ಮನೆ ರಾಷ್ಟ್ರೀಯ ಹುಬ್ಬಳ್ಳಿ: 1 ವರ್ಷ 11 ತಿಂಗಳ ಬಾಲಕಿ ಆರ್ನಾ ಪಾಟೀಲಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್...

ಹುಬ್ಬಳ್ಳಿ: 1 ವರ್ಷ 11 ತಿಂಗಳ ಬಾಲಕಿ ಆರ್ನಾ ಪಾಟೀಲಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ

0

ಹುಬ್ಬಳ್ಳಿ(Hubballi): ನಗರದ ಶೆಟ್ಟರ ಕಾಲೊನಿಯ ಒಂದು ವರ್ಷದ 11 ತಿಂಗಳ ಬಾಲಕಿ ಆರ್ನಾ ಪಾಟೀಲ ಸಾಮಾನ್ಯ ಜ್ಞಾನಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿ, ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

ಬುದ್ದಿವಂತ ಬಾಲಕಿ ಆರ್ನಾ ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬುರಡಕಟ್ಟಿ ಗ್ರಾಮದ ಶಿದ್ರಾಮಗೌಡ ಪಾಟೀಲ ಮತ್ತು ವಿದ್ಯಾಶ್ರೀ ಪಾಟೀಲ ಪುತ್ರಿ.

ಈ ಕುರಿತು ಸುದ್ದಿಗೋಷ್ಟಿಯನ್ನುದ್ದೇಶಿದಿ ಮಾತನಾಡಿರುವ ತಂದೆ ಶಿದ್ರಾಮಗೌಡ ಪಾಟೀಲ, ನಾನು ಮತ್ತು ಪತ್ನಿ ಬಿಡುವಿದ್ದಾಗ ಹೇಳಿಕೊಟ್ಟ ಸಾಮಾನ್ಯ ಜ್ಞಾನವೇ ಆರ್ನಾ ಸಾಮಾನ್ಯ ಜ್ಞಾನದಲ್ಲಿ ಸಾಧನೆ ಮಾಡಲು ಪ್ರೇರಣೆ. ಒಂದು ವರ್ಷ 8 ತಿಂಗಳಿದ್ದಾಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸ್ಪರ್ಧೆಯಲ್ಲಿ ಮಗಳು ಭಾಗವಹಿಸಿದ್ದಳು. 10 ಬಗೆಯ ತರಕಾರಿ, 11 ವಿವಿಧ ಹಣ್ಣು, 22 ಪ್ರಾಣಿಗಳ ಹೆಸರನ್ನು ಸರಾಗವಾಗಿ ಹೇಳುತ್ತಾಳೆ ಎಂದು ತಿಳಿಸಿದರು.

ಕನ್ನಡ ಹಾಗೂ ಇಂಗ್ಲಿಷ್ ವರ್ಣಮಾಲೆಗಳನ್ನು ಪಟಪಟನೆ ಹೇಳುತ್ತಾಳೆ. ರಾಷ್ಟ್ರೀಯ ಚಿಹ್ನೆ, ದೇಹದ 15 ಭಾಗಗಳನ್ನು ಗುರುತಿಸುತ್ತಾಳೆ. ಪ್ರಧಾನಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಹಲವು ಮಾಹಿತಿಗಳನ್ನು ಬಲ್ಲವಳಾಗಿದ್ದಾಳೆ ಎಂದರು.