ಮೈಸೂರು(Mysuru): ನಂಜನಗೂಡು ಪಟ್ಟಣದ ರಾಮಸ್ವಾಮಿ ಲೇಔಟ್ನ ಎರಡನೇ ಬ್ಲಾಕ್ನ ಶಿಕ್ಷಕರ ಮನೆಯಲ್ಲಿ ಕಳ್ಳತನವಾಗಿದೆ.
ಸೋಮಳ್ಳಿ ಶಾಲೆಯ ಶಿಕ್ಷಕ ಮಾದೇಶ್ ಎಂಬುವರ ಮನೆಯಲ್ಲಿ ನಿನ್ನೆ ರಾತ್ರಿ ಯಾರೂ ಇಲ್ಲದ ಸಮಯ ನೋಡಿ ಕಬ್ಬಿಣದ ಸಲಾಕೆಯಿಂದ ಬಾಗಿಲು ಒಡೆದು ಒಳ ನುಗ್ಗಿರುವ ಕಳ್ಳರು ಸುಮಾರು 65 ಗ್ರಾಂ ಚಿನ್ನಾಭರಣ ಹಾಗೂ ಒಂದೂವರೆ ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ.
ಮನೆಗೆ ಬೀಗ ಹಾಕಿ ಹೆಂಡತಿಯ ಮನೆಗೆ ಹೋಗಿದ್ದ ಶಿಕ್ಷಕ ಮಾದೇಶ್ ಬೆಳಗ್ಗೆ ಬರುವಷ್ಟರಲ್ಲಿ ಕಳ್ಳರು ಕನ್ನ ಹಾಕಿದ್ದಾರೆ.
ಮನೆಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು, ಮನೆಯನ್ನೆಲ್ಲ ಶೋಧಿಸಿ ಕಬೋರ್ಡಿನಲ್ಲಿಟ್ಟಿದ್ದ ಚಿನ್ನದ ಒಂದು ಲಾಂಗ್ ಸರ ಎರಡು ಉಂಗುರ ಒಂದು ಜೊತೆ ಓಲೆ ಸೇರಿ ಸುಮಾರು 65 ಗ್ರಾಂ ಚಿನ್ನವನ್ನು ಕದ್ದೊಯ್ದಿದ್ದಾರೆ.
ಸ್ಥಳಕ್ಕಾಗಮಿಸಿದ ನಂಜನಗೂಡು ಪಟ್ಟಣ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.














