ಕಳೆದ ಶತಮಾನದಿಂದ ಮಾನವ ನೈಜತೆ ಕುರಿತಂತೆ ಮನೋವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ ಮನುಷ್ಯನ ಪ್ರವೃತ್ತಿಗಳಿಗೆ ತಾಯಿ-ತಂದೆಯರ ಪ್ರವರ್ತನೆಯೇ ಕಾರಣ ಬಾಲ್ಯದ ಅನುಭವಗಳು, ಪರಿಸರಗಳ ಪ್ರಭಾವ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗಳ ಪ್ರಭಾವವೇ ಕಾರಣ ಎಂದು ಸ್ಪಷ್ಟಪಡಿಸಿದರು. ಮನುಷ್ಯನಲ್ಲಿ ವಿವಿಧ ಪ್ರಶ್ನೆಗಳಿರುತ್ತವೆ. ಅವುಗಳ ಪ್ರಕಾರವೇ ಆತನ ಪ್ರವರ್ತನೆ ಇರುತ್ತದೆ ಆ ವೈಖರಿಗಳು ಈ ರೀತಿಯಾಗಿರುತ್ತವೆ
ಕೋಮಲ/ಮೃದು ವೈಖರಿ:
ಹೇಳಿದ ವಿಷಯವನ್ನು ಶ್ರದೆಯಿಂದ ಕೇಳಿ, ತಮ್ಮ ಅಭಿಪ್ರಾಯವನ್ನು ಸಮ್ಯಕ್ ತಿಳಿಯಪಡಿಸುತ್ತಾರೆ.
ಹಠದ ವೈಖರಿ: ಎದುರಿನವರು ಏನೇ ಹೇಳಿದರೂ, ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಲು ಇಷ್ಟಪಡುವುದಿಲ್ಲ. ತಾವು ಮಾಡುತ್ತಿರು ವುದು ತಪ್ಪೆಂದು ಗೊತ್ತಾದರೂ ಬದಲಾಯಿಸಿಕೊಳ್ಳಲಾರರು.
ಮೂರ್ಖ ವೈಖರಿ: ಎದುರಿನವರಿಗೆ ಏನೂ ತಿಳಿಯದೆಂಬ ಭ್ರಮೆಯಲ್ಲಿರುತ್ತಾ ತಮ್ಮ ಅಭಿಪ್ರಾಯಗಳನ್ನು ಅವರ ಮೇಲೇರಲು ಪ್ರಯತ್ನಿಸುತ್ತಾರೆ.
ತಂದೆ ವೈಖರಿ: ಸಂಪ್ರದಾಯ, ಸದಾಚಾರವೆನ್ನುತ್ತಾ ತಮಗಿರುವ ಪರಿಮಿತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.
ಪುರುಷ ವೈಖರಿ: ಎಲ್ಲದರಲ್ಲೂ ತನ್ನದೇ ಮೇಲುಗೈಯಾಗಿರಬೇಕೆಂದು, ಇತರರು ತಾವು ಹೇಳಿದ್ದನ್ನೇ ಕೇಳಬೇಕೆಂದು ಪೌರುಷಯುತವಾಗಿ ಮಾತನಾಡುತ್ತಾರೆ. ತಾನೇ ಸರ್ವಜ್ಞ ಎಂದುಕೊಳ್ಳುತ್ತಾನೆ.
ಸ್ತ್ರೀ ವೈಖರಿ: ತಮ್ಮಲಿಲ್ಲದವುಗಳ ಕುರಿತಂತೆ ಚಿಂತಿಸುವುದಕ್ಕಿಂತ, ಇರುವುದರಲ್ಲೇ ತೃಪ್ತಿ ಹೊಂದುತ್ತಾ ಆನಂದವಾಗಿರುತ್ತಾರೆ.
ಮಾನವ ವೈಖರಿ: ಇವರು ದೊಡ್ಡ ಮನುಷ್ಯರ ಸ್ವಭಾವವನ್ನು ಹೊಂದಿರುತ್ತಾರೆ. ಎಲ್ಲರಲ್ಲೂ ಒಳ್ಳೆಯವರಾಗಿರುವ ಪದತಿಯನ್ನು ಅಳವಡಿಸಿಕೊಂಡಿರುತ್ತಾರೆ ಬೇರೊಬ್ಬರನ್ನು ನೋಯಿಸದೆ, ತಾವೂ ನೋವು ಪಟ್ಟುಕೊಳ್ಳದೆ ಸಮಯ, ಸಂದರ್ಭಗಳಿಗನುಸಾರವಾಗಿ ಪ್ರವರ್ತಿ ಸುತ್ತಾರೆ.
ದಾನವನ ವೈಖರಿ :ಇವರು ಗುಲಾಬಿ ಹೂವಿನ ಬಗ್ಗೆ ಯೋಚಿಸದೆ ಅದರ ಮುಳ್ಳು ಗಳನ್ನು ನಿಂದಿಸುತ್ತಾರೆ ಇತರರನ್ನು ಹಿಂಸಿಸಿಯಾದರೂ ತಮಗೆ ಬೇಕಾದ್ದನ್ನು ಸಾಧಿಸಿಕೊಳ್ಳುತ್ತಾರೆ
ದೈವ ವೈಖರಿ: ಬೇರೆಯವರ ಕಷ್ಟವನ್ನು ಗುರುತಿಸುತ್ತಾರೆ ತಮಗೆ ಅಗತ್ಯ ವಿರುವುದಕ್ಕಿಂತ ಹೆಚ್ಚಾಗಿದ್ದರೆ ಇತರರಿಗೆ ಕೊಟ್ಟು ಅವರನ್ನು ಕಾವಾಡುತ್ತಾರೆ ಇವರಿಗೆ ಶತ್ರುಗಳಿರುವುದಿಲ್ಲ ಏಕೆಂದರೆ ಇವರು ಎಲ್ಲರನ್ನೂ ಪ್ರೀತಿಸುತ್ತಾರೆ
ಉದಾಹರಣೆಗೆ ಒಬ್ಬ ಹುಡುಗನಿಗೆ ಓದಿನಲ್ಲಿ ಒಳ್ಳೆಯ ಅಂಕಗಳು ಬರುತ್ತಿಲ್ಲ ಅವನ ತಂದೆ ಆ ವಿಷಯವನ್ನು ತಿಳಿದುಕೊಂಡು ತನ್ನ ಮಗನೊಂದಿಗೆ ಮಾಡುವ ಸಂಭಾಷಣೆ ಹೇಗಿರುತ್ತದೆಯೋ ನೋಡಿ ವೈಖರಿಗಳಲ್ಲಿನ ವ್ಯತ್ಯಾಸವನ್ನು ಭಾಷೆಯಲ್ಲಿ ಹೇಗೆ ವ್ಯಕ್ತಪಡಿಸುತ್ತಾರೋ ಗಮನಿಸಿ
ಮೃದು ವೈಖರಿ: ಈ ಬಾರಿ ಒಳ್ಳೆಯ ಅಂಕಗಳು ಬಂದೇ ಬರುತ್ತವೆ ಚೆನ್ನಾಗಿ ಓದಿಕೋ
ಹಶ ವೈಖರಿ: ನಿನಗೆಷ್ಟೇ ಹೇಳಿದರೂ ಪ್ರಯೋಜನವಿಲ್ಲ ಏನೇ ಆದರೂ ನಿನ್ನದು ಮಣ್ಣಿನ ತಲೆ
ಮೂರ್ಖ ವೈಖರಿ: ನಿನ್ನನ್ನು ಓದಿಸುವುದಕ್ಕಿಂತ ಯಾವುದಾದರೂ ವರ್ಕ್ ಶಾಪ್ ನಲ್ಲಿ ಕೆಲಸಕ್ಕೆ ಸೇರಿಸುವುದು ಒಳ್ಳೆಯದು
ತಂದೆ ವೈಖರಿ: ನಿನಗೆ ಎಲ್ಲವನ್ನೂ ಹೊಂದಿಸಿಕೊಡುತ್ತಿದ್ದೇನಲ್ಲಾ! ನಿನಗೆ ಇನ್ನೇನು ರೋಗ
ತಾಯಿ ವೈಖರಿ: ನಿನ್ನ ಸಮಸ್ಯೆ ಏನೆಂಬುದನ್ನು ಹೇಳು ಮರಿ. ಕೌನ್ಸಿಲಿಂಗ್ ಮಾಡಿ ಸೋಣ
ಪುರುಷ ವೈಖರಿ: ಎಲ್ಲಾ ನಮ್ಮ ಕರ್ಮ! ನಿನಗೆ ಅಟ್ ಲೀಸ್ಟ್ ನನಗಿರುವ ಬುದಿ, ಜಾಣ್ಮೆಗಳಲ್ಲಿ ಅರ್ಧದಷ್ಟಾದರೂ ಬರಲಿಲ್ಲವಲ್ಲೋ
ಸ್ತ್ರೀ ವೈಖರಿ: ಹೋಗ್ಲಿ ಬಿಡು ಪುಟ್ಟಾ ಯೋಚ್ನೆ ಮಾಡ್ಬೇಡಾ ಕನಿಷ್ಠ ಪಾಸ್ ಮಾರ್ಕ್ಗಳನ್ನಾದರೂ ತೆಗೆದುಕೊಂಡಿದ್ದೀಯಲ್ಲಾ
ಮಾನವ ವೈಖರಿ: ನಿನಗೇನಾದರೂ ಅನುಮಾನಗಳಿದ್ದರೆ ನಿಮ್ಮ ಟೀಚರ್ ಗಳನ್ನು ಧೈರ್ಯವಾಗಿ ಕೇಳಿ ಬಗೆಹರಿಸಿಕೊ
ದಾನವ ವೈಖರಿ: ನಿನ್ನನ್ನು ಆ ನಿಮ್ಮ ಟೀಚರ್‌ಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಟ್ಟು ಕೊಂದರೆ ಸರಿಹೋಗುತ್ತೆ
ದೈವ ವೈಖರಿ : ಅದ್ಯಾಕೆ ಹೀಗೆ ಅಂತೀನಿ ಅಂದೆ ನಿನ್ನಂತಹ ಒಬ್ಬ ಒಳ್ಳೆಯ ವಿದ್ಯಾರ್ಥಿಗೆ ಸರಿಯಾಗಿ ಅಂಕಗಳು ಬರುತ್ತಿಲ್ಲವೆಂದರೆ ಇದರ ಬಗ್ಗೆ ಸ್ವಲ್ಪ ಯೋಚಿಸಬೇಕಾಗುತ್ತದೆ
ತಾಯಿ, ತಂದೆಯರು ಅಧಿಕಾರಿಗಳು ಇತರ ಹಿರಿಯ ವ್ಯಕ್ತಿಗಳು ಈ ಬಗೆಯ ವೈಖರಿಗಳಿಂದ ಇರುವುದರಿಂದ ಪ್ರೇರಣೆಗಳು, ಸ್ಪಂದನೆಗಳು ಅದಕ್ಕನುಗುಣವಾಗಿ ಇರುತ್ತವೆ. ಸಮಾಜದಲ್ಲಿ ಶರವೇಗವಾಗಿ ಬರುತ್ತಿರುವ ಬದಲಾವಣೆಗಳಿಂದಾಗಿ ವ್ಯಕ್ತಿಗಳ ಸಾಮಾಜಿಕ ಮೌಲ್ಯಗಳು ಬದಲಾಗುತ್ತಿವೆ ಪೂರ್ವದಲ್ಲಿ ಪರಿಸ್ಥಿತಿಗಳು ಅನುರಾಗಗಳು ಸ್ಥಿರವಾಗಿರುತ್ತಿದ್ದವು. ಆದರೀಗ ಅವು ತಲೆಕೆಳಗಾಗಿವೆ ಜೊತೆಗೆ ಈಗಿನ ಕಾಲದಲ್ಲಿ ನೈತಿಕ ಮೌಲ್ಯಗಳು ಗಣನೀಯವಾಗಿ ಕುಸಿಯುತ್ತಿವೆ
ಹಣಕ್ಕೆ ಪ್ರಾಮುಖ್ಯತೆ ಹೆಚ್ಚಾಗಿದೆ ಹಣ ಇರುವವರಿಗೇ ಸಮಾಜದಲ್ಲಿ ಪ್ರಥಮ ಸ್ಥಾನ. ಆ ಹಣವನ್ನು ಹೇಗೆ ಸಂವಾದಿಸಿದರೆಂಬುದರ ಬಗ್ಗೆ ಜನರು ತಲೆಕೆಡಿಸಿಕೊಳ್ಳುವುದಿಲ್ಲ ಕಷ್ಟಪಟ್ಟು ಸಂಪಾದಿಸಿದವರ ಪರಿಸ್ಥಿತಿ ಸಾಮಾನ್ಯವಾಗಿದ್ದರೆ, ಅಡ್ಡ ದಾರಿಗಳಲ್ಲಿ ಹಣ ಸಂಪಾದನೆ ಮಾಡಿದವರು ಅಗ್ರ ಸ್ಥಾನದಲ್ಲಿ ನಿಂತು ಪ್ರತಿಷ್ಠೆಗೆ ಅಧಿಕಾರಕ್ಕೆ ಹಾ ತೊರೆಯುತ್ತಿದ್ದಾರೆ. ಪ್ರಾಮಾಣಿಕರಾಗಿರುವವರನ್ನು ಕೈಲಾಗದವರನ್ನಾಗಿ ನೋಡುವ ದಿನಗಳು ಬಂದಿವೆ.
ಓದು ಮಾತ್ರವಲ್ಲ, ಬದುಕನ್ನೂ ಓದಬೇಕು
ಕೆಲವು ಪೇರೆಂಟ್ಸ್ ತಮ್ಮ ಮಕ್ಕಳು ಓದಿನಲ್ಲಿ ಚಾಂಪಿಯನ್ ಆಗಬೇಕೆಂಬ ಮಹಾದಾಸೆಯಿಂದ ಉಳಿದ ವಿಷಯಗಳ ಕುರಿತಂತೆ ಯೋಚಿಸಲೂ ಬಿಡುವುದಿಲ್ಲ ಬೇರೊಂದು ವಿಷಯದಲ್ಲಿ ಅದ್ಭುತವಾದ ನೈಪುಣ್ಯವನ್ನು ತೋರಿಸಿದರೂ ಮೆಚ್ಚಿಕೊಳ್ಳುವುದಿಲ್ಲ. ಓದಿನಲ್ಲಿ ರ್ಯಾಂಕ್ ಬಂದರೆ ಮಾತ್ರ ಅವರಿಗೆ ತೃಪ್ತಿ ಅಂತಹ ತತ್ವವನ್ನು ಹೆತ್ತವರು ಕೈಬಿಡಬೇಕು. ಅಂತಹ ತಾಯಿ ತಂದೆಯರಿಗೆ ನಾನು ಆ ಪದತಿಯನ್ನು ಕೈಬಿಡಿ ಎಂದು ಹೇಳಿದರೆ, ಬಹುತೇಕರು ಕೋಪ ಮಾಡಿಕೊಂಡು ಅಲ್ಲಿ. ಈಗಿನ ಕಾಲದಲ್ಲಿ ಶೇಕಡ 70. 80ರಷ್ಟು ಅಂಕಗಳು ಬಂದರೆ ಏತಕ್ಕೆ ಪ್ರಯೋಜನವಾಗುತ್ತೆ ಕನಿಷ್ಟ 95ರಷ್ಟಾದರೂ ಅಂಕಗಳನ್ನು ಪಡೆದುಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ” ಎನ್ನುತ್ತಾರೆ.