ಮನೆ ರಾಜ್ಯ ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ: ಕೊನೆ ಕ್ಷಣದ ಕಸರತ್ತು

ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ: ಕೊನೆ ಕ್ಷಣದ ಕಸರತ್ತು

0

ಮೈಸೂರು(Mysuru): ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಮತಗಟ್ಟೆಗಳಲ್ಲಿ ಕಾರ್ಯಕರ್ತರು, ಬೆಂಬಲಿಗರು ಹಾಗೂ ಮುಖಂಡರು ಕೊನೆ ಕ್ಷಣದ ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಜಿಲ್ಲೆಯ ಹುಣಸೂರು ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ. ಕಾಂಪೌಂಡ್ ಹೊರಗೆ ಅಭ್ಯರ್ಥಿಗಳ ಕಡೆಯವರು ಪೆಂಡಾಲ್ ಹಾಕಿಕೊಂಡು ಮತದಾರರಿಗೆ ಚೀಟಿ ಬರೆದುಕೊಡುತ್ತಾ, ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಕೋರುತ್ತಿದ್ದಾರೆ.

ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯವರ ಪೆಂಡಾಲ್‌ಗಳ ಬಳಿ ಹೆಚ್ಚಿನ ಕಾರ್ಯಕರ್ತರು ಕಂಡುಬಂದರು. ಪಕ್ಷೇತರ ಅಭ್ಯರ್ಥಿ ಪ್ರಸನ್ನ ಎನ್. ಗೌಡ ಕಡೆಯವರು ಹಾಕಿದ್ದ ಪೆಂಡಾಲ್ ಬಳಿಯೂ ಜನರಿದ್ದರು. ಗೇಟಿನ ಎರಡೂ ಬದಿಯಲ್ಲಿ ನಿಂತಿದ್ದ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಬೆಂಬಲಿಸುವಂತೆ ಕೋರಿಕೊಳ್ಳುತ್ತಿದ್ದುದು ಕಂಡುಬಂತು.

ಈ ಮತಗಟ್ಟೆಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹಾಗೂ ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ಮತದಾನ ಮಾಡಿದರು.

ಹಿಂದಿನ ಲೇಖನನ್ಯಾಷನಲ್ ಹೆರಾಲ್ಡ್ ಕೇಸ್: ಇಡಿ ಕಚೇರಿ ತಲುಪಿದ ರಾಹುಲ್ ಗಾಂಧಿ
ಮುಂದಿನ ಲೇಖನಬೆಂಗಳೂರು – ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ: ಆಟೋ ಚಾಲಕನ ಸ್ಥಿತಿ ಗಂಭೀರ