ಮನೆ ಕಾನೂನು ಮನೆ ದರೋಡೆ ಪ್ರಕರಣ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

ಮನೆ ದರೋಡೆ ಪ್ರಕರಣ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

0

ಧಾರವಾಡ: ದರೋಡೆಕೋರ ನಟೋರಿಯಸ್​ ಕ್ರಿಮಿನಲ್​​​​​​​​ ನ 2 ಕಾಲಿಗೆ ವಿದ್ಯಾಗಿರಿ ಪೊಲೀಸರು ಪೈರಿಂಗ್ ಮಾಡಿದ್ದಾರೆ. ಇದರಲ್ಲಿ ಪೊಲೀಸ್​​ ಸಿಬ್ಬಂದಿಗೂ ಗಾಯಗಳಾಗಿವೆ.

Join Our Whatsapp Group

ಧಾರವಾಡದ ನವಲೂರಿನ ಮನೆಯೊಂದಕ್ಕೆ ಆರೋಪಿ ಪಾಲಾ ವೆಂಕಟೇಶ್ವರ‌ರಾವ್ ಸೇರಿದಂತೆ ಉಳಿದ ದರೋಡೆಕೋರರು ಕನ್ನ ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೆಂಕಟೇಶ್ವರ‌ರಾವ್ ​ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕರೆದುಕೊಂಡು ಹೋಗುತ್ತಿದ್ದಾಗ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಈ ಸಂದರ್ಭದಲ್ಲಿ ಆತನ ಕಾಲಿನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಆರೋಪಿ ದಾಳಿಯಿಂದ ಪಿಎಸ್​ಐ ಸೇರಿ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ 80ಕ್ಕೂ ಹೆಚ್ಚು ಕಳ್ಳತನದಲ್ಲಿ ಭಾಗಿಯಾಗಿದ್ದ. ಮೂಲತಃ ಆಂಧ್ರಪ್ರದೇಶದವನಾಗಿದ್ದು, ಸುಮಾರು ಐದು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ.