ಮನೆ ರಾಜಕೀಯ ಹಿಂದೂ ಧರ್ಮ ಹಾಗೂ ಹಿಂದುತ್ವ ಭಿನ್ನವಲ್ಲ: ನಳಿನ್ ಕುಮಾರ್ ಕಟೀಲ್

ಹಿಂದೂ ಧರ್ಮ ಹಾಗೂ ಹಿಂದುತ್ವ ಭಿನ್ನವಲ್ಲ: ನಳಿನ್ ಕುಮಾರ್ ಕಟೀಲ್

0

ಭಟ್ಕಳ: ಹಿಂದೂ ಧರ್ಮ ಹಾಗೂ ಹಿಂದುತ್ವ ಭಿನ್ನವಲ್ಲ. ಹಿಂದೂಗಳಲ್ಲಿ ಎರಡು ಧರ್ಮ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು.

ಈ ಬಾರಿಯ ರಾಜ್ಯ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಯ ಬದಲಾಗಿ ಸಾರ್ವಕರ್ ಹಾಗೂ ಟಿಪ್ಪುವಿನ ಸಿದ್ಧಾಂತಗಳ ನಡುವೆ ನಡೆಯಲಿದೆ. ದೇಶಭಕ್ತ ಸಾರ್ವಕರ್ ಬೇಕಾ? ಅಥವಾ ಮತಾಂಧ ಟಿಪ್ಪು ಬೇಕಾ? ಎಂಬ ತೀರ್ಮಾನ ಜನ ಮಾಡಲಿದ್ದಾರೆ

ತಾಲ್ಲೂಕಿನ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಮಂಗಳವಾರ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಪೇಜ್ ಪ್ರಮುಖರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಟಿಪ್ಪುವಿನ ಹೆಸರಿನಲ್ಲಿ ಟಿಪ್ಪು ಜಯಂತಿ ಮಾಡಿ ಹಿಂದೂ ಮುಸ್ಲಿಂರನ್ನು ಒಡೆದು ಹಾಕಿದ ಸಿದ್ದರಾಮಯ್ಯ ವಿರಶೈವ ಲಿಂಗಾಯತ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯಲು ಯತ್ನಿಸಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದ ಎಚ್.ಡಿ.ಕುಮಾರಸ್ವಾಮಿ ಸಮಾಜ ಜೋಡಿಸುವ ಕೆಲಸ ಮಾಡುವ ಬದಲು ಬ್ರಾಹ್ಮಣರ ಬಗ್ಗೆ ಅವಹಳೇನಕಾರಿ ಹೇಳಿಕೆ ನೀಡಿ ಬ್ರಾಹ್ಮಣ ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ ಎಂದರು.

ರಾಮಕೃಷ್ಣ ಹೆಗಡೆಯವರಿಗೆ ಕಲ್ಲು ಹೊಡೆದ ಪಾರ್ಟಿಯವರು ಇಂದು ಅದೇ ಸಮಾಜವನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಹಿಂದಿನ ಲೇಖನಕಾಡುವ ಅಪರಾಧಿಭಾವದಿಂದ ವ್ಯಕ್ತಿತ್ವವೇ ಬದಲಾಗಬಹುದು
ಮುಂದಿನ ಲೇಖನಆಪರೇಷನ್‌ ಕಮಲದ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ: ಸಿದ್ದರಾಮಯ್ಯ