ಮನೆ ಸಾಹಿತ್ಯ ಚರಿತ್ರೆಯು ನಾಯಕನನ್ನು ನಿರ್ಧರಿಸುತ್ತದೆ

ಚರಿತ್ರೆಯು ನಾಯಕನನ್ನು ನಿರ್ಧರಿಸುತ್ತದೆ

0

     ಈಗ ಗಣಿತ, ವಿಜ್ಞಾನ, ಇಂಗ್ಲಿಷ್, ಗಳನ್ನು ಅಭ್ಯಾಸ ಮಾಡಲು ವಿದ್ಯಾರ್ಥಿಗಳು ಹೆಚ್ಚು ಇಷ್ಟ ಪಡುತ್ತಾರೆ. ಚರಿತ್ರೆಯನ್ನು ಅಭ್ಯಾಸ ಮಾಡಲು ಬಯಸುವವರ ಸಂಖ್ಯೆ ಕಡಿಮೆ. ಆದರೆ ಚರಿತ್ರೆ ಇಷ್ಟೊಂದು ಶಕ್ತಿಶಾಲಿ ಎಂದರೆ ವಿಲನ್ ಆಗಿದ್ದವನನ್ನು ಚರಿತ್ರೆಯು ಹೀರೋ ಆಗಿ ಮಾಡಿಬಿಡುತ್ತದೆ.ಹಾಗೆಯೇ ಹೀರೋ ಆಗಿ ಮಾಡಿಬಿಡುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆಗಳೆಂದರೆ ಏಸುಕ್ರಿಸ್ತ ಮತ್ತು ಹಿಟ್ಲರ್.

Join Our Whatsapp Group

      ನೀವು ಏಸುಕ್ರಿಸ್ತನ ಜೀವನ ಚರಿತ್ರೆಯನ್ನು ಓದಿರಬಹುದು. ಅವನು ದೇವರನ್ನು ‘ತಂದೆ’ ಎಂದು ಕರೆದದ್ದೇ ಆ ಕಾಲದಲ್ಲಿ ಜನರಿಗೆ ಮಹಾಪರಾದವಾಗಿ ಕಂಡಿತು. ಏಸುಕ್ರಿಸ್ತನನ್ನು ಮರಣ ದಂಡನೆಗೆ ಗುರಿಪಡಿಸುತ್ತಾರೆ. ಇಬ್ಬರು ಕಳ್ಳರೊಂದಿಗೆ ಏಸುಕ್ರಿಸ್ತನ ಬೆನ್ನ ಮೇಲೆ ಅವನದೆ ಶಿಲುಬೆವೆಯನ್ನು  ಹೊರಸಿಕೊಂಡು ಹೋಗಿ ಶಿಲುಬೆಗೆ ನೇತುಹಾಕಿ ಅವನ ದೇಹಕ್ಕೆಲ್ಲ ಮೊಳೆ ಹೊಡೆದು ಸಾಯಿಸುತ್ತಾರೆ. ಇಷ್ಟು ಕ್ರೂರವಾಗಿ ಕೊಲ್ಲಬೇಕಾದರೆ ಅಂದಿನ ಜನರಿಗೆ ಮತ್ತು ಅಂದಿನ ಆಡಳಿತಕ್ಕೆ ಏಸುಕ್ರಿಸ್ತನೂ ಕೂಡ ಕಳ್ಳರಷ್ಟೇ ಅಪರಾಧಿಯಾಗಿ ಕಂಡಿರುತ್ತಾನೆ.. ಆದರೆ ಚರಿತ್ರೆ ಕೊಡುವ ತೀರ್ಪು ಬೇರೆಯೇ ಆಗಿತ್ತು.ಅವತ್ತು ಕಳ್ಳನಾಗಿ ಕಂಡ ಏಸುಕ್ರಿಸ್ತ ಈಗ ಎರಡು ಸಾವಿರ ವರ್ಷಗಳು ಕಳೆದು ನಂತರವೂ ‘ಹೀರೋ’ ಆಗಿದ್ದಾನೆ  ಜಗತ್ತಿನ ಅತಿ ಹೆಚ್ಚು ಜನರು ಏಸುಕ್ರಿಸ್ತನ ಅನು ಯಾಯಿಗಳಾಗಿದ್ದಾರೆ.

       ಹಿಟ್ಲರ್! ಒಂದನೆಯ ಮಹಾಯುದ್ಧದಲ್ಲಿ ಸೋತು ಕರಕಲಾಗಿ ಹೋದ ಜರ್ಮನಿಗೆ ಅವನು ಶಾಕ್ ಕೊಟ್ಟು ಜೀವತಂದ. ತನ್ನ ಅಧಿಕಾರಾವಧಿಯಲ್ಲಿ ಜರ್ಮನಿ ಹಿಂದೆಂದೂ ಕಾಣದಂತಹ ಅಭಿವೃದ್ಧಿಯನ್ನು ಉಂಟುಮಾಡಿದ. ಆ ಕಾಲಕ್ಕೆ ಜರ್ಮನಿಯ ಜನರಿಗೆ ಅವನು ಖಂಡಿತವಾಗಿಯೂ ಹೀರೋ.ಇಲ್ಲದಿದ್ದರೆ ಇಡೀ ರಾಷ್ಟ್ರವೇ ಅವನನ್ನು ಹಿಂಬಾಲಿಸಲು ಸಾಧ್ಯವಿರಲಿಲ್ಲ. ಆದರೆ ಅದೇ ಹಿಟ್ಲರ್ ಜರ್ಮನಿಯನ್ನು ವಿನಾಶದ ಯುದ್ದಕ್ಕೆ ತಳ್ಳಿದ. ಹಿಟ್ಟರ್ ನ್ನ ಬಗ್ಗೆಯೂ ಚರಿತ್ರೆ ತನ್ನ ತೀರ್ಪನ್ನು ಕೊಟ್ಟಾಗಿದೆ. ಈಗ ಅವನು ಒಬ್ಬ ವಿಲನ್.

      ಬಾಲಗಂಗಾಧರ್ ತಿಲಕರು ಒಂದು ಸಲ, “ನಮ್ಮ ಜೊತೆಗೆ ಬದುಕಿಟ್ಟಿರುವ ಜನರು ನಮ್ಮ ಬಗ್ಗೆ ಕೊಡುವ ತೀರ್ಪಿಗಿಂತ ಚರಿತ್ರೆ ನಮ್ಮ ಬಗ್ಗೆ ಕೊಡುವ ತೀರ್ಪು ಹೆಚ್ಚು ಮೂಲಿಕವೂ, ಮಹತ್ವದ್ದೂ ಆಗಿರುತ್ತದೆ” ಎನ್ನುತ್ತಾರೆ. ಚರಿತ್ರೆಯ ತೀರ್ಪಿಗೆ ಯಾಕೆ ಇಷ್ಟು ಮಹತ್ವ?ಯಾಕೆಂದರೆ ಚರಿತ್ರೆಯು ಯಾವಾಗಲೂ ಪೋರಗಾಮಿ ಯಾದುದನ್ನು ಸ್ವೀಕರಿಸುತ್ತದೆ. ನಮ್ಮೊಂದಿಗೆ ಬದುಕುತ್ತಿರುವವರಿಗೆ ನಮ್ಮ ವಿಚಾರಗಳು ಅವರ ವಿಚಾರಕ್ಕೆ ಸರಿಯಾಗಿರುತ್ತದೆಯೇ ಎಂಬುದಷ್ಟೇ ಮುಖ್ಯವಾಗಿತ್ತದೆ. ನಮ್ಮೊಂದಿಗೆ ಬಾಳುವ ಜನರಿಗೆ ನಮ್ಮ ಒಡನಾಟ, ನಮ್ಮ ಮೇಲಿನ ಪ್ರೀತಿ -ಸಿಟ್ಟು ಎಲ್ಲವೂ ಮುಖ್ಯವಾಗುತ್ತದೆ.ಆದರೆ ಚರಿತ್ರೆಗೆ ನಮ್ಮ ಕೆಲಸಗಳಷ್ಟೇ ಮುಖ್ಯವಾ ಗುತ್ತದೆ ಅದನ್ನು ನಿಷ್ಠಕ್ಷಪಾತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಯಾರು ಸರಿಯಾದುದನ್ನು ಮಾಡಿರುತ್ತಾರೋ ಅವರನ್ನು ಹೀರೋ ಹಾಗೆ ಮಾಡುವ ಚರಿತ್ರೆ ತಪ್ಪು ಮಾಡಿರುವವರನ್ನು ನಿರ್ದಾಕ್ಷಿಣ್ಯವಾಗಿ ವಿಲನ್ ಆಗಿಯೂ ಮಾಡುತ್ತದೆ.