ರಾವಂದೂರು : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯು ಸುಟ್ಟುಹೋದ ಘಟನೆ ಜರುಗಿದೆ.
ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ಸುಕನ್ಯಮ್ಮ ಎಂಬವರ ಮನೆಗೆ ಶನಿವಾರ ರಾತ್ರಿ 9ರ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಟಿ.ವಿ.ಗೆ ಬೆಂಕಿ ಹೊತ್ತಿಕೊಂಡಿದೆ. ನಂತರ ಮನೆಯ ಮೇಲ್ಚಾವಣಿ, ಗೃಹೋಪಯೋಗಿ ವಸ್ತುಗಳು ಸುಟ್ಟು ಹೋಗಿವೆ. ಬೆಂಕಿ ನಂದಿಸಲು ಗ್ರಾಮದ ಯುವಕರು ಹಾಗೂ ಪಿರಿಯಾಪಟ್ಟಣ ಅಗ್ನಿಶಾಮಕದಳ ಸಿಬ್ಬಂದಿ ಶ್ರಮಿಸಿ, ಯಾವುದೇ ಪ್ರಾಣಪಾಯವಾಗದಂತೆ ಎಚ್ಚರಿಕೆ ವಹಿಸಿದರು.
ಸುಕನ್ಯಮ್ಮ ಅವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು ಇವರ ಮಗ ಗಣೇಶ್(31) ಪಾರ್ಶ್ವವಾಯು ಪೀಡಿತರಾಗಿ ಮನೆಯಲ್ಲೇ ಇದ್ದು, ಈಗ ಮನೆ ಸುಟ್ಟು ಹೋಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Saval TV on YouTube