ಮನೆ ಅಪರಾಧ ಹುಣಸೂರು: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 2.96 ಲಕ್ಷ ರೂ. ವಶ

ಹುಣಸೂರು: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 2.96 ಲಕ್ಷ ರೂ. ವಶ

0

ಹುಣಸೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 2.96 ಲಕ್ಷ ರೂ.ಗಳನ್ನು ತಾಲೂಕಿನ ಉಮ್ಮತ್ತೂರು(ನಲ್ಲೂರುಪಾಲ) ನಲ್ಲಿ ಚುನಾವಣಾ ಚೆಕ್‌ ಪೋಸ್ಟ್ ನಲ್ಲಿ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

Join Our Whatsapp Group

ಎ.1ರ ಸೋಮವಾರ ರಾತ್ರಿ ಹುಣಸೂರಿನ ಎನ್.ಎಸ್‌ ತಿಟ್ಟಿನ ಎಸ್.ಎಲ್.ವಿ.ಏಜೆನ್ಸೀಸ್‌ಗೆ ಸೇರಿದ ವಾಹನದಲ್ಲಿ ತಾಲೂಕಿನ ಗುರುಪುರದಿಂದ ಹುಣಸೂರಿಗೆ ವಾಪಾಸ್ ಬರುತ್ತಿದ್ದ ವೇಳೆ ವಾಹನ ತಪಾಸಣೆ ಮಾಡಲಾಗಿ ದಿಲೀಪ್ ಹಾಗೂ ಅರುಣ್‌ ಕುಮಾರ್ ಬಳಿಯಿದ್ದ 1,18,760 ರೂ. ಹಾಗೂ ಮಂಗಳವಾರ ರಾತ್ರಿ ಹುಣಸೂರಿನ ಆರ್.ಕೆ.ಏಜೆನ್ಸಿಯ ಷರೀಪುಲ್ಲಾರವರು ತಮ್ಮ ವಾಹನದಲ್ಲಿ ದಾಖಲೆ ಇಲ್ಲದೆ 1,11,960 ರೂ.ಗಳನ್ನು ಕೊಡೊಯ್ಯುತ್ತಿದ್ದ ವೇಳೆ ತಪಾಸಣೆ ನಡೆಸಿದಾಗ ಪತ್ತೆಯಾಗಿದೆ.

ಹಣವನ್ನು ಫ್ಲಯಿಂಗ್ ಸ್ಕ್ವಾಡ್‌ ನ ಅನಿಲ್ ಹಾಗೂ ಚೆಕ್‌ ಪೋಸ್ಟ್ ಮ್ಯಾಜಿಸ್ಟ್ರೇಟ್ ಮಹದೇವ್ ಮತ್ತು ತಂಡ ವಶಪಡಿಸಿಕೊಂಡು ವರದಿ ನೀಡಿದ್ದಾರೆ.

 ಸ್ಥಳಕ್ಕೆ ತಹಶೀಲ್ದಾರ್ ಡಾ.ಎಂ.ನಯನ ಹಾಗೂ ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಭೇಟಿ ನೀಡಿ ಪರಿಶೀಲಿಸಿದರು.

ಹಿಂದಿನ ಲೇಖನಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಮಾಡಿದ ಅಭಿವೃದ್ಧಿ ಕಾರ್ಯದ ಶ್ವೇತ ಪತ್ರ ಹೊರಡಿಸಿ: ಸಿಎಂಗೆ ಜಿಟಿಡಿ ಸವಾಲು
ಮುಂದಿನ ಲೇಖನಗ್ಯಾರಂಟಿ ಯೋಜನೆಗಳ ನೆಪದಲ್ಲಿ ದಲಿತರು, ಹಿಂದುಳಿದವರಿಗೆ ಕಾಂಗ್ರೆಸ್‌ ನಿಂದ ಅನ್ಯಾಯ: ಡಾ.ಕೆ.ಸುಧಾಕರ್