ಮೈಸೂರು: ಕರಾವಳಿ ಜಿಲ್ಲೆಗಳಲ್ಲಿ ಆರಂಭವಾದ ಹಿಜಾಬ್ ವಿವಾದ ಪ್ರಸ್ತುತ ಇಡೀ ರಾಜ್ಯವನ್ನು ವ್ಯಾಪಿಸಿದ್ದು, ಮೈಸೂರಿನಲ್ಲೂ ಹಿಜಾಬ್ ವಿವಾದ ಪ್ರತಿಧ್ವನಿಸಿದ್ದು, ವಿದ್ಯಾರ್ಥಿನಿಯರು ಬನ್ನಿಮಂಟಪದ ಹೈವೆ ಸರ್ಕಲ್ ಬಳಿ ಹಿಜಾಬ್ ಅಭಿಯಾನ ನಡೆಸಿದ್ದಾರೆ.
ಐ ಲವ್ ಹಿಜಾಬ್ ಎಂಬ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿ, ಪರಸ್ಪರ ಹಿಜಾಬ್ ತೊಡಿಸಿ ಪ್ರತಿಭಟಿಸಿದ್ದಾರೆ. ಅಲ್ಲದೇ ಎಲ್ಲಾ ಕಾಲೇಜಿನಲ್ಲೂ ಹಿಜಾಬ್ಗೆ ಅವಕಾಶ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡರು. ಈ ಮೂಲಕ ಉಡುಪಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆಂಬಲ ವ್ಯಕ್ತಪಡಿಸಿದರು.