ಮನೆ ರಾಜ್ಯ ಸಿಲಿಕಾನ್ ಸಿಟಿಯಲ್ಲಿ ಬಿಸಿಗಾಳಿ  ಹೆಚ್ಚಳ: ಹವಾಮಾನ ಇಲಾಖೆ

ಸಿಲಿಕಾನ್ ಸಿಟಿಯಲ್ಲಿ ಬಿಸಿಗಾಳಿ  ಹೆಚ್ಚಳ: ಹವಾಮಾನ ಇಲಾಖೆ

0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ 2 ರಿಂದ 5 ದಿನಗಳವರೆಗೆ ಬಿಸಿಗಾಳಿಯ ಎಫೆಕ್ಟ್ ತಟ್ಟಲಿದೆ. ಇನ್ನು ಒಂದು ವಾರಗಳ ಕಾಲ ಅಲರ್ಟ್ ಆಗಿರುವಂತೆ ಹವಾಮಾನ ಇಲಾಖೆಯಿಂದ ಸೂಚನೆ ನೀಡಲಾಗಿದೆ.

Join Our Whatsapp Group

ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ ಜಿಲ್ಲೆಗಳಿಗೆ ಬಿಸಿಗಾಳಿ ಎಚ್ಚರಿಕೆ ನೀಡಲಾಗಿದ್ದು, ಗರಿಷ್ಠ ತಾಪಮಾನ ಮಾತ್ರ ಅಲ್ಲದೇ ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ. ಇಂದು 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದ್ದು, ನಾಳೆ ಬರೋಬ್ಬರಿ 38 ಡಿಗ್ರಿ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬರಗಾಲ, ಜಲಕ್ಷಾಮಕ್ಕೆ ಸಿಲುಕಿ ತತ್ತರಿಸುತ್ತಿರುವ ಕರುನಾಡಿಗೆ ಮತ್ತೊಂದು ಆಘಾತ ಎದುರಾಗಿದೆ. ಈಗಾಗಲೇ ಬಿರುಬಿಸಿಲಿಗೆ ಭೂಮಿ ಬಾಯಾರಿ ನಿಂತಿದೆ. ಒಂದು ಮಳೆಹನಿ ಬಿದ್ದರೂ ಸಾಕು ಅನ್ನುವಷ್ಟರಮಟ್ಟಿಗೆ ಈ ಬಾರಿ ಬೇಸಿಗೆ ಬೇಸರ ತಂದಿಟ್ಟಿದೆ. ಅಂಥಾದ್ರಲ್ಲಿ ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಮತ್ತಷ್ಟು ಬೆವರುವಂತೆ ಮಾಡಿದೆ. ಏಪ್ರಿಲ್​ನಿಂದ ಬಿಸಿಗಾಳಿ ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರು ಮತ್ತಷ್ಟು ಹಾಟ್ ಆಗಲಿದೆ. ಹೀಗಾಗಿ ಹೈ ಬಿಪಿ, ಹೃದಯ ಸಂಬಂಧಿ ಖಾಯಿಲೆ ಇರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ದೇಹದ ಉಷ್ಣತೆಯು 40 C ಅಥವಾ ಅದಕ್ಕಿಂತ ಹೆಚ್ಚು ಏರಿದರೆ ಅತ್ಯಂತ ಗಂಭೀರ ಸಮಸ್ಯೆ ಎದುರಾಗುವ ಸಂಭವ ಇದೆ.

ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟೋಕ್ ಕೂಡ ಸಾಧ್ಯತೆ ಇದ್ದು, ಇದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕೆಲವು ದಿನ ತಾಪಮಾನ ಇಳಿಕೆಯವರೆಗೂ 11 ರಿಂದ 4 ಗಂಟೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದೆ ಇರುವಂತೆ ಆರೋಗ್ಯ ಇಲಾಖೆಯಿಂದ ಸಲಹೆ ನೀಡಿದ್ದು ವೈದ್ಯರು ಕೆಲವು ಸಲಹೆ ನೀಡಿದ್ದಾರೆ.

ಹಿಂದಿನ ಲೇಖನನಿಮ್ಮ ಮನಸ್ಸನ್ನು ಸತತವಾಗಿ ಶುಚಿಗೊಳಿಸಿ
ಮುಂದಿನ ಲೇಖನಅಮೇರಿಕಾದಲ್ಲಿ ಭೀಕರ ರಸ್ತೆ ಅಪಘಾತ: ಭಾರತೀಯ ಮೂಲದ ತಾಯಿ-ಮಗಳು ಸಾವು, ತಂದೆ- ಮಗನಿಗೆ ಗಾಯ