ಮನೆ ಮನರಂಜನೆ ಐತಿಹಾಸಿಕ ಕ್ಷಣ – ಆಸ್ಕರ್ ವೇದಿಕೆ ಪ್ರವೇಶಿಸಿದ ʻಕಾಂತಾರ: ಚಾಪ್ಟರ್ 1ʼ

ಐತಿಹಾಸಿಕ ಕ್ಷಣ – ಆಸ್ಕರ್ ವೇದಿಕೆ ಪ್ರವೇಶಿಸಿದ ʻಕಾಂತಾರ: ಚಾಪ್ಟರ್ 1ʼ

0

ಆಸ್ಕರ್ ವೇದಿಕೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಸದ್ದು ಮಾಡುವ ಸಮಯದ ಹತ್ತಿರ ಬರುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಆಸ್ಕರ್ ವೇದಿಕೆ​ಗೆ ಪ್ರವೇಶಿಸಿದೆ. ʻಮಹಾವತಾರ್‌ ನರಸಿಂಹʼ ಹಾಗೂ ʻಕಾಂತಾರ: ಅಧ್ಯಾಯ 1ʼ ಚಿತ್ರಗಳು ಅಧಿಕೃತವಾಗಿ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿವೆ. ಇದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಹಾಗೂ ಐತಿಹಾಸಿಕ ಕ್ಷಣವಾಗಿದೆ.

ಆಸ್ಕರ್‌ ಪ್ರಶಸ್ತಿ ರೇಸ್‌ನಲ್ಲಿರುವ ಚಿತ್ರಗಳ ಅಂತಿಮ ಪಟ್ಟಿ ಜ.22 ರಂದು ಪ್ರಕಟವಾಗಲಿದೆ. ಮಾರ್ಚ್‌ 15 ರಂದು ಚಿತ್ರಗಳಿಗೆ ಆಸ್ಕರ್‌ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ವರ್ಷ ‘ಕಾಂತಾರ-1’ ಹಾಗೂ ‘ಮಹಾವತಾರ್‌ ನರಸಿಂಹ’ ಚಿತ್ರಗಳು ತೆರೆಕಂಡು ಜನಮನ ಗೆದ್ದಿದ್ದವು. ಕೋಟಿ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದವು. ಚಿತ್ರಗಳನ್ನ ಆಸ್ಕರ್ ವೇದಿಕೆಗೆ ಕೊಂಡೊಯ್ಯುವ ಪ್ರಯತ್ನ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು.

ಆನಿಮೇಟೆಡ್‌ ವಿಭಾಗದಲ್ಲಿ ‘ಮಹಾವತಾರ್‌ ನರಸಿಂಹ’ ಜನರಲ್‌ ಲಿಸ್ಟ್‌ನಲ್ಲಿ ಸ್ಥಾನ ಪಡೆದಿವೆ. ಈ ವರ್ಷದ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಕಾಣಿಸಿಕೊಂಡ 5 ಭಾರತೀಯ ಚಿತ್ರಗಳಲ್ಲಿ 2 ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಸಿನಿಮಾ ಅನ್ನೋದು ಮತ್ತೊಂದು ವಿಶೇಷವಾಗಿದೆ.

ಇದೀಗ ‘ಕಾಂತಾರ ಚಾಪ್ಟರ್‌ – 1 ಹಾಗೂ ʻಮಹಾವತಾರ್‌ ನರಸಿಂಹʼ ಎರಡೂ ಚಿತ್ರಗಳು ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಜಾಗ ಮಾಡಿಕೊಂಡು ಆಸ್ಕರ್ ವಿಭಾಗದಲ್ಲಿ ಪರಿಗಣನೆಗೆ ಒಳಪಟ್ಟಿರುವುದು ಸಂತಸದ ಸಂಗತಿಯಾಗಿದೆ.

‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ರಿಷಬ್ ನಿರ್ದೇಶನ ಮಾಡಿ, ನಟಿಸಿದ್ದಾರೆ. ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ. ʻಕಾಂತಾರ ಚಾಪ್ಟರ್-1‌ʼ ಸಿನಿಮಾ ಆಸ್ಕರ್ ಅಂತಿಮ ನಾಮಿನೇಷನ್ ಪಟ್ಟಿಗೆ ಎಂಟ್ರಿ ಕೊಟ್ಟರೂ ಅದು ದೊಡ್ಡ ಸಾಧನೆ ಆಗಲಿದೆ.