● ಸ್ವಮೂತ್ರದಿಂದ ಬಾಯಿಮುಕ್ಕಳಿಸಿ ಹಲ್ಲು ನೋವು ತಟ್ಟನೆ ನಿಂತು ಹೋಗುವುದು
● ನಾಲ್ಕೈದು ವೀಳ್ಯದೆಲೆಗಳನ್ನು ಎರಡು ಬಟ್ಟಲು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕಷಾಯದಿಂದ ಬಾಯಿ ಮುಕ್ಕಳಿಸಿ,
● ಒಂದು ಬಟ್ಟಲು ಬಿಸಿ ನೀರಿನಲ್ಲಿ ಒಂದು ಟೀ ಚಮಚ ಅಡುಗೆ ಉಪ್ಪು ಕದಡಿ ಆ ನೀರಿನಿಂದ ಬಾಯಿ ಮುಕ್ಕಳಿಸಿ,
● ನಾಲ್ಕೈದು ಲವಂಗಗಳನ್ನು ನಿಂಬೆರಸದಲ್ಲಿ ಅರೆಯಿರಿ ಆ ಸರಿಯಿಂದ ವಸಡು ಮತ್ತು ಹಲ್ಲುಗಳನ್ನು ತಿಕ್ಕಿ
● ಹಿಂಗನ್ನು ನುಣ್ಣಗೆ ಪುಡಿ ಮಾಡಿ ಒಂದು ಚಿಟಿಕೆ ಪುಡಿಯನ್ನು ನೋಯುತ್ತಿರುವ ಹಲ್ಲಿನ ಬುಡದಲ್ಲಿಟ್ಟು ಬೆರಳಿನಿಂದ ಒತ್ತುಕೊಳ್ಳಿ
(ಸೂಚನೆ ಹಿಂಗಿನ ಪುಡಿಗೆ ಬದಲಾಗಿ ನಶ್ಯವನ್ನಾದರೂ ಬಳಸಬಹುದು)
● ಒಂದೆರಡು ತೊಟ್ಟು ಲವಂಗದ ಎಣ್ಣೆಯನ್ನು ನೋಯುತ್ತಿರುವ ಹಲ್ಲುಗಳ ಸಂಧಿಯಲ್ಲಿ ಬಿಡಿ
● ಅರಿಶಿಣದ ಪುಡಿಯೊಂದಿಗೆ ಸ್ವಲ್ಪ ಉಪ್ಪಿನ ಪುಡಿಯನ್ನು ಮಿಶ್ರಣ ಮಾಡಿ ಈ ಮಿಶ್ರಣವನ್ನು ದಂತ ಧಾವನ ಚೂರ್ಣವಾಗಿ ಬಳಸಿ
● ಹಸಿ ಬೇವಿನ ಕಡ್ಡಿಯ ಕುಂಚದಿಂದ ದಿನಕ್ಕೆ ಎರಡು ಬಾರಿ ಹಲ್ಲು ತಿಕ್ಕುವ ಅಭ್ಯಾಸ ಬೆಳೆಸಿಕೊಳ್ಳಿ ● ಅಪ್ಪಟ ಹಿಂಗನ್ನು ನಿಂಬೆರಸದಲ್ಲಿ ಕರಗಿಸಿ ಆ ರಸವನ್ನು ಸ್ವಲ್ಪ ಬಿಸಿ ಮಾಡಿ ಅದರಲ್ಲಿ ಹತ್ತಿಯನ್ನು ಅದ್ದಿ ನೋಯುತ್ತಿರುವ ಹಲ್ಲಿನ ಮೇಲಿಡಿ ಒಂದೆರಡು ನಿಮಿಷಗಳಲ್ಲಿ ನೋವು ನಿವಾರಣೆಯಾಗುವುದು
● ಪರಂಗಿ ಕಾಯಿಯ ಮೇಲ್ಭಾಗವನ್ನು ಮೊಳೆಯಿಂದ ಗೀಚಿದರೆ ಹಾಲಿನಂತಹ ದ್ರವ ಸ್ರವಿಸುವುದು ಅದನ್ನು ಹಚ್ಚುವುದರಿಂದ ಹಲ್ಲು ನೋವು ಗುಣವಾಗುವುದು
● ಸುಮಾರು ಎರಡು ಬಟ್ಟಲು ನೀರಿಗೆ ಐದಾರು ಲವಂಗ ಅಥವಾ ಟೀ ಚಮಚ ಓಂ ಕಾಳು ಹಾಕಿ ಚೆನ್ನಾಗಿ ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿ, ನಾಲ್ಕಾರು ಬಾರಿ ಈ ಉಪಚಾರ ಮಾಡುವುದರಿಂದ ಹಲ್ಲು ನೋವು ಶಮನವಾಗುವುದು
● ಹಸಿ ಈರುಳ್ಳಿಯನ್ನು ಹಲ್ಲುಗಳಿಂದ ಕಚ್ಚಿ ತಿನ್ನುತ್ತಿದ್ದರೆ ಹಲ್ಲು ನೋವು ಕಡಿಮೆಯಾಗುವುದು
● ಈರುಳ್ಳಿಯನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿ ತಿಕ್ಕುವುದರಿಂದ ಗುಣ ಕಂಡುಬರುವುದು ಏಲಕ್ಕಿ ಬೀಜದ ಕಷಾಯದಿಂದ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ಶಮನವಾಗುವುದು
● ಲವಂಗ ಅಥವಾ ಓಂಕಾಳು ಅಥವಾ ಬೆಳ್ಳುಳ್ಳಿ ನುಣ್ಣಗೆ ಅರೆದು ಹತ್ತಿಯಲ್ಲಿಟ್ಟು ದವಡೆಗೆ ಉತ್ತರಿಸಿ. ಊರಿದ ನೀರನ್ನು ಉಗಿಯುತ್ತಿದ್ದಲ್ಲಿ ಹಲ್ಲು ನೋವು ಶಾಂತವಾಗುವುದು
● ನಿಂಬೆಹಣ್ಣಿನ ಸಿಪ್ಪೆ ಮತ್ತು ನೆಲ್ಲಿ ಚೆಟ್ಟು ನುಣ್ಣಗೆ ಅರೆದು ಆಸರೆಯಿಂದ ವಸಡನ್ನು ಹುಚ್ಚಿ ಬಾಯಿಯಲ್ಲಿ ನೀರು ಉರುವುದು ಆ ನೀರನ್ನು ಉಗಿಯುತ್ತಿದ್ದಲ್ಲಿ ನೋವು ಇಳಿದು ಹೋಗುವುದು.
ವಸಡು ಊದಿಕೊಂಡಿರುವಾಗ:
● ಒಣ ಶುಂಠಿಯ ತುಂಡೊಂದು ಬಾಯಲ್ಲಿಟ್ಟುಕೊಂಡರೆ ನೀರೂರುವುದು ಆ ನೀರನ್ನು ಉಗಿಯುತ್ತಿದ್ದಂತೆಯೇ ವಸಡಿನ ಊತವೂ ಕ್ರಮೇಣ ಇಳಿದು ಹೋಗುವುದು
ವಸಡು ಹುಣ್ಣಾಗುವುದನ್ನು ತಡೆಗಟ್ಟಲು:
● ಒಂದು ಬಟ್ಟಲಿನ ಕಾಲು ಭಾಗದಷ್ಟು ರೋಜ್ ವಾಟರ್ ನಲ್ಲಿ ಒಂದು ಹೋಳು ನಿಂಬೆಹಣ್ಣಿನ ರಸ ಹಿಂಡಿ ಬಾಯಿ ಮುಕ್ಕಳಿಸಿ
● ಬೇವಿನ ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸಿವುದು.
ವಸಡಿನಿಂದಾಗುವ ರಕ್ತಸ್ರಾವ ತಡೆಗಟ್ಟಲು:
● ಅಳಲೇಕಾಯಿ ಚೂರ್ಣವನ್ನು ಜೇನುತುಪ್ಪದಲ್ಲಿ ರಂಗೋಳಿಸಿ ವಸಡಿಗೆ ಹಚ್ಚಿ
● ಒಂದು ಹಿಡಿಯಷ್ಟು ಎಳೆ ನೇರಳೆ ಅಥವಾ ದಾಳಿಂಬೆ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು ಉಗುಳಿರಿ ಈ ಚಿಕಿತ್ಸೆಯ ಪುನರಾವರ್ತನೆ ಅತ್ಯಗತ್ಯ
● ಒಂದು ತುಂಡು ಸೇಬಿನಿಂದ ಹಲ್ಲುಗಳನ್ನು ಮೆದುವಾಗಿ ತಿಕ್ಕಿ
● ನಿಂಬೆ ರಸಕ್ಕೆ ಸ್ವಲ್ಪ ಅಡುಗೆ ಉಪ್ಪು ಮತ್ತು ಸ್ವಲ್ಪ ಅಡುಗೆ ಸೋಡಾ ಬೆರೆಸಿ ಈ ರಸದಿಂದ ವಸಡು ಮತ್ತು ಹಲ್ಲು ಮೃದುವಾಗಿ ತಿಕ್ಕಿ
● ಮೂರು ನಾಲ್ಕು ಟೊಮೆಟೊ ಹಣ್ಣುಗಳನ್ನು ಚೆನ್ನಾಗಿ ಕಿವುಚಿ ರಸ ಹಿಂಡಿ ಆ ರಸವನ್ನು ದಿನಕ್ಕೆ ಮೂರರ ವರ್ತಿಯಂತೆ ಎರಡು-ಮೂರು ದಿನಗಳವರೆಗೆ ಸೇವಿಸಿ
ಇಪ್ಪೆ ಮರದ ತೊಗಟೆಯಿಂದ ಕಷಾಯ ತಯಾರಿಸಿ ಬಾಯಿ ಮುಕ್ಕಳಿಸಿ ಚಿಕಿತ್ಸೆ ಪುನರಾವರ್ತಿಸಲು ಮರೆಯಬೇಡಿ
● ಈರುಳ್ಳಿಯನ್ನು ಜಜ್ಜಿ ನುಣ್ಣಗೆ ಅರಿಯರಿ ಈ ತುಕ್ಕಿನಿಂದ ಉಸಿರನ್ನು ಮೃದುವಾಗಿ ತಿಕ್ಕಿ
● ನೇರಳೆ ಮರದ ತೊಗಟೆಯಿಂದ ಕಷಾಯ ತಯಾರಿಸಿ ಬಾಯಿ ಮುಕ್ಕಳಿಸಿ,
● ಒಂದು ಬಟ್ಟಲು ನೀರಿಗೆ ನಿಂಬೆಹಣ್ಣಿನ ರಸ ಹಿಂಡಿ ಚಿಟಿಕೆ ಉಪ್ಪು ಸೇರಿಸಿ ಕುಡಿಯಿರಿ ಪ್ರತಿದಿನವೂ ಈ ಪಾನಕ ಸೇವಿಸುತ್ತಿರಿ ಮತ್ತು ಒಂದು ಸೀಳು ನಿಂಬೆಹಣ್ಣಿನಿಂದ ಪ್ರತಿದಿನ ಬೆಳಿಗ್ಗೆ ವಸಡು ಸಿಕ್ಕುವ ಅಭ್ಯಾಸ ಇಟ್ಟುಕೊಳ್ಳಿ
ಉಗುಳಿನೊಂದಿಗೆ ರಕ್ತ ಬೀಳುವುದು ಕಂಡು ಬಂದಾಗ:
● ಕಪ್ಪು ಬಣ್ಣವುಳ್ಳ ಉತ್ತಮ ವರ್ಣದ ಒಣದ್ರಾಕ್ಷಿಕೊಂಡು ತನ್ನಿ ಸುಮಾರು 250 ಗ್ರಾಂ ದ್ರಾಕ್ಷಿಯನ್ನು ಒಂದಾದ ಮೇಲೆ ಮತ್ತೊಂದರಂತೆ ಉಗುಳುನೊಂದಿಗೆ ರಕ್ತ ಬೀಳುವುದು ನಿಂತು ಹೋಗುವುದು.