ಮನೆ ರಾಜ್ಯ ಸಚಿವ ಸಂಪುಟ ಪುನಾರಚನೆ ವಿಷಯ ನನಗೆ ಗೊತ್ತಿಲ್ಲ: ಜಮೀರ್ ಅಹ್ಮದ್ ಖಾನ್

ಸಚಿವ ಸಂಪುಟ ಪುನಾರಚನೆ ವಿಷಯ ನನಗೆ ಗೊತ್ತಿಲ್ಲ: ಜಮೀರ್ ಅಹ್ಮದ್ ಖಾನ್

0

ಹುಬ್ಬಳ್ಳಿ: ಸಿಎಂ, ಡಿಸಿಎಂ ದೆಹಲಿಗೆ ಹೋಗಿದ್ದು ಸಿಡಬ್ಲ್ಯೂಸಿ ಮೀಟಿಂಗ್​ಗೆ, ಸಚಿವ ಸಂಪುಟ ಪುನಾರಚನೆಗೆ ಹೋಗಿದ್ದಲ್ಲ ಎಂದು ಸಚಿವ ಜಮೀರ್​ ಅಹಮ್ಮದ್ ಖಾನ್ ಹೇಳಿದರು.

Join Our Whatsapp Group

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, “ಸಚಿವ ಸಂಪುಟ ಪುನಾರಚನೆ ವಿಷಯ ನನಗೆ ಗೊತ್ತಿಲ್ಲ. ಆ ರೀತಿಯ ಯಾವ ಚರ್ಚೆಗಳೂ ನಡೆದಿಲ್ಲ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ ಅದನ್ನು ತೀರ್ಮಾನ ಮಾಡಬೇಕು ಎಂದರು.

ದೇಶದ ಪ್ರತಿಯೊಬ್ಬ ನಾಗರಿಕನಿಗೆ ಮತದಾನದ ಹಕ್ಕು ಕೊಟ್ಟಿದ್ದು ಸಂವಿಧಾನ. ಚಂದ್ರಶೇಖರ್​ ಗುರೂಜಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಸ್ವಾಮೀಜಿ ದೊಡ್ಡವರು, ಅವರ ಬಗ್ಗೆ ಮಾತನಾಡಲಿಕ್ಕೆ ಇಷ್ಟ ಪಡುವುದಿಲ್ಲ ಎಂದು ಅವರು ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆ ಆಗಬೇಕು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಿಯೇ ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿದ್ದು. ಈ ನಿಟ್ಟಿನಲ್ಲಿ ಜನರ ಜ್ವಲಂತ ಸಮಸ್ಯೆಗಳ ಚರ್ಚೆ ಮಾಡುತ್ತೇವೆ. ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಹೆಸ್ಕಾಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ. ಅದಕ್ಕಾಗಿ ನಾವು ಹುಬ್ಬಳ್ಳಿಗೆ ಬಂದಿದ್ದೇನೆ ಎಂದು ಸಚಿವರು ಮಾಹಿತಿ ನೀಡಿದರು.