ರಾಮನಗರ: ಚನ್ನಪಟ್ಟಣ ಉಪಚುನಾವಣಾ ಅಖಾಡ ರಂಗೇರುತ್ತಿದೆ. ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಚುನಾವಣಾ ಪ್ರಚಾರದಲ್ಲಿ ತೊಡಗಿರುವ ನಿಖಿಲ್ ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ.
ಚನ್ನಪಟ್ಟಣ ಕನ್ನಮಂಗಲ ಗ್ರಾಮದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ “ನಾನು ರಾಜಕೀಯ ಕುತಂತ್ರದಿಂದ ಸೋತೆ” ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾದರು.
ಸಾಕಷ್ಟು ನೋವುಗಳಿವೆ. ಜನರು ನನ್ನ ಪರವಾಗಿದ್ದಾರೆ, ಆದರೆ ರಾಜಕೀಯದ ಷಡ್ಯಂತ್ರಕ್ಕೆ ಎರಡು ಚುನಾವಣೆಯಲ್ಲೂ ಪೆಟ್ಟು ತಿಂದು ನೋವಿನಿಂದಿದ್ದೆ. ಆದರೆ ಪಕ್ಷದ ಕಾರ್ಯಕರ್ತರಿಗೆ ಬೆಲೆ ಕೊಡಬೇಕೆಂದು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಭಾವುಕರಾದರು.
ಈ ವೇಳೆ ಸೇರಿದ ಜನರು, ದೇವೇಗೌಡರ ಮೊಮ್ಮಗ ಕಣ್ಣೀರು ಹಾಕಲು ಚನ್ನಪಟ್ಟಣದ ಜನತೆ ಬಿಡಲಾರರು, ಮೂರನೇ ಬಾರಿಗೆ ಗೆಲುವು ಸಾಧಿಸಲಿದ್ದೀರಿ ಎಂದು ಹೇಳಿದರು.