ಮನೆ ಆರೋಗ್ಯ ಸಕಲ ಚರ್ಮ ವ್ಯಾಧಿಗಳಿಗೆ ಮನೆಮದ್ದು

ಸಕಲ ಚರ್ಮ ವ್ಯಾಧಿಗಳಿಗೆ ಮನೆಮದ್ದು

0

ಗರಿಕೆ ಹುಲ್ಲಿನ ರಸವನ್ನು ವ್ಯಾಧಿಗ್ರಸ್ತ ಚರ್ಮದ ಮೇಲೆ ಲೇಪಿಸುತಿದ್ದರೆ ಚರ್ಮ ವ್ಯಾಧಿಗಳು ಗುಣವಾಗುವುವು.

Join Our Whatsapp Group

ಸೂಚನೆ: ಮಲಿನರಹಿತವಾದ ಪ್ರದೇಶದಲ್ಲಿ, ಸೊಂಪಾಗಿ ಬೆಳೆದು ನಿಂತಿರುವ ಹಸಿರು ಗರಿಕೆಯನ್ನು ಮುಂಜಾವಿನಲ್ಲಿ ಕೊಯ್ಲು ಮಾಡಬೇಕು. ಆನಂತರ ಆ ಹುಲನ್ನು ಹೊರಳಿನಲ್ಲಿ ಜಜ್ಜಿ ರಸ ಹಿಂಡಬೇಕು. ರಸವನ್ನು ಶೋಧಿಸಿ, ಶುದ್ಧವಾದ ಗಾಜಿನ ಸೀಸೆಯಲ್ಲಿ ಸಂಗ್ರಹಿಸಬೇಕು.

ಬೇಸಿಗೆಯ ಕಾಲದಲ್ಲಿ ಗರಿಕೆಯಲ್ಲಿ ತೇವಾಂಶ ಕಡಿಮೆಯಾಗಿರುವುದು. ಅಂತಹ ಸಂದರ್ಭದಲ್ಲಿ ಹುಲ್ಲನ್ನು ನೀರಿನಲ್ಲಿ ನೆನೆಹಾಕಿಟ್ಟು, ಹೊರಳಿಗೆ ಹಾಕಿ ಚೆನ್ನಾಗಿ ಅರಿಯಬೇಕು. ಅರೆದ ತೊಕ್ಕನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ರಸ ತೆಗೆಯಬೇಕು.

 ಆ. ನುಣ್ಣನೆಯ ಅರಿಶಿಣದ ಪುಡಿಯನ್ನು ಜೇನುತುಪ್ಪದಲ್ಲಿ ರಂಗಳಿಸಿ ವ್ಯಾಧಿಪೀಡಿತ ಚರ್ಮದ ಮೇಲೆ ಹಚ್ಚುವುದರಿಂದ ಗುಣಕಂಡುಬರುವುದು.

ಹುಳುಕಡ್ಡಿ:

 ಅ. ಮಾವಿನಕಾಯಿ ತೊಟ್ಟು ಮುರಿದಾಗ ಸ್ರವಿಸುವ ದ್ರವ ಹಚ್ಚುವುದರಿಂದ ಹುಳಕಡ್ಡಿ, ಇಸಬು ಇವೆ ಮೊದಲಾದ ಚರ್ಮ ರೋಗಗಳು ಗುಣವಾಗುವುವು.

ಆ. ಜಜ್ಜಿದ ಬೆಳ್ಳುಳ್ಳಿಯ ಬೀಜವನ್ನು ಹುಳಕಡ್ಡಿಯ ಮೇಲಿಟ್ಟು ಚೆನ್ನಾಗಿ ತಿಕ್ಕಿ ದಿನಕ್ಕೆರಡಾವರ್ತಿಯಂತೆ ಈ ಚಿಕಿತ್ಸೆ ಮಾಡುತ್ತಿದ್ದರೆ ಹುಳಕಡ್ಡಿ ಬೇಗ ಗುಣವಾಗುವುದು.

ಇ. ವ್ಯಾಧಿಗ್ರಸ್ತ ಚರ್ಮವನ್ನು ಅಲಗಿನಂತಿರುವ ಬೇವಿನ ಕಡ್ಡಿಯಿಂದ ಚೆನ್ನಾಗಿ ಕೆರೆದು, ಬೇವಿನ ಎಣ್ಣೆ ಸವರಿ 10 ನಿಮಿಷಗಳ ಕಾಲ ಮಸಾಜ್ ಮಾಡಿ. ಒಂದು ವಾರದ ಪರ್ಯಂತ ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಈ ಚಿಕಿತ್ಸೆ ಮಾಡುವುದು ಅಗತ್ಯ.

ಈ.  ಹೊಸದಾಗಿ ಕಿತ್ತು ಬಂದ ಬೇವಿನ ಎಲೆಗಳನ್ನು ಮೊಸರಿನಲ್ಲಿ ಅರೆಯಿರಿ. ನುಣ್ಣಗಿರುವ ಈ ಸರಿಯನ್ನು ಹುಳಕಡ್ಡಿಯ ಮೇಲೆ ಲೇಪಿಸಿ. ಹಲವಾರು ದಿನಗಳ ಚಿಕಿತ್ಸೆಯಿಂದ ಗುಣಕಂಡು ಬರುವುದು.

ಉ. ತುಳಸಿ ಗಿಡದ ಕಾಂಡದಿಂದ ವ್ಯಾಧಿಗ್ರಸ್ತ ಚರ್ಮವನ್ನು ಚೆನ್ನಾಗಿ ಕೆರೆದು, ತುಳಿಸಿ ಸೊಪ್ಪಿನ ಕಷಾಯದಿಂದ ಸ್ವಚ್ಛವಾಗಿ ತೊಳೆಯಿರಿ. ಆನಂತರ ತುಳಸಿ ಸೊಪ್ಪನ್ನು ನುಣ್ಣಗೆ ಅರೆದು ಲೇಪಿಸಿ. ಗುಣ ಕಂಡು ಬರುವವರೆಗೂ ಚಿಕಿತ್ಸೆಯನ್ನು ಮುಂದುವರಿಸಿ.

ಊ.  ಬೇವಿನ ಕಡ್ಡಿಯಿಂದ ವ್ಯಾದಿಗ್ರಸ್ತ ಚರ್ಮವನ್ನು ಚೆನ್ನಾಗಿ ಕೆರೆದು, ಬೇವಿನ ಸೊಪ್ಪಿನ ಕಷಾಯದಿಂದ ಸ್ವಚ್ಛಗೊಳಿಸಿ, ಆನಂತರ ನಿಂಬೆ ರಸದೊಂದಿಗೆ ಸಮಭಾಗ ನೀರು ಬೆರೆಸಿ, ವ್ರಣದ ಮೇಲೆ ಹಚ್ಚಿ. ಹಲವು ದಿನಗಳ ಕಾಲ ದಿನಕ್ಕೊಂದು ಬಾರಿಯಂತೆ ಈ ಚಿಕಿತ್ಸೆ ಮಾಡಿ.

ತದ್ದು (ದದ್ದು) ನಿವಾರಣೆಗೆ:

 ಓಂ ಕಾಳನ್ನು ನುಣ್ಣಗೆ ಚೂರ್ಣಿಸಿ, ಈರುಳ್ಳಿ ರಸದಲ್ಲಿ ರಂಗಳಿಸಿ ಚರ್ಮದ ಮೇಲೆ ಲೇಪಿಸಿ.

 ತುರಿಕೆ ಕಜ್ಜಿ ನಿವಾರಣೆಗೆ :

 ಅ. ಆಲೂಗಡ್ಡೆಯನ್ನು ನಿಂಬೆ ರಸದಲ್ಲಿ ನುಣ್ಣಗೆ ಅರೆದು ಚರ್ಮದ ಮೇಲೆ ಲೇಪಿಸಿ.

ಆ. ಅಳಲೇಕಾಯಿಯನ್ನು ಸ್ವಮೂತ್ರದಲ್ಲಿ ತೆರೆದು ಲೇಪಿಸಿ.

ಇ.  ಇಪ್ಪೆ ಮರದ ತೊಗಟೆಯ ಕಷಾಯದಿಂದ ಇಡೀ ದೇಹವನ್ನು ತೋರಿಸಿ ಚೆನ್ನಾಗಿ ಮಾಲೀಶು ಮಾಡಿ.

ಈ.  ಪರಿಶುದ್ಧವಾದ ಬೇವಿನ ಎಣ್ಣೆಯನ್ನು ಅಂಗಾಂಗಗಳಿಗೆ ಲೇಪಿಸಿ, ಚೆನ್ನಾಗಿ ತಿಕ್ಕಿ ಮತ್ತು ಸುಮಾರು ಒಂದು ಗಂಟೆಯ ಕಾಲ ಬಿಸಿಲಿಗೆ ಮೈಯೊಡ್ಡಿ ಆನಂತರ ಬೇವಿನ ಸೊಪ್ಪಿನ ಕಷಾಯದಿಂದ ದೇಹವನ್ನು ಶುಚಿಗೊಳಿಸಿ. ಈ ರೀತಿಯ ಅಭ್ಯಂಜನ ಸ್ನಾನವನ್ನು ವಾರಕ್ಕೊಮ್ಮೆ ಮಾಡುತ್ತಿದ್ದಲ್ಲಿ ಚರ್ಮರೋಗಗಳು ಹೇಳ ಹೆಸರಿಲ್ಲದಂತಾಗುವುವು.

 (ಸೂಚನೆ: ಒಂದು ಬಿಂದಿಗೆ ನೀರಿಗೆ ಒಂದು ಹಿಡಿ ಬೇವಿನ ಸೊಪ್ಪು ಹಾಕಿ ಚೆನ್ನಾಗಿ ನೀರು ಕಾಯಿಸಿ ಆ ನೀರಿನಿಂದ ಸ್ನಾನ ಮಾಡಿ.)

ಇಸಬು ನಿವಾರಣೆಗೆ:

 ಅಳಲೇಕಾಯಿಯನ್ನು ಎಣ್ಣೆಯಲ್ಲಿ ತೇದು ಗಂಧ ತೆಗೆಯಿರಿ ಈ ಗಂಧವನ್ನು ಇಸಬಿಗೆ ಹಚ್ಚುತ್ತಿದ್ದರೆ ಉತ್ತಮ ಪರಿಹಾರ ದೊರಕುವುದು.

 ಕುಷ್ಟರೋಗಕ್ಕೆ:

 ಪ್ರತಿದಿನವೂ ಅಳಲೇಕಾಯಿಯ ಚೂರ್ಣ ಸೇವಿಸುತ್ತಿದ್ದರೆ ದೀರ್ಘಕಾಲದ ಚಿಕಿತ್ಸೆಯ ನಂತರ ಉತ್ತಮ ಪರಿಹಾರ ಕಂಡುಬರುವುದು.

 (ಚೆನ್ನಾಗಿ ಬಲಿತ ಅಳಲೆಕಾಯಿ ಜಜ್ಜಿ ಬೀಜ ತೆಗಿಯಿರಿ, ದಪ್ಪನಾದ ಹೊಟ್ಟನ್ನು ನುಣ್ಣಗೆ ಚೂರ್ಣಿಸಿ, ಬಟ್ಟೆಯಲ್ಲಿ ಶೋಧಿಸಿ ಉಪಯೋಗಿಸಿ)

ಮುಂದುವರೆಯುತ್ತದೆ …