ಬೆಂಗಳೂರು: ಪ್ರಾಮಾಣಿಕ ಚುನಾವಣೆಗಳು ನಡೆಯಬೇಕು. ಆದರೆ ಪ್ರಾಮಾಣಿಕ ಚುನಾವಣೆಗಳು ನಡೆಯುತ್ತಿಲ್ಲ. ಆಸೆ,ಅಮಿಷಗಳನ್ನ ಘೋಷಣೆ ಮಾಡಲಾಗುತ್ತಿದೆ. ಬಡವರ ತೆರಿಗೆ ಹಣವನ್ನ ಫೋಲು ಮಾಡಲಾಗ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಜೆಪಿ ಭವನದಲ್ಲಿ ಬುಧವಾರ ಮಾತನಾಡಿದ ಅವರು, ನಮ್ಮದು ಸಣ್ಣ ಪಕ್ಷವಲ್ಲವೇ? ಇನ್ನೂ ಒಂದು ವರ್ಷವಿದೆ. ಯಾವಾಗ ಯಾರು ಬರ್ತಾರೋ ಗೊತ್ತಿಲ್ಲ.ಆ ಸಮಯ ಬಂದಾಗ ಅದರ ಬಗ್ಗೆ ಮಾತನಾಡೋಣ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಹೇಳ್ತಿದ್ದಾರೆ. ಬೇರೆ ಪಕ್ಷಗಳಿಂದ ವಲಸೆ ಬರುತ್ತಿದ್ದಾರೆ ಎಂದು ಹೇಳ್ತಿದ್ದಾರೆ. ಪಟ್ಟಿಗಳನ್ನ ಇಟ್ಕೊಂಡಿದ್ದೇವೆ ಎನ್ನುತ್ತಿದ್ದಾರೆ ಡಿಕೆಶಿ,ಸಿದ್ದರಾಮಯ್ಯ ಬಹಿರಂಗ ಹೇಳಿಕೆ ನೀಡ್ತಿದ್ದಾರೆ. ಜೆಡಿಎಸ್ ನಿಂದ ಶಾಸಕರು ಬರ್ತಿದ್ದಾರೆಂದಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ ಶಾಸಕರು ಬರ್ತಾರೆ ಎನ್ನುತ್ತಿದ್ದಾರೆ. ಜೆಡಿಎಸ್ ಬಿಜೆಪಿ ಬಾಲಂಗೋಚಿ ಅಂದಿದ್ದಾರೆ. ತುಮಕೂರಿನಿಂದ ಜೆಡಿಎಸ್ ಒದ್ದು ಓಡಿಸಿ ಎಂದಿದ್ದಾರೆ. ಕಾಂಗ್ರೆಸ್,ಬಿಜೆಪಿ ಇಬ್ಬರಿಗೂ ನಾನು ಕೇಳ್ತೇನೆ ಯಾರ್ಯಾರು ಇದ್ದಾರೆ ಅನ್ನೋದನ್ನ ಹೇಳಲಿ ಎಂದು ಸವಾಲು ಹಾಕಿದರು.
ಯಾರು ಹೋಗಬಹುದೆಂಬ ಮಾಹಿತಿ ನಮಗೂ ಗೊತ್ತಿದೆ. ಅದರಿಂದ ನನಗೇನು ಗಾಬರಿಯಿಲ್ಲ. ನಮ್ಮ ಪಕ್ಷಕ್ಕೂ ಕೆಲವರು ಅರ್ಜಿ ಹಾಕಿಕೊಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ನಿಂದ ಅರ್ಜಿ ಹಾಕಿಕೊಂಡಿದ್ದಾರೆ. ಆದರೆ ನಮಗೆ ಬರುವವರು ಸಣ್ಣ ಸಣ್ಣ ಮುಖಂಡರು ಎಂದರು.
ನಿಷ್ಠಾವಂತರನ್ನ ಅಲ್ಲಿ ಮೂಲೆ ಗುಂಪುಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಮಾಡಿದ್ದಾರೆ. ನಮ್ಮಲ್ಲೂ ಕೆಲವರು ಅಂತವರು ಇದ್ದರು. ಅನ್ನದಾನಿ ಎಂಎಲ್ ಎ ಆಗೋಕೆ ನಾವೇ ಫಂಡ್ ಮಾಡಿದ್ದೆವು. ಅನ್ನದಾನಿಗೆ ಟಿಕೆಟ್ ಕೊಡಬೇಡಿ ಎಂದಿದ್ದರು. ಕಾರ್ಯಕರ್ತರ ವಿರೋಧದ ನಡುವೆ ಟಿಕೆಟ್ ಕೊಟ್ಟಿದ್ದೆವು. ಆ ದಲಿತ ಯುವಕನಿಗೆ ದೇಣಿಗೆ ನೀಡಿ ಗೆಲ್ಲಿಸಿಕೊಂಡೆವು. ನಾವು ಲಕ್ಷಾಂತರ ಕಾರ್ಯಕರ್ತರ ದುಡಿಮೆಯಿಂದ ಗೆದ್ದಿದ್ದು.
ಸಿದ್ದರಾಮಯ್ಯ ಹೋದ್ರೂ 19 % ಮತ ನಮಗಿದೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿಸೋಕೆ ಯಾರನ್ನ ಬಳಸಿಕೊಂಡ್ರಿ? ಯಾರಿಗೆ ಹಣವನ್ನ ಕೊಟ್ಟಿದ್ರಿ? ಎಲ್ಲವೂ ನಮಗೆ ಗೊತ್ತಿದೆ ಸಿದ್ದರಾಮಯ್ಯನವರೇ. ನೀವು ಎದೆ ಮುಟ್ಟಿಕೊಂಡು ಒಪ್ಪಿಕೊಳ್ಳಿ. ಕೈ ಮುಖಂಡರನ್ನಮುಗಿಸೋಕೆ ಏನೇನ್ಮಾಡಿದ್ರಿ? ಜನರ ಮುಂದೆ ಸತ್ಯವನ್ನ ಹೇಳಿ. ನೀವೇನೂ ಸತ್ಯಹರಿಶ್ಚಂದ್ರರಲ್ಲ ಅರ್ಥವಾಯ್ತೇ. ನಾವು ಬಹಳ ಜನರನ್ನ ನೋಡಿದ್ದೇವೆ. ನಾವು ರಾಜ್ಯದ ಜನರಿಗೆ ಭಯ ಬೀಳುವವರು. ನಿಮ್ಮನ್ನ ನೋಡಿ ನಾವು ಭಯ ಬೀಳಲ್ಲ ಎಂದರು.