ಯಾತ್ರೆ ಹೋಗುವ ಪರಿಪಾಟ ರಾಮಾಯಣ ಮಹಾಭಾರತಗಳಷ್ಟೇ ಹಿಂದಿನದು. ಕುರುಕ್ಷೇತ್ರ ಯುದ್ಧದಲ್ಲಿ ಸಂಭವಿಸಿದ ಕುಲವಧೆಯಾ ದೋಷ ಪ್ರಾಯಶ್ಚಿತ್ತವಾಗಿ ಪಾಂಡವರು ತೀರ್ಥಯಾತ್ರೆ ಕೈಗೊಂಡಿದ್ದರು.ಅವರು ಋಷಿಗಳೊಡನೆ 12 ವರ್ಷಗಳ ಅಖಂಡ ಭಾರತವನ್ನು ಸುತ್ತಾಡಿದರೆಂದು ಉಲ್ಲೆಖವಿದೆ. ಪರಶುರಾಮನು ಸಹಸ್ರಾರ್ಜನನನ್ನು ಕೊಂದ ಪಾಪಕ್ಕೆ ಒಂದು ವರ್ಷ ತೀರ್ಥ ಯಾತ್ರೆ ಮಾಡಿದನು. ವಿದುರನೂ ತೀರ್ಥಯತ್ರ ಕೈಗೊಂಡಿದ್ದನು. ಧಾರ್ಮಿಕ ಆಚಾರ್ಯರು ಧರ್ಮ ಪ್ರಚಾರದ ಸಲುವಾಗಿ ತೀರ್ಥಯಾತ್ರೆಯನ್ನು ಮಾಡಿತ್ತಿದ್ದರು. ಭಾರತದಲ್ಲಿ ಪ್ರತಿಯೊಂದು ಧರ್ಮದವರಿಗೂ ತಮ್ಮದೇ ಆದ ತೀರ್ಥವಿದೆ.ಶೈವರಿಗೆ ಕಾಶಿ,ರಾಮೇಶ್ವರ, ಶೃಂಗೇರಿ, ಕಳಸ, ಹೊರನಾಡು, ಧರ್ಮಸ್ಥಳ, ಇತ್ಯಾದಿ ವೈಷ್ಣವರಿಗೆ ಶ್ರೀರಂಗ, ಕಂಚಿ, ಜೈನರಿಗೆ ಶ್ರವಣಬೆಳಗೊಳ,ಪಾವಾಪುರಿ, ಫುಲ್ ಮೂಡಬಿದರೆ ಮೊದಲಾದವು ಪವಿತ್ರ ಕ್ಷೇತ್ರಗಳಾಗಿವೆ.ಶಂಕರಾಚಾರ್ಯ ರಾಮಾನುಚಾರ್ಯ, ಮಧ್ವಾಚಾರ್ಯ ಮೊದಲಾದವರು ತೀರ್ಥ ಯಾತ್ರೆಯ ಹಿನ್ನೆಲೆಯಲ್ಲಿ ಹಲವು ಮಠಗಳನ್ನು ಸ್ಥಾಪಿಸಿದರು. ಇಂದಿಗೂ ಆಚಾರ್ಯರು ಯೋಗಿಗಳು ತೀರ್ಥಯಾತ್ರೆ ಮಾಡುವುದಿದೆ. ಹೀಗೆ ಯಾತ್ರೆಗೆ ಹೋಗಿ ಬಂದ ಋಷಿಗಳು, ಆಚಾರ್ಯರು ತಾವು ಸಂದರ್ಶಿಸಿ ದ ಕ್ಷೇತ್ರಗಳ ಮಹಿಮೆಯನ್ನು ಶಿಷ್ಯರಿಗೆ ನಿರೂಪಿಸಿದಾಗ ಕ್ಷೇತ್ರ ಸಾಹಿತ್ಯದ ಉಗಮ ವಾಯಿತೆನ್ನಬಹುದು.ಈ ನಿಟ್ಟಿನಲ್ಲಿ ಮೊದಲು ಉಲ್ಲೇಖಿಸಬೇಕಾದದ್ದು ಪುರಾಣಗಳು ಅಷ್ಟಾದಶ ಪುರಾಣಗಳು. ಇಂದಿನ ಎಲ್ಲಾ ತಿಕ್ತಾಯ ಕ್ಷೇತ್ರ ಗ್ರಂಥಗಳಿಗೆ ಆಕರವಾಗಿವೆ.ಪರಿಣಾಮಗಳು ವ್ಯಾಸ ಪ್ರಣಿತವೆಂದು ಹೇಳಲಾಗುತ್ತದೆ.ಪುರಾಣಗಳಲ್ಲಿ ವರ್ಣಿಸಿರುವ ತೀರ್ಥಕ್ಷೇತ್ರಗಳನ್ನು ಆಧರಿಸಿ ಅನೇಕ ಸ್ವತಂತ್ರ ಕೃತಿಗಳು ಹೊರಬಂದಿವೆ. ಕರ್ನಾಟಕಕ್ಕೆ ಅನ್ವಯಿಸಿ ಹೇಳುವುದಾದರೆ ಮುಖ್ಯವಾಗಿ ಕಾವೇರಿ ಕ್ಷೇತ್ರ ಮಹತ್ಮ್ಯಂ, ವರದಾ ಮಹಾತ್ಮ್ಯಂ, ಗೋಕರ್ಣ ಮಹಾತ್ಮ್ಯಂ ಮೊದಲಾದವುಗಳನ್ನು ಹೆಸರಿಸಬಹುದು. ಧಾರ್ಮಿಕ ಆಚಾರ್ಯರಲ್ಲಿ ಕೆಲವರು ಯಾತ್ರೆಗಳ ನಿವಾರಣೆ,ತೀರ್ಥಗಳ ಪರಿಚಯವನ್ನು ಬರೆದಿಡುತ್ತಿದ್ದರು. ಜೈನ ಕ್ಷೇತ್ರ ಸಾಹಿತ್ಯಕ್ಕೆ ಸಂಬಂಧಿಸಿದ ಧನೇಶ್ವರ ಸೂರಿ, ರಚಿಸಿದ ‘ಶತೃಂಜಯಮಹಾತ್ಮ’, ಮದನಕೀರ್ತ ವಿರಚಿತ ಶಾಶನ ಚತುಸ್ತ್ರಂಶಿಕಾ ಉಲ್ಲೇಖಿಸುವಂತಹವುದು.
ಸಂಸ್ಕೃತ ಸಾಹಿತ್ಯವು ಕ್ಷೇತ್ರ ಸಾಹಿತ್ಯಕ್ಕೆ ಉತ್ತಮ ಆಕರ ಒದಗಿಸುತ್ತದೆ.ಅದರ ಪ್ರಭಾವಕ್ಕೊಳಗಾಗಿ ಕನ್ನಡದಲ್ಲಿ ಯೂ ಸ್ಥಳ ಮಹಾತ್ಮೆ ತಿಳಿಸುವ ಕೃತಿಗಳು ರಚಿತಗೊಂಡವು. ಸಂಸ್ಕೃತದಿಂದ ಕೆಲವು ನೇರವಾಗಿ ಅನುವಾದಗೊಂಡಿತು. ಬ್ರಹ್ಮಾಂಡ ಪುರಾಣದಿಂದ ನಂದಿಮಹಾತ್ಮ ಹಾಲಾಸ್ಯ ಮಹಾತ್ನ್ಯದಿಂದ ಹಲಾಸ್ಯ ಪುರಾಣ ಇದಕ್ಕೆ ಉಲ್ಲೇಖಿಸಬಹುದು ಕನ್ನಡದಲ್ಲಿ ಕ್ಷೇತ್ರ ಸಾಹಿತ್ಯದ ಬೆಳವಣಿಗೆಗೆ ಸ್ವಲ್ಪಮಟ್ಟಿಗೆ ಕಾರಣ ಆದವರು ಹರಿದಾಸರು ಅವರು ಬರೆದಿರುವ ಸುಳಾದಿಗಳಲ್ಲಿ ಕರ್ನಾಟಕ ಮತ್ತು ಭಾರತ ಇತರ ರಾಜ್ಯಗಳಲ್ಲಿರುವ ಕೆಲವು ಕ್ಷೇತ್ರಗಳ ಮಹಿಮೆ ದಾಖಲಾಗಿವೆ. ಚಿಕ್ಕದೇವರಾಯನ ಕಾಲದಲ್ಲಿ ಕ್ಷೇತ್ರ ಸಾಹಿತ್ಯದಲ್ಲಿ ಬೆಳವಣಿಗೆ ಕಂಡು ಬಂದಿತು.ಆಗ ಯಾದವಗಿರಿ ಮಹತ್ಮ್ಯಂ, ಪಶ್ಚಿಮ ರಂಗ ಕ್ಷೇತ್ರಮಹಾತ್ಮ್ಯಂ, ವೆಂಕಟಗಿರಿ ಮಹಾತ್ಮ್ಯಂಮುಂತಾದ ಕ್ಷೇತ್ರ ಮಹಾತ್ಮೆಗಳು ಹೊರಬಂದವು,ಈ ಕೃತಿಗಳಲ್ಲಿ ನಾವು ಸಂದರ್ಶಿಸಿದ ಕ್ಷೇತ್ರಕ್ಕೆ ರಾಮ, ಸೀತೆ, ಶಿವ, ಪಾರ್ವತಿ, ಅನ್ನಪೂರ್ಣ, ವಿಷ್ಣು, ಬ್ರಹ್ಮ, ಇವರೇ ಮೊದಲಾದ ದೇವಾದಿ ದೇವತೆಗಳ ಪೌರಾಣಿಕ ವ್ಯಕ್ತಿಗಳ ಕಥೆಗಳನ್ನು ತಳುಕು ಹಾಕಿ ನಿರೂಪಿಸುತ್ತ ಹೋಗಿರುವುದನ್ನು ಕಾಣಬಹುದು. ಅಂತಹ ಕ್ಷೇತ್ರ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಕಾರಗಳಲ್ಲಿ ಸಹ್ಯಾದ್ರಿ ಕಂಡ ಮಹತ್ವದ ಕೃತಿಯಾಗಿದೆ.