ಬೆಂಗಳೂರು(Bengaluru): ಬೆಂಗಳೂರಿನಲ್ಲಿ ಮಳೆಯಿಂದಾಗಿ ಜನರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ವಿಪಕ್ಷ ಸಿದ್ಧರಾಮಯ್ಯ ನೆರೆ ಹಾನಿ ಪ್ರದೇಶಕ್ಕೆ ಭೇಟಿ ಬೆನ್ನಲ್ಲೆ ಗೃಹ ಸಚಿವ ಅರಗ ಜ್ಞಾನೇಂದ್ರ ಸಹ ನೆರೆಹಾನಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರಕೃತಿ ವಿಕೋಪವಾಗಿದೆ. ಬಹಳಷ್ಟು ಮನೆಗಳು ಜಲಾವೃತವಾಗಿವೆ. ಮಳೆಗೆ ಅನೇಕ ಕುಟಂಬಗಳು ಕಷ್ಟ ಅನುಭವಿಸಿದ್ದಾರೆ.
ಜನರು ಕಷ್ಟದಲ್ಲಿದ್ದಾಗ ರಾಜಕೀಯ ಮಾಡಬಾರದು. ಲಾಭ ಪಡೆಯುವ ಕೆಲಸ ಸಿದ್ಧರಾಮಯ್ಯ ಮಾಡಬಾರದು. ಸರ್ಕಾರಕ್ಕೆ ಸಿದ್ಧರಾಮಯ್ಯ ಸಲಹೆ ಕೊಡಬೇಕು ಎಂದು ಹೇಳಿದರು.