ಮನೆ ಅಪರಾಧ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಕೊಲೆ ಆರೋಪ

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಕೊಲೆ ಆರೋಪ

0

ಚಿತ್ರದುರ್ಗ: ಹೊಸದುರ್ಗ ಪಟ್ಟಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದ್ದು, ಪತಿ ಮತ್ತು ಕುಟುಂಬಸ್ಥರ ವಿರುದ್ಧ ಮೃತಳ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.

Join Our Whatsapp Group

ತುಮಕೂರು ಮೂಲದ ಗೀತಶ್ರೀ ಮೃತ ರ್ದುದೈವಿ.

ಆಕೆ ಹೊಸದುರ್ಗದ ಗೊರವನಕಲ್ಲು ಗ್ರಾಮದ ಪ್ರಭುಕುಮಾರ್ ಜೊತೆ ಐದಾರು ವರ್ಷದ ಹಿಂದೆ ಮದುವೆ ಆಗಿದ್ದರು. ವಿದ್ಯಾವಂತನಾಗಿದ್ದ ಪ್ರಭುಕುಮಾರ್ ಇಂದಲ್ಲ, ನಾಳೆ ಸರ್ಕಾರಿ ಉದ್ಯೋಗ ಸಿಗುತ್ತದೆಂದು ನಂಬಿಸಿದ್ದನು.

ಪ್ರಭು ಖಾಸಗಿ ಬ್ಯಾಂಕ್​ ನಲ್ಲಿ ಉದ್ಯೋಗ ಮಾಡುತ್ತಿದ್ದರೆ, ಪತ್ನಿ ಗೀತಶ್ರೀ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಆಗಿದ್ದರು. ಇವರ ಸುಖ ದಾಂಪತ್ಯಕ್ಕೆ ಮುದ್ದಾದ ಮಗಳು ಸಾಕ್ಷಿ ಆಗಿದ್ದಳು. ಆದ್ರೆ, ಇತ್ತೀಚೆಗೆ ಹಣದ ಪಿಶಾಚಿಯಂತೆ ವರ್ತಿಸುತ್ತಿದ್ದ ಪ್ರಭು, ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಇತ್ತೀಚೆಗಷ್ಟೇ ಪತ್ನಿ ಜೊತೆ ಗಲಾಟೆ ಮಾಡಿ ತವರುಮನೆಗೆ ಕಳಿಸಿದ್ದನು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಗೀತಶ್ರೀ ಪತಿಯ ಮನೆಗೆ ಬಂದಿದ್ದಳು.

ಮತ್ತೆ ವರದಕ್ಷಿಣೆ ಕಿರುಕುಳ ನೀಡಿ ಪತಿ ಪ್ರಭುಕುಮಾರ್ ಮತ್ತು ಕುಟುಂಬಸ್ಥರು ಗೀತಶ್ರೀಗೆ ಹೊಡೆದು ಹತ್ಯೆ ಮಾಡಿದ್ದಾರೆ.  ಬಳಿಕ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ ನಡೆದಿದೆ ಎಂದು ಮೃತಳ ಸಹೋದರ ನಿರಂಜನ್ ಆರೋಪಿಸಿದ್ದಾರೆ.

ಈ ಕುರಿತು ಪ್ರಭುಕುಮಾರ್ ವಿರುದ್ಧ ಮೃತಳ ಪೋಷಕರು ಕೊಲೆ ಆರೋಪ ಪ್ರಕರಣ ದಾಖಲಿಸುತ್ತಿದ್ದಂತೆ ಆರೋಪಿ ನಾಪತ್ತೆ ಆಗಿದ್ದಾನೆ.

ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಅವಧಿ ಮೀರಿದ ಸಾಲ ಮರುವಸೂಲಿ ಸಾಧ್ಯವೇ? ತ್ರಿಸದಸ್ಯ ಪೀಠಕ್ಕೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್
ಮುಂದಿನ ಲೇಖನಧ್ರುವ್‌ ವಿಕ್ರಮ್‌ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ರಿಲೀಸ್‌