ಒಂದು ದಿನ ಶಿಷ್ಯನೊಬ್ಬ ಗುರುವನ್ನು ಕೇಳಿದನು “ನನ್ನ ಆಧ್ಯಾತ್ಮಿಕ ಬೆಳವಣಿಗೆಯನ್ನು ಅಳೆಯುವ ಮಾರ್ಗವೇನಾದರೂ ಇದೆಯೇ?” ಗುರು ಹೇಳಿದರು, “ಅದಕ್ಕೆ ಅನೇಕ ಮಾರ್ಗಗಳಿವೆ”. “ಒಂದನ್ನು ನಮಗೆ ತಿಳಿಸಿಕೊಡಿ”. ಶಿಷ್ಯ ವಿನಂತಿಸಿದನು. ಗುರು ಹೀಗೆ ವಿವರಿಸಿದರು.
ಪ್ರಶ್ನೆಗಳು :-
1.ಗುರುತನ್ನ ಶಿಷ್ಯನಿಗೆ ಏನು ಹೇಳಿದನು? 2. ಈ ಕಥೆ ಪರಿಣಾಮವೇನು?
ಉತ್ತರಗಳು :-
1.ಒಂದು ದಿನದಲ್ಲಿ ನೀನು ಅದೆಷ್ಟು ಭಾರಿ ಭಾವನಾತ್ಮಕವಾಗಿ ವಿಚಲಿತನಾಗುವೆ ಎಂಬುದನ್ನು ತಿಳಿದುಕೋ. ಅದರ ಲೆಕ್ಕವಿಡು. ಆ ಸಂಖ್ಯೆ ಕಡಿಮೆಯಾಗುತ್ತಾ ಬಂದರೆ ನೀನು ಆಧ್ಯಾತ್ಮಿಕ ಪ್ರಗತಿಯನ್ನು ಮಾರ್ಗದಲ್ಲೇ ಮುನ್ನಡೆಯುತ್ತಿದ್ದೀಯ ಎಂದರ್ಥ…
2.ಆಧ್ಯಾತ್ಮಿಕ ಶಕ್ತಿಯನ್ನು ಮನಸ್ಸಿನ ಸಮಸ್ಥಿತಿ ಆಧಾರದ ಮೇಲೆ ಅಳಿಯಬಹುದು. ಒಬ್ಬ ವ್ಯಕ್ತಿ ಆಧ್ಯಾತ್ಮಿಕವಾಗಿ ಬಲಿಷ್ಠವಾಗಿದ್ದಾಗ ಅವನು ಸಂಕಟಪಡುವುದಿಲ್ಲ. ಏಕೆಂದರೆ ಅಂತರಂಗದ ಶಕ್ತಿ ನಿರ್ದೇಶಸಿದಂತೆ ತಾನು ಕಾರ್ಯನಿರತ ನಾಗಿದ್ದೇನೆ ಎಂದು, ಅವನು ಅರಿತಿರುತ್ತಾನೆ. ಅಂತಿಮವಾಗಿ ತನ್ನ ಮನಸಾಕ್ಷಿಗೆ ಜಯ ಮತ್ತು ಸಂತೋಷ ಲಭಿಸುವುದೆಂದು ತಿಳಿದಿರುವುದರಿಂದ ಅವನು ನೋವು ಮತ್ತು ಸೋಲನ್ನು ಅನುಭವಿಸುವುದಿಲ್ಲ.