ಮನೆ ಆರೋಗ್ಯ ಬೆಟ್ಟದ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿ

0

ಬಾಯಿ ಹುಳಿಯಾಗುವುದನ್ನು ಮತ್ತು ಹುಲಿತೇಗು ಬರುವುದನ್ನು ತಡೆಯುವ ಗುಣ :

Join Our Whatsapp Group

         ಜಠರದಲ್ಲಿ ಜೀರ್ಣರಸ ಮತ್ತು ಜೀರ್ಣವಾಗದ ಆಹಾರ ತುಣುಕುಗಳು ಹಿಮ್ಮುಖವಾಗಿ ಚಲಿಸಿ ಅನ್ನ ನಾಳದ ಮೂಲಕ ಬಾಯಿಗೆ ಬರುತ್ತದೆ. ಇದರಿಂದಾಗಿ ಬಾಯಿ ಹುಳಿಯಾಗುವುದರ ಜೊತೆಗೆ ಎದೆ ಉರಿ ಸಹ ಉಂಟಾಗುತ್ತದೆ. ಒಟ್ಟಾರೆ ಪ್ರತಿಕ್ರಿಯೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಎಂದು ಕರೆಯುತ್ತಾರೆ.ಇಂತಹ ರೋಗದಿಂದ ಬಳಲುತ್ತಿದ್ದು 68 ಮಂದಿ ರೋಗಿಗಳನ್ನು ಆಯ್ಕೆ ಮಾಡಿ ಎರಡು ಗುಂಪು ಮಾಡಲಾಯಿತು. ಪ್ರಾಯೋಗಿಕ ಗುಂಪಿನ ರೋಗಿಗಳಿಗೆ ಪ್ರತಿ ಬಾರಿಗೆ 500 ಮೀ ಗ್ರಾಂ ಬೆಟ್ಟದ ನೆಲ್ಲಿಕಾಯಿಯ ಚೂರ್ಣದ ಮಾತ್ರೆಯಂತೆ ದಿನಕ್ಕೆರಡು ಬಾರಿ ಆಹಾರ ತೆಗೆದು ಕೊಂಡ ನಂತರ ಸೇವಿಸಲು ಸೂಚಿಸಲಾಯಿತು ಇದೇ ರೀತಿ 4 ವಾರಗಳವರೆಗೆ ಚಿಕಿತ್ಸೆಯನ್ನು ಮುಂದುವರಿಸಲಾಯಿತು.ನಿಯಂತ್ರಣ ಗುಂಪಿಗೆ ಇದೆ ಪ್ರಮಾಣದ ಔಷಧೇತರ ಮಾತ್ರಗಳನ್ನು ಕೊಡಲಾಯಿತು. ಅವಧಿಯ ನಂತರ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದಾಗ, ಪ್ರಾಯೋಗಿಕ ಗುಂಪಿನ ರೋಗಿಗಳಲ್ಲಿ ಹುಳಿ ತೇಗು ಬರುವುದು ಮತ್ತು ಎದೆ ಉರಿ ಕಡಿಮೆಯಾಗಿತ್ತೆಂದು ವರದಿಯಾಗಿದೆ.

 ಬಾಯಿಯ ಆರೋಗ್ಯವನ್ನು ಉತ್ತಮವಾಗಿಡಲು ಗುಣ :

      20 ಮಂದಿ ಆರೋಗ್ಯವಂತ ಯುವಕರನ್ನು ಆಯ್ಕೆ ಮಾಡಿ ಎರಡು ಗುಂಪು ಮಾಡಲಾಯಿತು.ಪ್ರಾಯೋಗಿಕ ಗುಂಪಿನ ಯುವಕರಿಗೆ ಬೆಟ್ಟದ ನೆಲ್ಲಿಕಾಯಿಯ ಸತ್ವ ಇರುವ ಚೀವಿಂಗ್ ಗಮ್ ಅನ್ನು ಬಾಯಿಯಲ್ಲಿಟ್ಟುಕೊಳ್ಳಲು ತಿಳಿಸಲಾಯಿತು ನಿಯಂತ್ರಣ ಗುಂಪಿನ ಯುವಕರಿಗೆ ಚೀವಿಂಗ್ ಗಮ್ ಇತರ ವಸ್ತುವನ್ನು ಬಾಯಲ್ಲಿಟ್ಟುಕೊಳ್ಳಲು ಸೂಚಿಸಲಾಯಿತು. ಎಲ್ಲ 20 ಮಂದಿಯ ಜೊಲ್ಲು ರಸವನ್ನು ನಿಯಮಿತವಾಗಿ ಸಂಗ್ರಹಿಸಿ ವಿವಿಧ ರೀತಿಯ ಪರೀಕ್ಷೆ ನಡೆಸಿದಾಗ ಬೆಟ್ಟದ ನೆಲ್ಲಿಕಾಯಿಯ ಸತ್ವ ಇರುವ ಚೀವಿಂಗ್ ಗಮ್ ಇಟ್ಟು ಕೊಂಡವರ ಜೊಲ್ಲಿನ ಆಮ್ಲತೆಯ ಪ್ರಮಾಣ,ಗಂಧವ ಸತ್ವದ ಪರಿಣಾಮ ಕಡಿಮೆಯಾಗಿರುವುದು ಕಂಡು ಬಂದಿದೆ ಜೊತೆಗೆ ಜಲ್ಲಿನಲ್ಲಿ ಬ್ಯಾಕ್ಟೀರಿಯಗಳ ಸಂಖ್ಯೆ ಇಳಿಮುಖವಾಗಿರುವುದು ದೃಢಪಟ್ಟಿದೆ.ಇದರಿಂದ ಹಲ್ಲಿನ ಮೇಲೆ ಕರೆ ಕಟ್ಟುವ ಮತ್ತು ವಸಡಿನ ಕಾಯಿಲೆ ಉಂಟಾಗುವ ಸಂಭವ ಕಡಿಮೆ. ಒಟ್ಟಾರೆ ಬೆಟ್ಟದ ನೆಲ್ಲಿಕಾಯಿಯ ಸತ್ವ ಇರುವ ಈ  ಚೀವಿಂಗ್ ಗಮ್ ಅನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಬಾಯಿಯ ಆರೋಗ್ಯ ಉತ್ತಮವಾಗಿರುತ್ತದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

 ಮಧುಮೇಹವನ್ನು ನಿಯಂತ್ರಣದಲ್ಲಿಡುವ ಗುಣ :

     ಆರೋಗ್ಯವಂತ ಕಾರ್ಯಕರ್ತರು ಮತ್ತು ಮಧುಮೇಹ ರೋಗಿಗಳನ್ನು ಆಯ್ಕೆ ಮಾಡಿ ಒಂದು ಪಾಯಿಂಟ್ ಎರಡು ಮತ್ತು ಮೂರು ಗ್ರಾಂ ಪ್ರಮಾಣದ ಬೆಟ್ಟದ ನಲ್ಲಿಕಾಯಿ ಚೂರ್ಣವನ್ನು ದಿನಕ್ಕೆ ಒಂದು ಬಾರಿ ಸೇವಿಸಲು ಕೊಡಲಾಯಿತು. ಈ ಚಿಕಿತ್ಸೆಯನ್ನು 21 ದಿನಗಳ ವರೆಗೆ ಮುಂದುವರೆಸಿ ಅವಧಿಯ ನಂತರ ಪರೀಕ್ಷಿಸಿದಾಗ, ಮಧುಮೇಹಿಗಳಲ್ಲಿ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ನಿಯಂತ್ರಣಕ್ಕೆ ಬಂದಿತೆಂದು ವರದಿಯಾಗಿದೆ ಎರಡು ಮತ್ತು ಮೂರು ಗ್ರಾಂ ಚೂರ್ಣ ಸೇವಿಸಿದ ಕಾರ್ಯಕರ್ತರು ಮತ್ತು ಮಧುಮೇಹ ರೋಗಿಗಳಿಬ್ಬರಲ್ಲೂ ಕೆಟ್ಟ ಕೊಲೆಸ್ಟ್ರಿರಾನ ಪ್ರಮಾಣ ಕಡಿಮೆಯಾಗಿ ಹಾಗೂ ಒಳ್ಳೆಯ ಕೊಲೆಸ್ಟಿರಾಲ್ ಪ್ರಮಾಣ ವೃದ್ಧಿಯಾಗಿರುವುದು ತಿಳಿದುಬಂದಿದೆ.

 ಮಧುಮೇಹಿಗಳ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ :

      ಮೂತ್ರಪಿಂಡ ವೈಫಲ್ಯಗೊಂಡ ಈ ರೋಗಿಗಳು ಡಯಾಲಿಸಿಸ್ ಗೆ ಒಳಗಾಗುತ್ತಾರೆ. ರೋಗಿಗಳ ಆರೋಗ್ಯದಲ್ಲಿ ಹಲವಾರು ತೊಂದರೆಗಳಿರುತ್ತವೆ. ಇಂತಹ ತೊಂದರೆ ಇರುವ 13 ಮಂದಿ ರೋಗಿಗಳಿಗೆ ರಾಸಾಯನಿಕ ಸತ್ವ ಮತ್ತು ಬೆಟ್ಟದ ನೆಲ್ಲಿಕಾಯಿಯ ಸತ್ವ ಒಂದು ಪ್ಯಾಂಟ್ ಒಂದು ಪ್ರಮಾಣದ ಮಿಶ್ರಣವನ್ನು ಮೂರು ತಿಂಗಳು ಸೇವಿಸಲು ಕೊಟ್ಟು ಪರಿಚಿಸಿದಾಗ ಉತ್ತಮ ಫಲಿತಾಂಶ ಕಂಡು ಬಂದಿದೆ ಈ ಔಷಧಿಯಿಂದ ದೇಹದ ಮೇಲೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಇರಲಿಲ್ಲವೆಂದು ವರದಿಯಾಗಿದೆ.