ಮನೆ ಕ್ರೀಡೆ ಕಾಮನ್‌ವೆಲ್ತ್ ಗೇಮ್ಸ್‌ ತರಬೇತಿಗಾಗಿ ಟರ್ಕಿಗೆ  ಚಿನ್ನದ ಹುಡುಗ ‘ನೀರಜ್ ಛೋಪ್ರಾ’

ಕಾಮನ್‌ವೆಲ್ತ್ ಗೇಮ್ಸ್‌ ತರಬೇತಿಗಾಗಿ ಟರ್ಕಿಗೆ  ಚಿನ್ನದ ಹುಡುಗ ‘ನೀರಜ್ ಛೋಪ್ರಾ’

0

ನವದೆಹಲಿ : ಒಲಂಪಿಕ್ ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ಪ್ರಸ್ತುತ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದು,  ಒರೆಗಾನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಮತ್ತು ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ಗೆ ತಯಾರಾಗಲು 44 ದಿನಗಳ ತರಬೇತಿ ಶಿಬಿರಕ್ಕಾಗಿ ಟರ್ಕಿಗೆ ತೆರಳಲಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನ ಒರೆಗಾನ್‌ನಲ್ಲಿ ತರಬೇತಿ ಪಡೆದ ನಂತರ ಚೋಪ್ರಾ ಮಾರ್ಚ್ ಮೊದಲ ವಾರದಲ್ಲಿ ಭಾರತಕ್ಕೆ ಮರಳಿದ್ದರು. ಅವರು ಈಗ ತಮ್ಮ ತರಬೇತುದಾರ ಡಾ. ಕ್ಲಾಸ್ ಬಾರ್ಟೋನಿಟ್ಜ್ ಮತ್ತು ಫಿಸಿಯೋಥೆರಪಿಸ್ಟ್ ಇಶಾನ್ ಮರ್ವಾಹಾ ಅವರೊಂದಿಗೆ ಮಾ. 28ರಿಂದ ಮೇ 11ರವರೆಗೆ ಟರ್ಕಿಯ ಅಂಟಲ್ಯದಲ್ಲಿರುವ ಗ್ಲೋರಿಯಾ ಸ್ಪೋರ್ಟ್ಸ್ ಅರೆನಾದಲ್ಲಿ ತರಬೇತಿ ಪಡೆಯಲಿದ್ದಾರೆ. ಹಾಗಾಗಿ, ಅವರು ಈ ತಿಂಗಳ ಕೊನೆಯಲ್ಲಿ ಟರ್ಕಿಗೆ ಪ್ರಯಾಣ ಬೆಳೆಸಲಿದ್ದಾರೆ.

ಇನ್ನು 25-30 ಇತರ ಕ್ರೀಡಾಪಟುಗಳೊಂದಿಗೆ ಜೂನ್ 18ರಿಂದ ಜುಲೈ 13ರವರೆಗೆ ಒರೆಗಾನ್ (ಯುಎಸ್‌ಎ) ಚುಲಾ ವಿಸ್ಟಾದಲ್ಲಿ ತರಬೇತಿ ಶಿಬಿರಕ್ಕೆ ನೀರಜ್ ಅವರ ಹೆಸರನ್ನು ಸೇರಿಸಲಾಗಿದೆ.

INR 22,38,394 ಅಂದಾಜು ವೆಚ್ಚದೊಂದಿಗೆ ತರಬೇತಿ ಸೌಲಭ್ಯ, ವಿಮಾನ ಟಿಕೆಟ್‌, ಹೋಟೆಲ್ ವಸತಿ, ವಿಮಾನ ಟಿಕೆಟ್‌ ಇತರ ನಿಬಂಧನೆಗಳ ಜತೆಗೆ ಇತರ ವೆಚ್ಚಗಳನ್ನು ಸಂಪೂರ್ಣವಾಗಿ ಸರ್ಕಾರ ಭರಿಸುತ್ತದೆ. USD 50 ದಿನದ ಪಾಕೆಟ್ ಭತ್ಯೆಯನ್ನು ನೇರವಾಗಿ ಕ್ರೀಡಾಪಟುವಿನ ಖಾತೆಗೆ ಜಮಾ ಮಾಡಲಾಗುತ್ತದೆ. ಕ್ರೀಡಾಪಟು ಅವರ ತರಬೇತುದಾರರೊಂದಿಗೆ ಇರುತ್ತಾರೆ. ಅವರು ಸರ್ಕಾರದಿಂದ ಧನ ಸಹಾಯವನ್ನು ಪಡೆಯುತ್ತಾರೆ.