ಮನೆ ಸುದ್ದಿ ಜಾಲ ಹಿಜಾಬ್​ ವಿವಾದ: ಮೈಸೂರಿನಲ್ಲಿ ‘ಐ ಲವ್​ ಹಿಜಾಬ್‘​ ಅಭಿಯಾನ

ಹಿಜಾಬ್​ ವಿವಾದ: ಮೈಸೂರಿನಲ್ಲಿ ‘ಐ ಲವ್​ ಹಿಜಾಬ್‘​ ಅಭಿಯಾನ

0

ಮೈಸೂರು: ಕರಾವಳಿ ಜಿಲ್ಲೆಗಳಲ್ಲಿ ಆರಂಭವಾದ ಹಿಜಾಬ್​ ವಿವಾದ ಪ್ರಸ್ತುತ ಇಡೀ ರಾಜ್ಯವನ್ನು ವ್ಯಾಪಿಸಿದ್ದು, ಮೈಸೂರಿನಲ್ಲೂ ಹಿಜಾಬ್​ ವಿವಾದ ಪ್ರತಿಧ್ವನಿಸಿದ್ದು, ವಿದ್ಯಾರ್ಥಿನಿಯರು ಬನ್ನಿಮಂಟಪದ ಹೈವೆ ಸರ್ಕಲ್ ಬಳಿ ಹಿಜಾಬ್ ಅಭಿಯಾನ ನಡೆಸಿದ್ದಾರೆ.

ಐ ಲವ್ ಹಿಜಾಬ್ ಎಂಬ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿ, ಪರಸ್ಪರ ಹಿಜಾಬ್​​ ತೊಡಿಸಿ ಪ್ರತಿಭಟಿಸಿದ್ದಾರೆ. ಅಲ್ಲದೇ ಎಲ್ಲಾ ಕಾಲೇಜಿನಲ್ಲೂ ಹಿಜಾಬ್​ಗೆ ಅವಕಾಶ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡರು. ಈ ಮೂಲಕ ಉಡುಪಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆಂಬಲ ವ್ಯಕ್ತಪಡಿಸಿದರು. 

ಹಿಂದಿನ ಲೇಖನಕೊರೊನಾ: ದೇಶದಲ್ಲಿಂದು 1.27 ಲಕ್ಷ ಹೊಸ ಕೇಸ್ ಪತ್ತೆ
ಮುಂದಿನ ಲೇಖನಹಿಜಾಬ್ ಧರಿಸುವವರು ಧರಿಸಲಿ, ಧರಿಸದವರ ಮೇಲೆ ಒತ್ತಡ ಬೇಡ: ಸಿಎಂ ಇಬ್ರಾಹಿಂ