ಭಾರತ ದೇವಾಲಯಗಳ ನಾಡು ಇಲ್ಲಿ ಗುಡಿ ಇಲ್ಲದ ಹಳ್ಳಿಗಳಿಲ್ಲ ಇದು ಭಾರತೀಯ ಆಧ್ಯಾತ್ಮಿಕ ಪರಂಪರೆಯ ದ್ಯೋತಕಗಳು. ದೇವಸ್ಥಾನದ ಒಳ ರ್ಥದಲ್ಲಿ ಜನ ಸ್ಥಾನವೇ ಆಗಿದೆ. ಜನರ ವಾಸಸ್ಥಾನ ಇಲ್ಲದೆ ದೇವಸ್ಥಾನಕ್ಕೆ ಹುಟ್ಟು ಇಲ್ಲ ಜನ ವಸತಿ ಇಲ್ಲದೆ ದೇವಸ್ಥಾನವಿಲ್ಲ. ಹಾಗಾಗಿ ಗುಡಿಗೋಪುರಗಳು ಆಯಾ ಪರಿಸರದ ಸಂಸ್ಕೃತಿಯ ಶಿಶು ಎನ್ನಬಹುದು.
ಅವು ಜನರ ಶ್ರದ್ಧಾ, ಕೇಂದ್ರಗಳಾಗಿವೆ ಸಮುದಾಯಿಕ ಚಟುವಟಿಕೆಗಳ ಆವರಣವಾಗಿವೆ.ಇಲ್ಲಿ ಜರುಗುವ ಜಾತ್ರೆಗಳೂ ಅಂತಹ ಒಂದು ಸಂಪ್ರದಾಯಕವಾಗಿ ಜನರ ಸಾಮಾಜಿಕ ಸಂಬಂಧಗಳಿಗೆ ನಿರಂತರತೆಯನ್ನು ಕೊಡುವಲ್ಲಿ ಮಹತ್ವದ ಪತ್ರ ವಹಿಸಿವೆ ನಮ್ಮ ಈ ಪರಂಪರೆ ಹಲವು ಸಹಸ್ರ ವರ್ಷಗಳಿಂದ ಹಾಸುಹೋಕ್ಕಾಗಿ ಹರಿದುಬಂದಂತಾಗಿದೆ.ಅದು ನಮ್ಮ ಧಾರ್ಮಿಕ ಭಾವನೆಗೆ ಆಶ್ರಯ ನೀಡುತ್ತ. ನಮ್ಮ ಕಲೆ ವಾಸ್ತುಶಿಲ್ಪವನ್ನು ಉಳಿಸುತ್ತ ಬೆಳೆಸುತ್ತ ಬರುತ್ತಿದೆ.
ಅಂತೆಯೇ ಭಾರತೀಯ ಪರಂಪರೆಯಲ್ಲಿ ಹುಣ್ಣಿಮೆ, ಅಮಾವಾಸ್ಯೆ ಜಾತ್ರೆ, ಹಬ್ಬ ಹರಿದಿನಗಳಲ್ಲಿ ದೈವಿಕ ಶಕ್ತಿಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ ಆ ದಿನಗಳಲ್ಲಿಯ ಆಚರಣೆ ವಿಶೇಷ ಅರ್ಥವನ್ನು ಒಳಗೊಂಡಿದೆ ಇದು ಸಹ ಪೂರ್ವ ಕಾಲದಿಂದ ನಡೆದು ಬಂದಿದು. ಭಯ, ಭೀತಿ ನಿವಾರಣೆಗಾಗಿ,ಯಾವುದು ಭಯವನ್ನು ಹುಟ್ಟುಸುತ್ತದೆಯೋ ಅಂತಹವುಗಳನ್ನು ಆರಾಧಿಸುವ ಕೆಲಸವನ್ನು ಮನುಷ್ಯ ಸಹಜವಾಗಿ ಹಿಂದಿನಿಂದ ನಡೆಸಿಕೊಂಡು ಬಂದಿದ್ದಾನೆ.ಕಲ್ಲು, ಮರ,ಮಣ್ಣುಗಳು. ಈ ಕಾರಣದಿಂದ ಪೂಜೆಗೆ ಒಳಗಾಗುವು ಇದು ಮುಂದೆ ಹೆಮ್ಮರವಾಗಿ ಬೆಳೆದಿದೆ ಅದು ಸೂರ್ಯ, ಚಂದ್ರ, ಮರ, ಪಶು, ಪಕ್ಷಿಗಳನ್ನೆಲ್ಲ, ಪೂಜಿಸುವಷ್ಟು ಆಗಾಧಾವಾಗಿ ಬೆಳೆದಿದೆ.ಈ ನಂಬಿಕೆ ಬರುಬರುತ್ತಾ ಒಂದು ಧಾರ್ಮಿಕ ಆಚರಣೆಯಾಗಿ,ನಂತರ ಆರಾಧನೆಗಾಗಿ ರೂಪು ತಾಳದೆ.ಈ ಧಾರ್ಮಿಕ ಹಿನ್ನೆಲೆಯೇ ಮುಂದೆ ಜಾತ್ರೆಗಳು, ಹಬ್ಬಗಳು, ಉತ್ಸವಗಳು, ಹುಟ್ಟಿಗೆ ಕಾರಣವಾಯಿತು.