ಮನೆ ಆರೋಗ್ಯ ಬೆಟ್ಟದ ನೆಲ್ಲಿಕಾಯಿ: ಕೊಬ್ಬಿನಂಶವನ್ನು ಕಡಿಮೆ ಮಾಡುವ ಗುಣ

ಬೆಟ್ಟದ ನೆಲ್ಲಿಕಾಯಿ: ಕೊಬ್ಬಿನಂಶವನ್ನು ಕಡಿಮೆ ಮಾಡುವ ಗುಣ

0

     ರಕ್ತದಲ್ಲಿ ಅಧಿಕ ಪ್ರಮಾಣದ ಲಿಪಿಡ್ ಸಂಗ್ರಹವಾಗುವುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಡಿಪ್   ಲಿಪಿಡೇಮಿಯ ಎಂದು ಕರೆಯುತ್ತಾರೆ.ರಕ್ತದಲ್ಲಿ 4  ಬಗೆಯ ಕೊಬ್ಬಿನಾಂಶಗಳು ಶೇಖರವಾಗುತ್ತವೆ. ಅವುಗಳೆಂದರೆ.

Join Our Whatsapp Group

1. ಹೈ ಡೆನ್ಸಿಟಿ ಲಿಪೊಪ್ರೋಟೀನ್

2. ಲೊ ಡೆನ್ಸಿಟಿ ಲಿಪೊ ಪ್ರೋಟೀನ್.

3. ವೆರಿ ಲೊ ಡೆನ್ಸಿಟಿ ಲಿಪೋ ಪ್ರೋಟೀನ್.

4. ಟ್ರೈಗ್ಲಿಸರೈಡ್ಸ್

      ರಕ್ತದಲ್ಲಿ ಕೊಬ್ಬಿನಾಂಶ ಹೆಚ್ಚಾಗಿದೆಯೆಂದರೆ LDL, VLDL ಮತ್ತು ಟ್ರೈಗ್ಲಿಸರೈಡ್ ನ ಪ್ರಮಾಣ ಹೆಚ್ಚಾಗಿದೆಯೆಂದು, ಜೊತೆಗೆ  HDL  ನ ಪ್ರಮಾಣ ಕಡಿಮೆಯಾಗಿದೆಯೆಂದರ್ಥ.LDL ಮತ್ತು VLDL ಗಳನ್ನು ಕೆಟ್ಟ ಕೊಲೆಸ್ಟಿರಾಲ್ ಎಂದು ಮತ್ತು HDL ಅನ್ನು ಒಳ್ಳೆಯ ಕೊಲೆಸ್ಟಿರಾಲ್ ಎಂದು ಕರೆಯುತ್ತಾರೆ. LDL ದಮನಿಗಳ ಒಳ ಭಾಗದಲ್ಲಿ ಸಂಗ್ರಹವಾಗಿ ರಕ್ತದ  ಸುಗಮ ಸಂಚಾರಕ್ಕೆ ತಡೆಯುಂಟು ಮಾಡುವುದರ ಮೂಲಕ ಹೃದಯಘಾತಕ್ಕೆ ಕಾರಣವಾಗುತ್ತದೆ. VLDL, ಟ್ರೈಗ್ಲಿಸರೈ ಅನ್ನು ರಕ್ತದ ಮೂಲಕ ಸಾಗಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಟ್ರೈಗ್ಲಿಸರೈಡ್ ನ ಪ್ರಮಾಣ ಅವಶ್ಯಕತೆಗಿಂತ ಹೆಚ್ಚಾದರೆ ಹೃದಯ ಸಂಬಂಧ ಕಾಯಿಲೆಗಳಿಗೆ ನಾಂದಿಯಾಗುತ್ತದೆ.HDL ನ ಪ್ರಮಾಣ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು ಒಳ್ಳೆಯದು. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟಿರಾಲ್ LDL, VLDL ಗಳನ್ನು ನಿರ್ಮೂಲನ ಮಾಡುತ್ತದೆ.

       ರಕ್ತ ಪರೀಕ್ಷೆ ಮಾಡಿಸಿದಾಗ ರಕ್ತದಲ್ಲಿ ಅಧಿಕ ಪ್ರಮಾಣದ LDL, VLDL,ಮತ್ತು ಟ್ರೈಗ್ಲಿಸರೈಡ್  ಇದೆಯೆಂದು ಮತ್ತು HDLನ ಪ್ರಮಾಣ ಕಡಿಮೆಯಿರುವುದು ಕಂಡುಬಂದರೆ ಹೃದಯ ಸಂಬಂಧದ ಕಾಯಿಲೆಯುಂಟಾಗುವ ಸಾಧ್ಯತೆಯ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಆದುದರಿಂದ ಆರೋಗ್ಯವಂತರಾಗಿರಲು ಅಧಿಕ ಪ್ರಮಾಣದ ಕೊಬ್ಬಿನಾಂಶವಿರದ ಆಹಾರ ಪದ್ಧತಿಯನ್ನು ಆಚರಣೆಗೆ ತಂದು ನಿಯಮಿತ ವ್ಯಾಯಾಮ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು.

       ಕೊಬ್ಬಿನಾಂಶ ಹೆಚ್ಚಾಗಿರುವುದಾಗಿ ದೃಡಪಟ್ಟ 98 ರೋಗಿಗಳನ್ನು ಆಯ್ಕೆ ಮಾಡಿ ಎರಡು ಗುಂಪು ಮಾಡಲಾಯಿತು. ಒಂದು ಗುಂಪಿಗೆ ಬೆಟ್ಟದ ನಲ್ಲಿಕಾಯಿಯ ಸತ್ವವನ್ನು ದಿನಕ್ಕೆಎರಡು ಬಾರಿಯಂತೆ 12 ವಾರ ಸೇವಿಸಲು ಕೊಡಲಾಯಿತು. ಎರಡನೆಯ ಗುಂಪಿಗೆ ಇದೇ ಪ್ರಮಾಣದ ಔಷಧೀಯತರ ವಸ್ತು ಮೇಲೆ ತಿಳಿಸಲಾದ ರೀತಿಯಲ್ಲಿ ಹನ್ನೆರಡು ವಾರ ಸೇವಿಸಲು ಸೂಚಿಸಲಾಯಿತು.ಅವಧಿಯ ನಂತರ ಪರೀಕ್ಷಿಸಿದಾಗ,ಬೆಟ್ಟದ ನೆಲ್ಲಿಕಾಯಿ ಸೇವಿಸಿದ ರೋಗಿಗಳಲ್ಲಿ ರಕ್ತದಲ್ಲಿನ ಮತ್ತು ಡ್ರೈ ಗ್ಲಿಸರೈಡ್  ಪ್ರಮಾಣ ಕಡಿಮೆಯಾಗಿರುವುದು ದೃಢಪಟ್ಟಿದೆ.

       ಮೆಥನಾಲ್ ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವದಲ್ಲಿ ಶೇಕಡ 30 ಎಲ್ಲಾ ಜಿ ಟ್ರಾನಿನ್ಸ್  ಇರುವಂತೆ ನೋಡಿಕೊಳ್ಳಲಾಗದೆ.ಈ ಸತ್ವದ ಪುಡಿಯನ್ನು 500 ಮೀ ಗ್ರಾಂ ಪ್ರಮಾಣದ ಕ್ಯಾಪ್ಸೂಲ್ ಗಳಲ್ಲಿ ತುಂಬಿ ಸಿದ್ಧಪಡಿಸಲಾಯಿತು. ಕೊಬ್ಬಿನಾಂಶ ಹೆಚ್ಚಾಗಿರುವ 30 ಮಂದಿ ರೋಗಿಗಳಿಗೆ, ದಿನಕ್ಕೆ ಎರಡು ಬಾರಿ ಪ್ರತಿ ಬಾರಿ ಒಂದು ಕ್ಯಾಪ್ಸೂಲ್ ನಂತೆ ನಾಲ್ಕು ತಿಂಗಳು ಸೇವಿಸಲು ಕೊಡಲಾಯಿತು.ಅವಧಿಯ ನಂತರ ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸಿದಾಗ ಬೆಟ್ಟದ ನೆಲ್ಲಿಕಾಯಿಯ ಸತ್ವ ಸೇವಿಸುವುದರಲ್ಲಿ ಕೊಬ್ಬಿನಾಂಶ ಕಡಿಮೆಯಾಗಿರುವುದು ಕಂಡು ಬಂದಿದೆ.ಇದರ ಜೊತೆಗೆ ರೋಗಿಗಳಲ್ಲಿ ಒಳ್ಳೆಯ ಕೊಲೆಸ್ಟಿರಾಲ್ ನ ಪ್ರಮಾಣ ಹೆಚ್ಚಾಗಿರುವುದು ವರದಿಯಾಗಿದೆ.

 ಚರ್ಮವನ್ನು ರಕ್ಷಿಸುವ ಮತ್ತು ಮುಪ್ಪಿನ ಲಕ್ಷಣಗಳನ್ನು ಉಂಟಾಗದಂತೆ ಮಾಡುವ ಗುಣ :

       ಆರೋಗ್ಯವಂತ ಸ್ತ್ರೀಯರಿಗೆ 30 ಮೀ ಗ್ರಾಂ ಪ್ರಮಾಣದ ಬೆಟ್ಟದ ನೆಲ್ಲಿಕಾಯಿಯ ಸತ್ವವನ್ನು ಜ್ಯೂಸ್ ರೀತಿಯಲ್ಲಿ ದಿನಕ್ಕೆ ಒಂದು ಬಾರಿ ಕುಡಿಯಲು ತಿಳಿಸಲಾಗಿತ್ತು 12 ವಾರ ಸೇವಿಸಿದ ನಂತರ ಪರೀಕ್ಷಿಸಿದಾಗ ಚರ್ಮದ ಸ್ಥಿತಿ  ಸ್ಥಾಪಕತ್ವ ಉತ್ತಮ ಗೊಂಡಿತೆಂದು, ಚರ್ಮದ ಸುಕ್ಕು ಕಡಿಮೆಯಾಗಿ, ಚರ್ಮಕಾಂತಿಯುಕ್ತವಾಗಿತ್ತೆಂದು ವರದಿಯಾಗಿದೆ.ಬೆಟ್ಟದ ನೆಲ್ಲಿಕಾಯಿ ಸತ್ವಕ್ಕೆ ಚರ್ಮವನ್ನು ರಕ್ಷಿಸುವ ಮತ್ತು ಮುಪ್ಪಿನ ಲಕ್ಷಣಗಳುಂಟಾಗದಂತೆ ಮಾಡುವ ಗುಣವಿದೆಯೆಂದು ಕಂಡು ಬಂದಿದೆ.

 ದೈಹಿಕ ಸಾಮರ್ಥ್ಯವನ್ನು ಉತ್ತಮಪಡಿಸುವ ಗುಣ :

    40 ರಿಂದ 60 ವಯೋಮಾನದ ಹತ್ತು ಮಂದಿ ಸ್ವಯಂ ಸೇವಕರನ್ನು ಆಯ್ಕೆ ಮಾಡಿ ಅವರಿಗೆ ಪ್ರತಿ ಬಾರಿಗೆ 100 ಮೀ. ಲಿ.ಬೆಟ್ಟದ ನೆಲ್ಲಿಕಾಯಿ ರಸದಂತೆ ದಿನಕ್ಕೆ ಎರಡು ಬಾರಿ ಕುಡಿಯಲು ಕೊಡಲಾಯಿತು.ಊಟಕ್ಕೆ ಕೇವಲ ಚಪಾತಿ ಮತ್ತು ಬೇಳೆ ತವ್ವೆಯನ್ನು ಸೇವಿಸುವಂತೆ ಸೂಚಿಸಲಾಯಿತು. ಈ ಚಿಕಿತ್ಸೆಯನ್ನು 30 ದಿನಗಳವರೆಗೆ ಮುಂದುವರಿಸಿದ ನಂತರ ಪರೀಕ್ಷೆಗೆ ಒಳಪಡಿಸಿದಾಗ, ಬೆಟ್ಟದ ನೆಲ್ಲಿಕಾಯಿಯ ರಸ ಕುಡಿದು ಸ್ವಯಂಸೇವಕರ ದೈಹಿಕ ಸಾಮರ್ಥ್ಯ ಇತರರಿಗಿಂತ ಹೆಚ್ಚಾಗಿತ್ತೆಂದು  ವರದಿಯಾಗಿದೆ. ಬೆಟ್ಟದ ನೆಲ್ಲಿಕಾಯಿಯ ರಸದ ಈ ಗುಣಕ್ಕೆ ಇರುವ ಆೄಂಟಿ ಆಕ್ಸಿಡೆಂಟ್ ಗುಣ ಮತ್ತು ಕೊಲೆಸ್ಟಿರಾಲ್  ಅಂಶವನ್ನು ಕಡಿಮೆ ಮಾಡುವ ಗುಣ ಕಾರಣವೆಂದು ಅಭಿಪ್ರಾಯಕ್ಕೆ ಬರಲಾಗಿದೆ.ನೆಲ್ಲಿಕಾಯಿಯ ರಸ ಮುದಿತನದ ಕಾಯಿಲೆಗಳ ಚಿಕಿತ್ಸೆಗೆ ಉಪಯುಕ್ತವೆನ್ನಲಾಗಿದೆ.