ಮನೆ ರಾಜ್ಯ ಪರಸ್ತ್ರಿಯೊಂದಿಗೆ ಪತಿ ಪರಾರಿ: ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಪರಸ್ತ್ರಿಯೊಂದಿಗೆ ಪತಿ ಪರಾರಿ: ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

0

ಕೊಡಗು: ಹೆಂಡತಿಯನ್ನು ಬಿಟ್ಟು ಬೇರೆ ವಿವಾಹಿತ ಮಹಿಳೆಯೊಂದಿಗೆ ವ್ಯಕ್ತಿ ಪರಾರಿಯಾಗಿರುವ ಘಟನೆ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ.

ಮಡಿಕೇರಿ ನಗರದ ತ್ಯಾಗರಾಜ ಕಾಲೋನಿಯ ಸತೀಶ್(45) ಪರಸ್ತ್ರಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ಪತ್ನಿ ರೇಖಾ ದೂರು ನೀಡಿದ್ದಾರೆ.

ಸತೀಶ್ ಸ್ವಂತ ಅಂಗಡಿ ಹೊಂದಿದ್ದು, ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಎಸ್ಕೇಪ್ ಆಗಿದ್ದಾನೆ ಎಂದು ಶಂಕಿಸಲಾಗಿದೆ. ಸತೀಶ್ ತನ್ನ ಜೊತೆಯಲ್ಲಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ.

ಇದರಿಂದ ಕಂಗಾಲಾದ ರೇಖಾ, ಪೊಲೀಸ್​ ಠಾಣೆ ಮೆಟ್ಟಿಲ್ಲೇರಿದ್ದು, ಗಂಡ ಹಾಗೂ ಮಕ್ಕಳನ್ನು ಹುಡುಕಿಕೊಡಿ ಎಂದು ರೇಖಾ ಅಂಗಲಾಚಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣೆ ಪೊಲೀಸರು ಸತೀಶ್​​ ನಿಗಾಗಿ ಹುಡುಕಾಟ ನಡೆಸಿದ್ದಾರೆ.