ಮನೆ ಕಾನೂನು ನ್ಯಾಯಾಧೀಶರ ನೇಮಕಾತಿ ವೇಳೆ ಕೊಲಿಜಿಯಂ ಪದ್ದತಿ ಪಾಲಿಸಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತಾಕೀತು

ನ್ಯಾಯಾಧೀಶರ ನೇಮಕಾತಿ ವೇಳೆ ಕೊಲಿಜಿಯಂ ಪದ್ದತಿ ಪಾಲಿಸಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತಾಕೀತು

0

ಹೊಸ ದಿಲ್ಲಿ: ನ್ಯಾಯಾಂಗದ ಉನ್ನತ ಮಟ್ಟದ ನೇಮಕಾತಿ ವೇಳೆ ಕೊಲಿಜಿಯಂ ವ್ಯವಸ್ಥೆಯನ್ನು ಪಾಲನೆ ಮಾಡಬೇಕಾದ್ದು ಈ ನೆಲದ ಕಾನೂನು ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.

ಕೊಲಿಜಿಯಂ ವ್ಯವಸ್ಥೆ ಪಾಲನೆ ಮಾಡದೇ ಕೇಂದ್ರ ಸರ್ಕಾರ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ.  ಕೇಂದ್ರ ಸರ್ಕಾರವು ಕಡ್ಡಾಯವಾಗಿ ಕೊಲಿಜಿಯಂ ಪದ್ದತಿ ಪಾಲನೆ ಮಾಡಲೇ ಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.

ಇದೇ ವೇಳೆ ಕೊಲಿಜಿಯಂ ಸದಸ್ಯರು ಪ್ರಸ್ತಾಪಿಸುವ ಯಾವುದೇ ಹೆಸರನ್ನು ಕೆಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಈ ವಿಚಾರವಾಗಿ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಹಾಗೂ ಸಾಲಿಸಿಟರ್ ಜನರಲ್ಗಳು ಕೇಂದ್ರ ಸರ್ಕಾರಕ್ಕೆ ಸಮಯೋಚಿತ ಸಲಹೆ ನೀಡಬೇಕು ಎಂದು ಸೂಚನೆ ನೀಡಿರುವ ಸುಪ್ರೀಂ ಕೋರ್ಟ್ ಕೊಲಿಜಿಯಂ ಸದಸ್ಯರು ಸಲಹೆ ನೀಡುವ ಹೆಸರುಗಳನ್ನೇ ನೇಮಕಾತಿ ವೇಳೆ ಪರಿಗಣಿಸುವಂತೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದೆ. ಅಷ್ಟೇ ಅಲ್ಲ, ತ್ವರಿತವಾಗಿ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆಯೂ ಸೂಚನೆ ನೀಡಿದೆ.

ಇದೇ ವೇಳೆ ಕೊಲಿಜಿಯಂನ ಸದಸ್ಯರು ಪ್ರಸ್ತಾಪಿಸಿ ಸಲಹೆ ರೂಪದಲ್ಲಿ ನೀಡುವ ನ್ಯಾಯಾಧೀಶರ ಹೆಸರುಗಳನ್ನು ಪರಿಗಣಿಸಿ ಅವರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವ ಪ್ರಕ್ರಿಯೆ ವೇಳೆ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ, ಕೆಲವು ವೇಳೆ ತಿಂಗಳುಗಟ್ಟಲೆ ತಡ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಇದೇ ವೇಳೆ ಕೇಂದ್ರ ಕಾನೂನು ಸಚಿವ ಕಿರಿಣ್ ರಿಜಿಜು ಅವರು ನೀಡಿದ್ದ ಹೇಳಿಕೆಗೂ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ ತಾನೇ ನ್ಯಾಯಾದೀಶರನ್ನು ನೇಮಕ ಮಾಡಬಹುದಲ್ಲವೇ ಎಂಬ ಪ್ರಶ್ನೆಗೆ ಅಗತ್ಯವಿದ್ದರೆ ಹಾಗೆ ಮಾಡಬಹುದು ಎಂದಿದ್ದರು. ಈ ಪ್ರತಿಕ್ರಿಯೆಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿರುವ ಸುಪ್ರೀಂ ಕೋರ್ಟ್, ಈ ವಿಚಾರವನ್ನು ಆದಷ್ಟು ಬೇಗ ಬಗೆಹರಿಸಿ, ಇಲ್ಲವಾದ್ರೆ ನಾವು ನ್ಯಾಯಾಂಗದ ಕಡೆಯಿಂದ ನಿರ್ಧಾರ ಕೈಗೊಳ್ಳುವಂತೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದೆ.

ಹಿಂದಿನ ಲೇಖನಗಡಿ ವಿವಾದ ಮುಗಿದು ಹೋದ ಅಧ್ಯಾಯ: ಪ್ರಹ್ಲಾದ್ ಜೋಶಿ
ಮುಂದಿನ ಲೇಖನಮಗನೊಂದಿಗೆ ಸೇರಿ ಗಂಡನನ್ನು ಕೊಂದ ಮಹಿಳೆ: ದೇಹ 10 ಭಾಗ ತುಂಡು