ಮನೆ ರಾಷ್ಟ್ರೀಯ ಭೀಕರ ಅಪಘಾತ: ಮಗು ಸೇರಿದಂತೆ ಐವರ ಸಾವು

ಭೀಕರ ಅಪಘಾತ: ಮಗು ಸೇರಿದಂತೆ ಐವರ ಸಾವು

0

ಲಕ್ನೋ:  4 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಪ್ರದೇಶದಲ್ಲಿ ನಡೆದಿದೆ.

ಸೋಮವಾರ ತಡರಾತ್ರಿ (ಅ.30 ರಂದು) ಬಿಲಹೌರ್-ಕತ್ರಾ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.

ಒಂದೇ ಕುಟುಂಬದ ಐವರು ಬರಕಾಂತ್ ಗ್ರಾಮದಿಂದ ನಾಯಗಾಂವ್ ಕಡೆಗೆ ಹೋಗುತ್ತಿದ್ದರು, ದಾರಿ ಮಧ್ಯ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಎಲ್ಲರೂ ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆಸ್ಪತ್ರೆಗೆ ಬರುವ ವೇಳೆ ಗಾಯಾಳು ಮೃತಪಟ್ಟಿದ್ದಾರೆಂದು ಪೊಲೀಸ್ ಅಧೀಕ್ಷಕ ದುರ್ಗೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

ಅಪಘಾತದ ಭೀಕರತೆಗೆ ವಾಹನ ನಜ್ಜುನುಜ್ಜಾಗಿದ್ದು, ಗ್ಯಾಸ್‌ ಕಟ್ಟರ್‌ ಗಳನ್ನು ಬಳಸಿ ದೇಹಗಳನ್ನು ಹೊರತೆಗೆಯಲಾಯಿತೆಂದು ಪೊಲೀಸರು ಹೇಳಿದ್ದಾರೆ.

ಹಿಂದಿನ ಲೇಖನಸಿಎಂ ಸಿದ್ಧರಾಮಯ್ಯ ಮಂಡ್ಯ ಪ್ರವಾಸ: ವ್ಯಂಗ್ಯವಾಗಿ ಸ್ವಾಗತ ಕೋರಿದ ಜಿಲ್ಲಾ ಬಿಜೆಪಿ
ಮುಂದಿನ ಲೇಖನಬಿಜೆಪಿಯವರಿಗೆ ಕಾಂಗ್ರೆಸ್‌ ಮೇಲೆ ಹೆಚ್ಚು ಆಸಕ್ತಿ: ಗೃಹ ಸಚಿವ ಡಾ.ಜಿ ಪರಮೇಶ್ವರ್