ಮನೆ ರಾಜಕೀಯ ಮನೆ‌  ಮಹಡಿ ಕುಸಿತ ಪ್ರಕರಣ: ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಸಚಿವ ಕೆ.ಗೋಪಾಲಯ್ಯ

ಮನೆ‌  ಮಹಡಿ ಕುಸಿತ ಪ್ರಕರಣ: ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಸಚಿವ ಕೆ.ಗೋಪಾಲಯ್ಯ

0

ಮಂಡ್ಯ:  ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿಂದು ಬೆಳಿಗ್ಗೆ ಬಸವೇಶ್ವರ ದೇವರ ಕೊಂಡ ನೋಡಲು ಜನ ನಿಂತಿದ್ದ ಮನೆಯ ಮಹಡಿ ಕುಸಿದು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರ ಯೋಗಕ್ಷೇಮವನ್ನು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ವಿಚಾರಿಸಿದರು.

ಇಂದು ಬೆಳಿಗ್ಗೆ  6 ಗಂಟೆಗೆ  ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಬಸವೇಶ್ವರ ಕೊಂಡ ನೋಡಲು  ದೇವಸ್ಥಾನದ ಮುಂಭಾಗ ಇರುವ  ಮಾದೇಗೌಡರ ನಿವಾಸದ  ಮಹಡಿ  ಮೇಲೆ‌ ಸುಮಾರು 80ಕ್ಕು ಅಧಿಕ  ಜನ ನಿಂತಿದ್ದರು. ಈ ಭಾರ ತಡೆಯದೆ ಮಹಡಿ  ಕುಸಿದಿದ್ದು 40 ಜನಕ್ಕೆ ಪೆಟ್ಟಾಗಿದ್ದು ಅದೇ ಗ್ರಾಮದ ಶ್ರೀಮತಿ ಪುಟ್ಟಲಿಂಗಮ್ಮ(50) ಅವರು ಘಟನೆಯಲ್ಲಿ ಸಾವು ಕಂಡಿದ್ದಾರೆ.

ಸುದ್ದಿ ತಿಳಿದ ಸಚಿವರು ತಕ್ಷಣವೇ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಮಂಡ್ಯ ಜಿಲ್ಲಾ ಆಸ್ಪತ್ರೆ ಮತ್ತು ಮದ್ದೂರು ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ‌ ಯೋಗ ಕ್ಷೇಮ‌ ವಿಚಾರಿಸಿದರು. ಮೃತಪಟ್ಟಿರುವ ಪುಟ್ಟಲಿಂಗಮ್ಮ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ 1 ಲಕ್ಷ ರೂ ವೈಯಕ್ತಿಕವಾಗಿ ಪರಿಹಾರ ನೀಡಿ,ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 5 ಲಕ್ಷ ರೂ ಪರಿಹಾರ ನೀಡುವ ಸಲುವಾಗಿ ಮುಖ್ಯ ಮಂತ್ರಿಗಳ‌ ಜೊತೆ ಮಾತನಾಡುವುದಾಗಿ ತಿಳಿಸಿದರು.

ಮದ್ದೂರು ಶಾಸಕ‌ ಡಿ.ತಮ್ಮಣ್ಣ ,ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ, ಎಸ್ಪಿ ಯತೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.