ಮನೆ ರಾಜ್ಯ ವಿಜಯಪುರ ಪಾಲಿಕೆ ಚುನಾವಣೆ: ಶಾಂತಿಯುತ ಮತದಾನ

ವಿಜಯಪುರ ಪಾಲಿಕೆ ಚುನಾವಣೆ: ಶಾಂತಿಯುತ ಮತದಾನ

0

ವಿಜಯಪುರ(Vijayapura): ಭಾರೀ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿರುವ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಗೆ ಶುಕ್ರವಾರ ಬೆಳಿಗ್ಗೆ 7 ರಿಂದ ಮತದಾನ ಆರಂಭವಾಗಿದ್ದು, ಶಾಂತಿಯುತವಾಗಿ ನಡೆಯುತ್ತಿದೆ.

ಬೆಳಿಗ್ಗೆಯಿಂದಲೇ ನಗರವಾಸಿಗಳು ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸತೊಡಗಿದ್ದು, ಸಂಜೆ 5ರ ವರೆಗೆ ಮತದಾನ ನಡೆಯಲಿದೆ.

ವಿಜಯಪುರ ಜಿಲ್ಲಾ ಚುನಾವಣೆ ಅಧಿಕಾರಿಯಾದ ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ತಮ್ಮ ಪತ್ನಿ ಶ್ವೇತಾ ಅವರೊಂದಿಗೆ ಮತಗಟ್ಟೆಗೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ನಗರದ ವಿ.ಬಿ.ದರಬಾರ ಶಾಲೆಯಲ್ಲಿ ಸ್ಥಾಪಿಲಾಗಿರುವ 219 ರ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಮತದಾನ ಹಕ್ಕು ಚಲಾಯಿಸಿದರು.

35 ವಾರ್ಡ್ ಗಳನ್ನು ಹೊಂದಿರುವ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಸಂಬಂಧ 303 ಮತಗಟ್ಟೆಗಳನ್ನು ತೆರೆಯಲಾಗಿದೆ. 48 ಅತೀ ಸೂಕ್ಷ್ಮ, 83 ಸೂಕ್ಷ್ಮ, 172 ಸಾಧಾರಣ ಮತಗೆಟ್ಟೆಗಳೆಂದು ಗುರುತಿಸಿ, ಪೊಲೀಸ್ ಭದ್ರತೆ ಒದಗಿಸಲಾಗಿದೆ.ಒಟ್ಟು 2,88,288 ಮತದಾರರು ಇದ್ದಾರೆ.

ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಲಾಗಿದೆ. ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತದಾನದ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.

174 ಅಭ್ಯರ್ಥಿಗಳು: ಕಣದಲ್ಲಿ ಕಾಂಗ್ರೆಸ್ 35, ಬಿಜೆಪಿ 33, ಜೆಡಿಎಸ್ 20, ಎಎಪಿ 15, ಎಐಎಂಐಎಂ 4, ಕೆಅರ್ ಎಸ್ , ಜನತಾ ಪಾರ್ಟಿ ತಲಾ ಮೂರು, ಎಸ್ ಡಿಪಿಐ ಎರಡು ಮತ್ತು ಬಿಎಸ್ ಪಿ ಒಂದು ಹಾಗೂ 58 ಜನ ಪಕ್ಷೇತರ ಸೇರಿದಂತೆ 174 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಹಿಂದಿನ ಲೇಖನಹುಬ್ಬಳ್ಳಿ: 1 ವರ್ಷ 11 ತಿಂಗಳ ಬಾಲಕಿ ಆರ್ನಾ ಪಾಟೀಲಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ
ಮುಂದಿನ ಲೇಖನಪಶ್ಚಿಮ ಬಂಗಾಳ: ಲಾರಿ – ಮಾರುತಿ ವ್ಯಾನ್ ನಡುವೆ ಮುಖಾಮುಖಿ ಢಿಕ್ಕಿ- ಐವರ ಸಾವು