ಮನೆ ಅಪರಾಧ ಪತಿ-ಪತ್ನಿ ಜಗಳ: ಬಾವಿಗೆ ಹಾರಿದ ಪತಿ ರಕ್ಷಣೆಗೆ ಹೋದ ನಾಲ್ವರು ಸೇರಿ 5 ಮಂದಿ ಸಾವು

ಪತಿ-ಪತ್ನಿ ಜಗಳ: ಬಾವಿಗೆ ಹಾರಿದ ಪತಿ ರಕ್ಷಣೆಗೆ ಹೋದ ನಾಲ್ವರು ಸೇರಿ 5 ಮಂದಿ ಸಾವು

0

ಹಜಾರಿಬಾಗ್: ಗಂಡ ಹೆಂಡತಿ ನಡುವೆ ನಡೆದ ಜಗಳದಲ್ಲಿ ಕೋಪಗೊಂಡ ಗಂಡ ಬಾವಿಗೆ ಹಾರಿದ್ದು ಈ ವೇಳೆ ಆತನ ರಕ್ಷೆಣೆಗೆಂದು ಬಾವಿಗಿಳಿದ ನಾಲ್ವರು ಸೇರಿ ಒಟ್ಟು ಐದು ಮಂದಿ ಮೃತಪಟ್ಟಿರುವ ದಾರುಣ ಘಟನೆಯೊಂದು ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

Join Our Whatsapp Group

ಮೃತರನ್ನು ಸುಂದರ್ ಕರ್ಮಾಲಿ, ರಾಹುಲ್ ಕರ್ಮಾಲಿ, ವಿನಯ್ ಕರ್ಮಾಲಿ, ಪಂಕಜ್ ಕರ್ಮಾಲಿ ಮತ್ತು ಸೂರಜ್ ಭುಯಾನ್ ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ:

ಸುಂದರ್ ಕರ್ಮಾಲಿ ಹಾಗೂ ಪತ್ನಿ ರೂಪಾ ದೇವಿ ಅದ್ಯಾವುದೋ ವಿಚಾರಕ್ಕೆ ಹೊಸ ವರ್ಷದ ಮೊದಲ ದಿನ(ಜ.1) ಜಗಳವಾಡಿಕೊಂಡಿದ್ದಾರೆ ಅದ್ಯಾಕೋ ಜಗಳ ವಿಪರೀತ ಹಂತಕ್ಕೆ ತಲುಪಿದೆ ಈ ವೇಳೆ ಪತಿ ಸುಂದರ್ ತನ್ನ ಬೈಕನ್ನು ಬಾವಿಗೆ ದೂಡಿದ್ದಾನೆ ಇದಾದ ಸ್ವಲ್ಪ ಸಮಯದ ನಂತರ ತನ್ನ ತಪ್ಪಿನ ಅರಿವಾಗಿ ಬಾವಿಗೆ ದೂಡಿದ ಬೈಕನ್ನು ಮೇಲಕ್ಕೆ ತೆಗೆಯಲು ಬಾವಿಗೆ ಇಳಿದಿದ್ದಾನೆ. ಈ ವೇಳೆ ಸುಂದರ್ ಅಸ್ವಸ್ಥಗೊಂಡಿದ್ದಾನೆ ಇದನ್ನು ಕಂಡ ಪತ್ನಿ ರೂಪ ತನ್ನ ಗಂಡನನ್ನು ರಕ್ಷಣೆ ಮಾಡುವಂತೆ ಬೊಬ್ಬೆ ಹೊಡೆದಿದ್ದಾಳೆ ಮಹಿಳೆಯ ಬೊಬ್ಬೆ ಕೇಳಿ ನೆರೆಮನೆಯ ನಾಲ್ವರು ಯುವಕರು ಬಾವಿಗೆ ಬಿದ್ದ ಮಹಿಳೆಯ ಪತಿಯ ರಕ್ಷಣೆಗೆ ಮುಂದಾಗಿ ಒಬ್ಬರ ಹಿಂದೆ ಒಬ್ಬರಂತೆ ಬಾವಿಗೆ ಇಳಿದಿದ್ದಾರೆ, ಹೀಗೆ ಬಾವಿಗೆ ಇಳಿದ ಎಲ್ಲರೂ ಅಸ್ವಸ್ಥಗೊಂಡು ಬಾವಿಯಲ್ಲೇ ಪ್ರಾಣ ಬಿಟ್ಟಿದ್ದಾರೆ.

ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರು ಅಗ್ನಿಶಾಮಕ ಸಿಬಂದಿ ಜೊತೆ ಘಟನಾ ಸ್ಥಳಕ್ಕೆ ಧಾವಿಸಿ ಬಾವಿಯಲ್ಲಿ ಅಸ್ವಸ್ಥಗೊಂಡ ಐವರನ್ನೂ ಮೇಲಕ್ಕೆ ಎತ್ತಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ಐವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.