ಮನೆ ದೇವಸ್ಥಾನ ಜನಪದ ಸಾಹಿತ್ಯದಲ್ಲಿ ಹೊರನಾಡ ಅನ್ನಪೂರ್ಣಿ

ಜನಪದ ಸಾಹಿತ್ಯದಲ್ಲಿ ಹೊರನಾಡ ಅನ್ನಪೂರ್ಣಿ

0

 ಅನ್ನಪೂರ್ಣೆಯ ಏಕಾರಾತಿಯ ನೋಡುವ ಬನ್ನಿರೇ:

Join Our Whatsapp Group

 ಏಕಾರತಿಯ ನೋಡುವ ಬನ್ನಿ ರೆ ನಮ್ಮ |

 ಅನ್ನಪೂರ್ಣ ಸಿರಿಪಾದಕ್ಕೆ ಬೆಳಗುವಾ

 ಏಕಾದತಿಯ ನೋಡುವ ಬನ್ನಿರೇ ||

 ಹರುಷದಿಂದಲೀ ಏಕಾರತಿ ಬೆಳಗಲು

 ನರಕದಿಂದುದ್ವಾರ ಮಾಡುವಳು ಪರಮ ಭಕ್ತಿಯಿಂದ |

 ಬೆಳಗುವ ನರರನ್ನು ತಾಯಿ ನನ್ನ ಹೃದಯದೊಳಗೆ ಧರಿಸುವಳೈಯ್ಯಾ

 ಏಕಾರತಿಯ ನೋಡುವ ಬನ್ನಿರೇ ||

 ತುಪ್ಪದೊಳ್ ಬೆರೆಸಿದ ಮೂರು

 ಬತ್ತಿಯನಿತ್ತು ವಪ್ಪವ  ದೀಪಕ್ಕೆ ದೀಪ ಹಚ್ಚಿ |

 ತಪ್ಪದೇ ಸಕಲಪಾಪಗಳ ಸಂಹರಿಸುವ ದೇವಿ

 ಅನ್ನಪೂರ್ಣಳ ಪಾದಕ್ಕೆ ಬೆಳಗುವಾ ||

 ಏಕಾರತಿಯ ನೋಡುವ ಬನ್ನಿರೆ ||

 ಅನ್ನ ಚಿಂತೆಯ ಬಿಟ್ಟು ಅನ್ಯರ ಭಜಿಸದೆ |

 ಅನನ್ಯ ಭಕ್ತಿಯಲ್ಲಿ ಹೋರಾನಾಡ ತಾಯಿಯ ಭಜಿಸುತ

 ಅನನ್ಯವಾಗಿಯೇ ಪುರಂದರ ವಿಠಲ

 ಪನಂಗಶಯನನ ಧ್ಯಾನಿಸುತಾ ||

 ಏಕಾದತಿಯ ನೋಡುವ ಬನ್ನಿ ರೇ||