ಬೆಂಗಳೂರು: ಇದೇ ಮಾರ್ಚ್ 23 ರಂದು ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ರಜೆ ನೀಡಿ ಹೈಕೋರ್ಟ್ ಆದೇಶಿಸಿದೆ.
ಅಲ್ಲದೇ ಈ ದಿನದ ಬದಲಿಗೆ ಜುಲೈ 27 ರಂದು ನ್ಯಾಯಾಲಯಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.
ಈ ಕುರಿತಂತ ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ.
ನೋಟಿಫಿಕೇಷನ್ ನಲ್ಲಿ ಮಾರ್ಚ್ 23 ರಂದು ರಾಜ್ಯದ ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೆ non-working/non-sitting day ಆಗಿರಲಿದೆ. ಇದಕ್ಕೆ ಬದಲಾಗಿ ಜುಲೈ 27 ರ ಶನಿವಾರದಂದು ರಾಜ್ಯದ ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೆ working/full sitting day ಆಗಿರಲಿದೆ ಎಂದು ತಿಳಿಸಲಾಗಿದೆ.
ಹೈಕೋರ್ಟ್ ನೋಟಿಫಿಕೇಷನ್: https://karnatakajudiciary.kar.nic.in/noticeBoard/DJ_nonsitting04032024.pdf
Saval TV on YouTube