ಒಮ್ಮೊಮ್ಮೆ ತೀರ ಸ್ವರೂಪದ ಮಾನಸಿಕ ಕಾಯಿಲೆಯುಳ್ಳ ವ್ಯಕ್ತಿ ಸಿಟ್ಟು, ಕೋಪದಿಂದ ಗಲಾಟೆ ಮಾಡ ತೊಡಗಬಹುದು. ತನ್ನ ಅಥವಾ ಇತರ ಆಸ್ತಿ-ಪಾಸ್ತಿಯನ್ನು ಹಾಳು ಮಾಡಬಹುದು. ಚಾಕು, ಮುಚ್ಚು ತೆಗೆದುಕೊಂಡು ತನ್ನನ್ನೇ ಹೊಡೆದುಕೊಳ್ಳಲು ಹೋಗಬಹುದು ಅಥವಾ ಬೇರೆಯವರನ್ನು ಹೊಡೆಯಲು ಬರಬಹುದು. ಎಲ್ಲರ ಪಾಲಿಗೆ ಆತ ಭಯೋತ್ಪಾದಕನಾಗಿ, ಅವನನ್ನು ನೋಡಿಕೊಳ್ಳುವುದು ಕಷ್ಟವಾಗಬಹುದು.
ಅಂತಹ ಸನ್ನಿವೇಶದಲ್ಲಿ ಸ್ಥಳೀಯ ಡಾಕ್ಟರೊಬ್ಬರನ್ನು ಕರೆಯಿರಿ. ರೋಗಿಯ ಮೇಲೆ ಕಂಬಳಿಯನ್ನು ಎಸೆದು, ಮೂರು-ನಾಲ್ಕು ಜನರ ಸಹಾಯದಿಂದ ಅವನನ್ನು ಬಿಗಿಯಾಗಿ ಹಿಡಿದುಕೊಳ್ಳಿ ಮತ್ತು ಬರುವ ಸೂಜಿಮದ್ದನ್ನು (ಹಲೊಪೆರಿಡಲ್10 ಅಥವಾ ಲೊರೆಜಿಪಾಂ 2.ಮಿ.ಗ್ರಾಂ.) ಡಾಕ್ಟರಿನಿಂದ ಕೊಡಿಸಿ. ಅವಶ್ಯಕತೆ ಬಿದ್ದರೆ ಸ್ವಲ್ಪ ಹೊತ್ತು ಬಿಟ್ಟು ಇನ್ನೊಂದು ಇಂಜೆಕ್ಷನ್ ಕೊಡಿಸಿ. ರೋಗಿಗೆ ಮಂಪರು ಬರುತ್ತಿದ್ದಂತೆ, ಆತನನ್ನು ಆಸ್ಪತ್ರೆಗೆ ಕರೆದೊಯ್ಯಿರಿ. ಆಂಬುಲೆನ್ಸ್ 108 ಸೇವೆಯನ್ನು ಬಳಸಿ.
* ಮಾನಸಿಕ ಕಾಯಿಲೆ ನಿವಾರಣೀಯ ಎಂಬುದು ನಿಮಗೆ ಗೊತ್ತೇ ? :-
ಸಾಕಷ್ಟು ಮಟ್ಟಿಗೆ, ಜನರ ಕಾಯಿಲೆ ಬರುವುದನ್ನು ತಡೆಗಟ್ಟಬಹುದು ಎಂಬುದು ನಿಮಗೆ ಗೊತ್ತಿರಲಿ. ಖಾಯಿಲೆ ಬಂದ ಮೇಲೆ ಚಿಕಿತ್ಸೆ ನಡೆಸುವುದಕ್ಕಿಂತ ಮುಂಜಾಗ್ರತೆ ವಹಿಸುವುದು ಜಾಣತನ ಮತ್ತು ಸುರಕ್ಷಿತ.
ಈ ಕೆಳಗಿನ ಸಲಹೆಗಳನ್ನು ಗಮನಿಸಿ:
*ನಿಮ್ಮ ಮನೆಯಲ್ಲಿ ಈಗಾಗಲೇ ಒಬ್ಬ ಚಿತ್ತವಿಕಲತೆಯ ಮನೋರೋಗಿ ಇದ್ದರೆ, ನೀವು ಮದುವೆಯಾಗಬೇಕಾದರೆ, ಚಿತ್ತವಿಕಲತೆ ಇರುವ ವ್ಯಕ್ತಿ ಇಲ್ಲದ ಆರೋಗ್ಯವಂತ ಕುಟುಂಬದ ವ್ಯಕ್ತಿಯನ್ನು ಮದುವೆಯಾಗಿ.
*ಒಳ್ಳೆ ಆಹಾರ ಮತ್ತು ವ್ಯಾಯಾಮದಿಂದ ನಿಮ್ಮ ಆರೋಗ್ಯವನ್ನು ಕಾಪಾಡಿ.
*ದಿನನಿತ್ಯದ ಚಟುವಟಿಕೆಯಲ್ಲಿ ಒಂದು ಕ್ರಮವಿರಲಿ, ಯಾವುದನ್ನು ಅತಿಯಾಗಿ ಮಾಡಬೇಡಿ.
*ತಲೆಗೆ ಪೆಟ್ಟು ಬೀಳುವುದನ್ನು ನಿವಾರಿಸಿಕೊಳ್ಳಿರಿ.
*ಯಾವುದೇ ಸಣ್ಣಪುಟ್ಟ ಕಾಯಿಲೆ ಬಂದರು, ಉದಾಸೀನ ಮಾಡದೆ ಸಾಧ್ಯವಾದಷ್ಟು ಬೇಗ ಸರಿಯಾದ ಹಾಗೂ ಒಳ್ಳೆಯ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯಿರಿ.
*ನಿಮ್ಮ ಇತಿಮಿತಿ ಸಾಮರ್ಥ್ಯಗಳ ಬಗ್ಗೆ ಸರಿಯಾದ ಅರಿವಿರಲಿ. ನಿಮ್ಮ ಆಸೆ, ಆಕಾಂಕ್ಷೆ, ಚಟುವಟಿಕೆಗಳನ್ನು, ನಿಮ್ಮ ಸಾಮರ್ಥ್ಯ-ಸೌಲಭ್ಯಗಳ ಮಿತಿಯಲ್ಲಿ ಇಟ್ಟುಕೊಳ್ಳಿ….
*ಮನಸ್ಸಿಗೆ ಸಂತೋಷ ಕೊಡುವ ಮನೋರಂಜನಾ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಭಾಗವಹಿಸುತ್ತೀರಿ….
*ಒಳ್ಳೆ ಸ್ನೇಹಿತರನ್ನು ಸಂಪಾದಿಸಿಕೊಂಡ ಅವರೊಂದಿಗೆ ನಿಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಿ, ಪ್ರೀತಿ ಆಸರೆಯನ್ನು ಕೊಟ್ಟು ಪಡೆಯಿರಿ.
*ಮಧ್ಯ ಮತ್ತು ಮಾದಕ ಪದಾರ್ಥಗಳ ಸೇವನೆಯಿಂದ ದೂರವಿರಿ.
* ಜೀವನದಲ್ಲಿ ತೃಪ್ತಿಪಡುವುದನ್ನು ಕಲಿಯಿರಿ. ಸಾಧಿಸಬಹುದಾದ ಆದರ್ಶ ಗುರಿಯೊಂದನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಪ್ರಯತ್ನ ಮಾಡಿ.
-ಮುಂದುವರೆಯುತ್ತದೆ…