ನಮ್ಮ ದೇಶದಲ್ಲಿ ಪವಿತ್ರ ಸಸ್ಯವೆಂದು ವರ್ಣಿತವಾಗಿ, ಪೂಜಿತವಾಗುವ ತುಳಸಿ ಒಂದು ಅದ್ಭುತವಾದ ಔಷಧಿಯ ಸಸ್ಯ. ಅಪಾಯಕಾರಿ ಫ್ರೀರ್ಯಾಡಿಕಲ್ ಗಳನ್ನು ತೊಡೆದು ಹಾಕುವ ಆಂಟಿಆಕ್ಸಿಡೆಂಟ್ ಗಳು ತುಳಸಿಯಲ್ಲಿ ಸಮೃದ್ಧವಾಗಿದೆ.
ಊತ ನಿವಾರಕ. ಸೂಕ್ಷ್ಮಜೀವಿನಾಶಕ. ಅಲರ್ಜಿನಿವಾರಕ ಗುಣವಿದೆ. ದೇಹದ ಅಂಗಾಂಗಗಳ ಆರೋಗ್ಯ ಕಾಪಾಡುತ್ತದೆ. ರೋಗನಿರೋಧಕ ಗುಣಗಳನ್ನು ಹೆಚ್ಚಿಸುತ್ತದೆ
ತಲೆ ಕೂದಲಿನ ಆರೋಗ್ಯ :
ತುಳಸಿಯನ್ನು ಬಳಸಿ ಅತ್ಯುತ್ತಮವಾದ ಶಾಂಪೂ ಮಾಡಬಹುದು. ಈಗ ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಶಾಂಪುಗಳು ರಾಸಾಯನಿಕಗಳ ಮಿಶ್ರಣವಾಗಿದ್ದು ತಲೆಕೂದಲಿಗೆ ಹಾನಿಯುಂಟು ಮಾಡಬಲ್ಲವೂ.
ಇವುಗಳ ಬದಲಿಗೆ ತಲೆ ಕೂದಲಿಗೆ ಅತ್ಯಂತ ಹಿತಕರವಾದ ತುಳಸಿನಲ್ಲಿ ಶಾಂಪೂ ಬಳಸಬಹುದು.
ಅರ್ಧಬಟ್ಟಲು ನೀರಿನಲ್ಲಿ ಅರ್ಧ ಹಿಡಿಯಷ್ಟು ತುಳಸಿ ಚೂರ್ಣವನ್ನು ಮತ್ತು ಎರಡು ಚಮಚದಷ್ಟು ನೆಲ್ಲಿಕಾಯಿ ಚೂರ್ಣವನ್ನು ಹಾಕಿ ರಾತ್ರಿ ನೆನೆಸಿಡಿ.
ಬೆಳ್ಳಗೆ ಈ ಮಿಶ್ರಾಣವನ್ನು-ನೆನಸಿದ ನೀರನ್ನು ಬಳಸಿ ಚೆನ್ನಾಗಿ ಕಲಸಬೇಕು. ಇದನ್ನು ಶೋಧಿಸಿದಾಗ ದ್ರಾವಣವೇ ಅತ್ಯುತ್ತಮವಾದ ನೈಸರ್ಗಿಕ ಶಾಂಪೂ..
ಇದನ್ನು ತಲೆಕೂದಲಿಗೆ ತಲೆ ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿ 20 ನಿಮಿಷಗಳ ನಂತರ ಸ್ನಾನ ಮಾಡಬೇಕು ತಲೆಕೂದಲಿಗೆ ಯಾವುದೇ ಸಾಬೂನನ್ನ ಬಳಸಬಾರದು.
ಚರ್ಮದ ಸಮಸ್ಯೆಗಳು :
ಯಾವುದೇ ತರದ ಹುಣ್ಣು ಆಗಿ ಅದರಿಂದ ರಕ್ತ ಕಿವು ಸೋರುತಿದ್ದರೆ, ಒಳಗೆ ಲಕ್ಷಗಟ್ಟಲೆ ಸೂಕ್ಷ್ಮಜೀವಿಗಳು ಅಡಗಿಕೊಂಡಿವೆ ಎಂದರ್ಥ.
ಇಂತಹ ಹುಣ್ಣಿನ ತೀವ್ರತೆಯನ್ನು ನಿವಾರಿಸಲು ನೀರಿಗೆ ತುಳಸಿ ಚೂರ್ಣ ಮತ್ತು ಬೇವಿನ ಚೂರ್ಣವನ್ನು ಹಾಕಿ ಕುದಿಸಿ ಸ್ವಲ್ಪ ತಣಿಸಿ ಬೆಚ್ಚಗಿರುವಾಗಲೇ ಹುಣ್ಣನ್ನು ಚೆನ್ನಾಗಿ ತೊಳೆಯಬೇಕು
ನಂತರ ತುಳಸಿ ಚೂರ್ಣಕ್ಕೆ ಸ್ವಲ್ಪ ನೀರು ಹಾಕಿ ಜಜ್ಜಿ ಪೇಸ್ಟ್ ನಂತೆ ಮಾಡಿಕೊಂಡು ಹುಣ್ಣಿನ ಮೇಲೆ ಹಚ್ಚಬೇಕು.
ಸುಟ್ಟ ಗಾಯಗಳು, ಅತಿಯಾದ ನೋವು ಕೊಡುತ್ತಿದ್ದರೆ. ತುಳಸಿ ಚೂರ್ಣ ಮತ್ತು ತೆಂಗಿನ ಎಣ್ಣೆ ಸೇರಿಸಿ, ಕಲಸಿ ಆ ಜಾಗಕ್ಕೆ ಹಚ್ಚಬೇಕು.
ಇದು ನಿರಂತರವಾಗಿ ಕೆಲವು ದಿನಗಳವರೆಗೆ ಮಾಡುತ್ತಿದ್ದರೆ ನೋವು ಕಡಿಮೆಯಾಗುವುದು ಸುಟ್ಟ ಗಾಯದ ಕಲೆಯು ಬೇಗನೆ ಮಾಯವಾಗುತ್ತದೆ.
ಪುರುಷರ ಸಮಸ್ಯೆಗಳು :
ಲೈಂಗಿಕ ರೋಗಗಳಿಂದ ಬಳಲುತ್ತಿರುವ ಪುರುಷರು ತುಳಸಿ ಮಾತ್ರೆಯನ್ನು ಮಾಡಿ ಉಪಯೋಗಿಸಬಹುದು.
ಒಂದು ಚಮಚದಷ್ಟು ತುಳಸಿ ಚೂರ್ಣಕ್ಕೆ ಅರ್ಧ ಚಮಚ ಎಷ್ಟು ಹುಣಸೆಹಣ್ಣು ಮತ್ತು ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಮಿಶ್ರಣ ಮಾಡಿ ಕಡಲೆಗಾಳಿನ ಗಾತ್ರದ ಗುಳಿಗೆಗಳಾಗಿ ಮಾಡಿ ಇಡಬೇಕು. ದಿನಕ್ಕೆ ನಾಲ್ಕು ಬಾರಿಯಂತೆ ಈ ಗುಳಿಗೆಯನ್ನು ಬಾಯಲ್ಲಿಟ್ಟುಕೊಂಡು ಚೀಪಬೇಕು.
ಚರ್ಮದ ಸಮಸ್ಯೆಗಳು :
ಚರ್ಮದ ಹಲವಾರು ಸಮಸ್ಯೆಗಳನ್ನ ಪರಿಹರಿಸುವ ಮುಲಾಮನ್ನು ತುಳಸಿಯಿಂದ ಮಾಡಬಹುದು…
ಇದಕ್ಕೆ ಬೇಕಿರುವ ವಸ್ತುಗಳೆಂದರೆ …ತುಳಸಿ ಚೂರ್ಣ ಅರ್ಧಬಟ್ಟಲು, ಲೋಳೆಸರದ ರಸ ಒಂದುಬಟ್ಟಲು, ಎಳ್ಳೆಣ್ಣೆ-ಅರ್ಧ ಬಟ್ಟಲು, ಹಾಗಲ ಎಲೆರಸ –ಅರ್ಧಬಟ್ಟಲು, ಮಲ್ಲಿಗೆ ಎಲೆಯರಸ –ಅರ್ಧಬಟ್ಟಲು, ಹತ್ತಿಬೀಜ 17, ಬೆಳ್ಳುಳ್ಳಿ 2
ಮಾಡುವ ವಿಧಾನ : ಈ ಎಲ್ಲ ವಸ್ತುಗಳನ್ನು ಸೇರಿಸಿ ಅರೆದು ಬಾಣಲೆಗೆ ಹಾಕಿ ನಿಧಾನವಾಗಿ ಕಾಯಿಸಿ ತಳ ಹಿಡಿಯದಂತೆ ಸೌಟಿನಿಂದ ಮಗುಚುತ್ತೀರಿ. ನೀರಿನಂಶವೆಲ್ಲ ಕಡಿಮೆಯಾಗಿ ಇದು ಮುಲಾಮಿನಂತೆ ಆದಾಗ ಅದು ಬಾಣಲೆಗೆ ಅಂಟಿಕೊಳ್ಳುವುದು ನಿಲ್ಲುತ್ತದೆ.
ಆಗ ಬಾಣಲೆಯನ್ನು ಕೆಳಗಿಳಿಸಿ ಮುಲಾಮನ್ನು ತಣಿಸಬೇಕು. ಇದನ್ನು ಸ್ವಚ್ಛವಾದ ಗಾಜಲಿನ ಬಾಟಲಿಯಲ್ಲಿ ಅಥವಾ ಜಾಡಿಯಲ್ಲಿ ತುಂಬಿಡಬೇಕು ಈ ಮುಲಾಮನ್ನು ಚರ್ಮದ ತೊಂದರೆಗಳಿಗೆ ಅಥವಾ ಹುಣ್ಣುಗಳಿಗೆ ಬಳಸಬಹುದು.
ಗಾಯ, ಹುಣ್ಣು, ವ್ರಣ :-
ಗಾಯ, ಹುಣ್ಣು, ರಣಗಳಾದಾಗ ಎರಡು ಬಟ್ಟಲು ನೀರಿನಲ್ಲಿ ಎರಡು ಚಮಚದಷ್ಟು ತುಳಸಿ ಚೂರ್ಣವನ್ನು ಹಾಕಿ ಬೇಯಿಸಬೇಕು ತಣಿದ ನಂತರ ಈ ನೀರಿನಿಂದ ಗಾಯ, ಹುಣ್ಣುಗಳನ್ನು ತೊಳೆಯಬೇಕು ಮತ್ತು ಒಂದು ವಾರ ಕಾಲ ದಿನಕ್ಕೊಮ್ಮೆ ಒಂದೆರಡು ಚಮಚಯಷ್ಟು ತುಳಸಿ ರಸವನ್ನು ಕುಡಿಯಬೇಕು.
ಕೆಮ್ಮು, ದಮ್ಮು, ಅಸ್ತಮ :-
ಅಸ್ತಮದಿಂದ ಬಳಲುತ್ತಿರುವವರು ಎರಡು ಚಮಚ ತುಳಸಿ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಆಹಾರಕ್ಕೆ ಮುನ್ನ ದಿನಕ್ಕೊಮ್ಮೆ ಸೇವಿಸಬೇಕು. ಇದನ್ನು ದೀರ್ಘ ಕಾಲದವರೆಗೆ ಮಾಡುವುದರಿಂದ ಅಸ್ತಮ ಪ್ರಕೋಪವು ತಗ್ಗುವುದು.
ತಲೆನೋವು :-
ಒಂದು ಚಮಚಯಷ್ಟು ತುಳಸಿ ಎಲೆಯ ಚೂರ್ಣಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಬೆರಳಿನಲ್ಲಿ ಅದ್ದಿ ಚೀಪುತ್ತಿದ್ದರೆ, ಯಾವುದೇ ಬಗೆಯ ತಲೆನೋವು ಮತ್ತು ಮೈಗ್ರೇನ್ ಗುಣವಾಗುತ್ತದೆ.
ಇದರೊಂದಿಗೆ ತುಳಸಿ ರಸವನ್ನು ಹಣೆಗೆ ಹಚ್ಚಿಕೊಂಡು ರಸದ ಹನಿಯನ್ನು ಮೂಗಿಗೆ ಬಿಟ್ಟುಕೊಳ್ಳುವುದರಿಂದ ಶೀಘ್ರ ಪರಿಣಾಮ ಸಿಗುತ್ತದೆ.
ತುಳಸಿ ಎಲೆ, ಶುಂಠಿಯನ್ನು ಬಳಸಿ ಮಾಡಿದ ಹಸಿರು ಟೀ ಮಾನಸಿಕ ಒತ್ತಡ ಮತ್ತು ಉದ್ದೇಶವನ್ನು ಕಡಿಮೆ ಮಾಡುತ್ತದೆ ಒಂದು ಸಣ್ಣ ತುಂಡು ಶುಂಠಿ ಮತ್ತು ಅರ್ಧ ಚಮಚದಷ್ಟು ತುಳಸಿಚೂರ್ಣವನ್ನು ಅಥವಾ ಅರ್ಧ ಚಿಟಕಿಯಷ್ಟು ಹಸಿರು ಚಹಾಸೊಪ್ಪನ್ನು ಮತ್ತು ಅರ್ಧ ಚಮಚದಷ್ಟು ತುಳಸಿಚೂರ್ಣವನ್ನು ಒಂದು ತಂಬಿಗೆ ಹಾಕಿ. ಇದಕ್ಕೆ ಒಂದು ಲೋಟದಷ್ಟು ಕುದಿಯುವ ನೀರನ್ನು ಹಾಕಿ ಮೂರು ನಿಮಿಷಗಳ ಕಾಲ ಮುಚ್ಚಿಡಬೇಕು. ನಂತರ ಇದನ್ನು ಸೋಸಿ ಸ್ವಲ್ಪ ಸಕ್ಕರೆ ಮತ್ತು ಹಾಲು ಬೆರೆಸಿಕುಡಿಯಬೇಕು.
ತಲೆನೋವು ಇದ್ದಾಗ ತುಳಸಿ ಚೂರ್ಣವನ್ನು ಅರ್ಧ ಚಮಚದಷ್ಟು ತೆಗೆದುಕೊಂಡು ಸಮ ಪ್ರಮಾಣದಲ್ಲಿ ಜೇನುತುಪ್ಪವನ್ನು ಬೆರೆಸಿ ನೆಕ್ಕಬೇಕು. ಆಗ ತಾನೇ ಅರೆದು ತೆಗೆದ ತುಳಸಿ ರಸವನ್ನು ಮೂಗಿಗೆ ಹನಿಸಬೇಕು.
ಮಾನಸಿಕ ತೊಂದರೆಗಳು :
ಒಂದು ಲೋಟದಲ್ಲಿ ನಾಲ್ಕೈದು ತುಳಸಿ ಎಲೆ ಮತ್ತು ಒಂದು ಸ್ವಲ್ಪ ಸೋಗದೆ ಬೇರನ್ನು ಗುದ್ಧಿ ಹಾಕಬೇಕು. ಇದಕ್ಕೆ ಚೆನ್ನಾಗಿ ಕಾದ ನೀರನ್ನು ಸುರಿದು ಮುಚ್ಚಿಡಬೇಕು. ಎರಡು ನಿಮಿಷಗಳ ನಂತರ ಇದನ್ನು ಶೋಧಿಸಿ ಸ್ವಲ್ಪ ಕಲ್ಲುಸಕ್ಕರೆ ಅಥವಾ ಪುಡಿಸಕ್ಕರೆಯನ್ನು ಬೆರೆಸಿಕುಡಿಯಬೇಕು. ಇದು ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ.
ಹೊಟ್ಟೆಯ ಸಮಸ್ಯೆಗಳು :-
ಜೀವನ ಶಕ್ತಿ ಕುಂದಿರುವಿಕೆ, ಹಸಿವೆ ಇಲ್ಲದಿರುವುದು ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಒಂದು ಚಮಚ ತುಳಸಿಚೂರ್ಣ, ಒಂದು ಚಮಚ ಶುಂಠಿಚೂರ್ಣ, ಅರ್ಧಚಮಚ ನೇರಳೆಬೀಜದ ಚೂರ್ಣ ಮತ್ತು ಸಾಕಷ್ಟು ಜೇನುತುಪ್ಪ ಇವನು ಸೇರಿಸಿ ಮಿಶ್ರಣ ಮಾಡಿ ಇಡಬೇಕು. ಆಗಾಗ ಚಮಚೆಯಲ್ಲಿ ಈ ಮಿಶ್ರಣವನ್ನು ಸ್ವಲ್ಪ ಭಾಗ ತೆಗೆದುಕೊಂಡು ಬೆರಳನ್ನು ಅದ್ದಿ ಚೀಪುತ್ತಿರಬೇಕು.
ಇದನ್ನು ಊಟ ಮಾಡುವ ಅರ್ಧಗಂಟೆ ಮೊದಲು ಸೇವಿಸಬೇಕು. ಹಸಿವೆಯಾಗದಿರುವುದು, ವಾಕರಿಕೆ, ಜೀವನ ಶಕ್ತಿ ಚೆನ್ನಾಗಿಲ್ಲದಿರುವುದು ಇಂತಹ ಸಮಸ್ಯೆಗಳ ಪರಿಹಾರಕ್ಕೆ ತುಳಸಿಯ ಗುಳಿಗೆಗಳನ್ನು ಮಾಡಿ ಬಳಸಬಹುದು.
ಎರಡು ಚಮಚಯಷ್ಟು ತುಳಸಿ ಚೂರ್ಣ, ಎರಡು ಚಮಚ ಶುಂಠಿ ಚೂರ್ಣ, ನಾಲ್ಕು ಚಮಚದಷ್ಟು ಪುಡಿ ಮಾಡಿದ ಹಳೆಯ ಬೆಲ್ಲ ಇವನು ಚೆನ್ನಾಗಿ ಕಲಸಿ ಬಟಾಣಿ ಗಾತ್ರದ ಗುಳಿಗೆಗಳನ್ನಾಗಿ ಮಾಡಿ ಇಡಬೇಕು. ಪ್ರತಿದಿನ ಬೆಳಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಆಹಾರಕ್ಕೆ ಮನ್ನ ಒಂದೊಂದು ಗುಳಿಗೆಯನ್ನು ಬಿಸಿ ನೀರಿನಲ್ಲಿ ಸೇವಿಸಬೇಕು
ಮಲಬದ್ದತೆ, ಮೂಲವ್ಯಾದಿ :-
ಮಲಬದ್ಧತೆಯಿಂದ ಬಳಲುತ್ತಿರುವವರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಚಮಚದಷ್ಟು ಒಣ ತುಳಿಸಿ ಚೂರ್ಣವನ್ನು ಸೇವಿಸುವುದರಿಂದಲೂ ಪ್ರಯೋಜನಾವಿದೆ.