್ಲಿ ಬಿಡುಗಡೆ: ನಿರ್ಮಾಪಕ
ಮುಂದಿನ ಲೇಖನರೈತ ಈಗ ಅನ್ನದಾತ ಮಾತ್ರವಲ್ಲ, ಶಕ್ತಿದಾತನೂ ಆಗಿದ್ದಾನೆ: ನಿತಿನ್ ಗಡ್ಕರಿ